ಬಳ್ಳಾರಿ: ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದ 8 ವರ್ಷದ ನಿಖಿಲ್ ಎಂಬ ಬಾಲಕ ಬೆಳಗ್ಗೆ 10 ಗಂಟೆ ಸುಮಾರಿಗೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಚರ್ಚೆ ಜೋರಾಗಿ ನಡೆಯುತ್ತಿದೆ. ನನ್ನ ಮಗನಿಗೆ ಉಸಿರಾಟದ ತೊಂದರೆ ಇತ್ತು. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಕೊಡಸಲಾಗುತ್ತಿತ್ತು. ಆದರೆ ಕರೆಂಟ್ ಇಲ್ಲದ ಕಾರಣ ವೆಂಟಿಲೇಟರ್ ಕೊಡಲು ಸಾಧ್ಯವಾಗಿಲ್ಲ.
BIGG NEWS: ಇಂದು ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ; ಡಿ.ಕೆ ಶಿವಕುಮಾರ್ ಮುಂದುವರಿಕೆ ಬಹುತೇಕ ಖಚಿತ
ಈ ಬಗ್ಗೆ ನಾವು ವಿಮ್ಸ್ ಸಿಬ್ಬಂದಿಗೂ ವಿಚಾರಿಸಿದ್ದೇವು. ನನ್ನ ಮಗ ಬುದುಕಿಲ್ಲ ಅಂತಾ ಬೆಳಗ್ಗೆ 10 ಗಂಟೆ ಹೇಳಿದ್ದರು ಎಂದು ಬಾಲಕ ತಂದೆ ಮಹೇಶ್ ಆರೋಪಿಸಿದ್ದಾರೆ.
ನನ್ನ ಮಗನನ್ನು ಐಸಿಯುದಲ್ಲಿ ಅಡ್ಮಿಟ್ ಮಾಡಿದ್ದೆವು. ವೆಂಟಿಲೇಟರ್ ಮೇಲಿದ್ದ. ಆದರೆ ನಿನ್ನೆ ಬೆಳಿಗ್ಗೆ ಕರೆಂಟ್ ಹೋದಾಗ ಮಶೀನ್ಗಳೆಲ್ಲ ಬಂದ್ ಆದವು. ಯಾಕೆ ಹೀಗೆ ಎಂದು ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದೆವು. ಕರೆಂಟ್ ಹೋಗಿದೆ ಎಂದರು.
BIGG NEWS: ಇಂದು ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ; ಡಿ.ಕೆ ಶಿವಕುಮಾರ್ ಮುಂದುವರಿಕೆ ಬಹುತೇಕ ಖಚಿತ
ಕೆಲವೇ ಕ್ಷಣಗಳಲ್ಲಿ ನನ್ನ ಮಗ ಸತ್ತು ಹೋದ” ಎಂದು ತಾಯಿ ಈರಮ್ಮ ಹೇಳಿದರು.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಮ್ಸ್ ನಿರ್ದೇಶಕ ಡಾ. ಗಂಗಾಧರ್ ಗೌಡ, ಕರೆಂಟ್ ಸಮಸ್ಯೆಗೂ ಬಾಲಕ ನಿಖಿಲ್ ಸಾವಿಗೂ ಸಂಬಂಧವಿಲ್ಲ. ಬಾಲಕ ನಿಖಿಲ್ ಡೆಂಗ್ಯೂನಿಂದ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.