ವಿಜಯಪುರ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ಸಿಲುಕಿರುವ ಬಾಲಕನ ರಕ್ಷಣಾ ಕಾರ್ಯಾಚರಣೆ ಇದೀಗ ಬರದಿಂದ ಸಾಗುತ್ತಿದ್ದು ಇನ್ನೇನು ಮಗುವಿನ ರಕ್ಷಣೆ ಕಾರ್ಯಾಚರಣೆ ಅಂತಿಮ ಅಂತ ತಲುಪಿದ್ದು, ಕೆಲವೇ ಕ್ಷಣಗಳಲ್ಲಿ ಬಾಲಕ ಸಾತ್ವಿಕ್ನನ್ನು ರಕ್ಷಣೆ ಮಾಡಲಾಗುತ್ತದೆ.
ಸತತ 15 ಗಂಟೆಗಳ ವರೆಗೆ ಮಗುವಿನ ರಕ್ಷಣೆಗಾಗಿ ಸಡಿಆರ್ಎಫ್ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಇದೀಗ ಎನ್ಆರ್ ಕೂಡ ಪ್ರಯತ್ನಿಸುತ್ತಿದ್ದು ಕೆಲವೇ ಕ್ಷಣಗಳಲ್ಲಿ ಮಗುವನ್ನು ರಕ್ಷಣೆ ಮಾಡಲಾಗುತ್ತದೆ ಈ ವೇಳೆ ರಕ್ಷಣಾ ಸಿಬ್ಬಂದಿ ಒಬ್ಬರು ಮಾತನಾಡಿ ಮಗುವಿನ ಅಳುತ್ತಿರುವ ಶಬ್ದ ಕೇಳಿಸುತ್ತಿದೆ ಆದರೆ ಮಗುವಿಗೆ ಯಾವುದೇ ರೀತಿಯಾದ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.
ಮಗುವಿನ ಅಳುತ್ತಿರುವ ಶಬ್ದ ಕೇಳಿ ನಮಗೆ ಧೈರ್ಯ ಬಂದಿದೆ ಹಾಗಾಗಿ ಇನ್ನೂ ಕೇವಲ ಅರ್ಧ ಗಂಟೆಯಲ್ಲಿ ಕಾರ್ಯಾಚರಣೆ ಸಂಪೂರ್ಣ ವಾಗುತ್ತದೆ ಮಗುವನ್ನು ರಕ್ಷಿಸಿ, ರಕ್ಷಿಸುತ್ತೇವೆ ಎಂದು ಸಿಬ್ಬಂದಿ ಒಬ್ಬರು ಮಾಧ್ಯಮ ಒಂದಕ್ಕೆ ಮಾಹಿತಿ ನೀಡಿದರು.