ವಾರಂಗಲ್ (ತೆಲಂಗಾಣ): 8 ವರ್ಷದ ಬಾಲಕನೊಬ್ಬ ಶಸ್ತ್ರಚಿಕಿತ್ಸೆ ವೇಳೆ ಅನಸ್ತೇಶಿಯಾ ನೀಡುವಾಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವಾರಂಗಲ್ನ ಎಂಜಿಎಂ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.
ವಾರಂಗಲ್ ಜಿಲ್ಲೆಯ ಲಿಂಗಯ್ಯ ತಾಂಡಾದ ಭೂಕ್ಯ ಶಿವ ಮತ್ತು ಲಲಿತಾ ದಂಪತಿಯ ಕಿರಿಯ ಪುತ್ರ ನಿಹಾನ್ ಸೆ.4ರಂದು ಅಪಘಾತದಲ್ಲಿ ಬಲಗೈ ಮುರಿದಿತ್ತು. ಅದೇ ದಿನ ಬಾಲಕನನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿನಿಗೆ ಮಂಗಳವಾರ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿ ಬೆಳಗ್ಗೆ 10.30ಕ್ಕೆ ಬಾಲಕನನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದು ಅರಿವಳಿಕೆ(ಅನಸ್ತೇಶಿಯಾ) ನೀಡುವಾಗ ಬಾಲಕನಿಗೆ ಹೃದಯಾಘಾತವಾಗಿದೆ. ಕೂಡಲೇ ಬಾಲಕನನ್ನು RICU ವಾರ್ಡ್ಗೆ ಶಿಫ್ಟ್ ಮಾಡಿ ಕೃತಕ ಉಸಿರಾಟ ಯಂತ್ರದ ಮೂಲಕ ಆತನನ್ನು ಉಳಿಸಲು ವೈದ್ಯರು ಪ್ರಯತ್ನಿಸಿದರು. ಆದ್ರೆ, ಯಾವುದೇ ಪ್ರಯೋಜನವಾಗಿಲ್ಲ. ಮಧ್ಯಾಹ್ನ 1.10ರ ಸುಮಾರಿಗೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಬಾಲಕನ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದು, ಬಾಲಕ ಸಾವನ್ನಪ್ಪಿ ಸುಮಾರು ಮೂರು ಗಂಟೆ ಕಳೆದರೂ ವೈದ್ಯರು ಯಾವುದೇ ಮಾಹಿತಿ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಬಾಲಕನ ಸಾವಿಗೆ ಕಾರಣ ಕುರಿತು ತನಿಖೆ ನಡೆಸಲು ಹಿರಿಯ ವೈದ್ಯರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ಚಂದ್ರಶೇಖರ್ ತಿಳಿಸಿದ್ದಾರೆ. ಘಟನೆಯ ಕುರಿತು ವರದಿ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ.ರಮೇಶ್ ರೆಡ್ಡಿ ಎಂಜಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿಗೆಂದು ಬಂದು ವಾಪಸ್ ಹೋದ ಬಾಲಿವುಡ್ ದಂಪತಿ… ಕಾರಣ ಇಲ್ಲಿದೆ?
BIGG BREAKING NEWS: ದೆಹಲಿಯಲ್ಲಿ ಮುಂದಿನ ವರ್ಷ ಜನವರಿ1 ರವರೆಗೆ ಪಟಾಕಿ ನಿಷೇಧ; ಕೇಂದ್ರ ಸರ್ಕಾರದಿಂದ ಆದೇಶ