ಬೀದರ್ : ಹಿಂದೂ ಅನ್ನುವುದು ಧರ್ಮವೇ ಅಲ್ಲ, ಅದು ಪರ್ಷಿಯನ್ ಪದ, ಅದರ ಅರ್ಥ ಬೈಗುಳ ಇದೆ. ಬ್ರಾಹ್ಮಣರು ಅವರ ಬುದ್ಧಿಯಿಂದ ನಮ್ಮನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಅಂತಾ ಸೃಷ್ಟಿಸಿದ್ದಾರೆ. RSS ಹಾಗೂ ಬ್ರಾಹ್ಮಣರ ವಿರುದ್ಧ ಮಾತನಾಡಲು ಭಯಪಡಬೇಡಿ ಎಂದು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಬಿ.ಜಿ ಕೋಲ್ಸೆ ಪಾಟೀಲ್ ಹೇಳಿಕೆ ನೀಡಿದರು.
ಸಲೀಂ ಅಹ್ಮದ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಮಾತನಾಡಿದ ಬಿ.ಜಿ ಕೋಲ್ಸೆ ಪಾಟೀಲ್, ಹಿಂದೂ ಅನ್ನೋದು ಬ್ರಾಹ್ಮಣರ ಧರ್ಮವಾಗಿದೆ. ಪರಕೀಯರು ನೀಡಿದ ಬೈಗುಳವೇ ಹಿಂದೂ. ಈ ಪದದ ಅರ್ಥವನ್ನು ತಿಳಿಸುವ ಕೆಲಸವನ್ನು ಮಾಡಲಾಗುತ್ತಿಲ್ಲ. ಬ್ರಾಹ್ಮಣರು ತಮ್ಮ ಬುದ್ಧಿವಂತಿಕೆಯಿಂದ ನಮ್ಮೆಲ್ಲರನ್ನು ಗುಲಾಮರನ್ನಾಗಿ ಮಾಡಲಾಯ್ತು. ಈ ಎಲ್ಲಾ ಸಂತರು, ಮೌಲ್ವಿಗಳು ಇದನ್ನು ತಿಳಿಸುವ ಕೆಲಸ ಮಾಡಬೇಕಿದೆ. ಹಿಂದೂ ಅರ್ಥ ತಿಳಿಸುವ ಕೆಲಸ ಮಾಡಲು ಇನ್ನು ಸಮಯವಿದೆ.
ಸಿಖ್ ಸೇರಿದಂತೆ ಎಲ್ಲಾ ದಂಗೆಯ ಮೂಲ ಕಾರಣ ಆರ್‌ಎಸ್‌ಎಸ್. ಅವರೊಬ್ಬ ನಾಯಕ ಇಂದಿರಾ ಗಾಂಧಿ ಅವರನ್ನು ದುರ್ಗಾ ಎಂದು ಕರೆದ್ರು. ಆರ್‌ಎಸ್‌ಎಸ್ ಅವರೇ ಈ ದಂಗೆಗಳನ್ನು ಆರಂಭಿಸಿದರು. ಆದ್ರೆ ಇದೆಲ್ಲದರ ಆರೋಪ ಕಾಂಗ್ರೆಸ್ ಅವರ ಮೇಲೆ ಬಂದಿದ್ದು ತುಂಬಾ ತಪ್ಪು. ಹಾಗಾಗಿ ಇತಿಹಾಸವನ್ನು ಎಲ್ಲರೂ ಓದಬೇಕು ಎಂದು ಬಿ.ಜಿ ಕೋಲ್ಸೆ ಪಾಟೀಲ್ ಹೇಳಿದರು.








