ಬಿಜ್ನೋರ್ (ಯುಪಿ): ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಕ್ಕಾಗಿ ಅತ್ತೆ, ಮಾವ, ಗಂಡನಿಂದ ಕಿರುಕುಳ ತಾಳಲಾರದೇ ಭಾರತೀಯ ಮಹಿಳೆಯೊಬ್ಬರು ಅಮೇರಿಕಾದಲ್ಲಿ ಆತ್ಮಹತ್ಯೆಗೆ ಶಾರಣಾಗಿರುವ ಘಟನೆ ನಡೆದಿದೆ.
ಸಾಯುವ ಮುನ್ನ ತಾನು ಅನುಭವಿಸಿದ ಕಷ್ಟವನ್ನು ವಿಡಿಯೋದಲ್ಲಿ ಹೇಳಿಕೊಂಡಿದ್ದು, ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದರಲ್ಲಿ ʻಕಳೆದ ಎಂಟು ವರ್ಷಗಳಿಂದ ಪ್ರತೀ ದಿನ ಈ ಕಿರುಕುಳವನ್ನು ಅನುಭವಿಸುತ್ತಿದ್ದೇನೆ. ಇನ್ನು ಮುಂದೆ ಈ ಕಷ್ಟವನ್ನು ಅನುಭವಿಸಲು ನನ್ನಿಂದ ಸಾಧ್ಯವಿಲ್ಲ. ಅಪ್ಪಾ ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಸಾಯಲಿದ್ದೇನೆʼ ಎಂದು ರೋಧಿಸುತ್ತಿರುವುದನ್ನು ನೋಡಬಹುದು.
A Punjabi woman from New York committed suicide after facing extreme domestic violence from her husband for 8 years. It is really depressing and sad. I request @IndianEmbassyUS and @NYPDChiefOfDept to take action. #JusticeforMandeep pic.twitter.com/U6BleAEF2i
— Swati Maliwal (@SwatiJaiHind) August 6, 2022
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಮಂದೀಪ್ ಕೌರ್ 2015ರಲ್ಲಿ ರಂಜೋದ್ಬೀರ್ ಸಿಂಗ್ ಸಂಧು ಎಂಬುವರನ್ನು ಮದುವೆಯಾದರು. ನಂತ್ರ, ಇವರು ನ್ಯೂಯಾರ್ಕ್ನಲ್ಲಿ ನೆಲೆಸಿದ್ದರು. ಮಂದೀಪ್ಗೆ 6 ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಕ್ಕಳು ಹೆಣ್ಣಾಗಿ ಹುಟ್ಟಿದ್ದಾರೆ ಎಂಬ ಕಾರಣಕ್ಕೆ ಗಂಡ ದಿನನಿತ್ಯ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಮಂದೀಪ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಆಗಸ್ಟ್ 4ರಂದು ಮಂದೀಪ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಷಯ ತಿಳಿದ ಮಂದೀಪ್ ತಂದೆ ಜಸ್ಪಾಲ್ ಸಿಂಗ್ ಅವರು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದಾರೆ. ಮದುವೆಯಾದಾಗಿನಿಂದ ಮಗಳ ಮೇಲೆ ದೌರ್ಜನ್ಯ ನಡೆಯುತ್ತಿತ್ತು ಎಂದು ಕುಟುಂಬ ಹೇಳಿದೆ.
ಇದೀಗ, ಕುಟುಂಬ ತಮ್ಮ ಮಗಳ ಮೃತದೇಹವನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ನ್ಯೂಯಾರ್ಕ್ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ʻನಾವು ಯುಎಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ನಾವು ನಿಮಗೆ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧರಾಗಿದ್ದೇವೆʼ ಎಂದಿದ್ದಾರೆ.
BIGG NEWS : ರಾಜ್ಯದಲ್ಲಿ ವರುಣಾರ್ಭಟ : ನೆರೆಪೀಡಿತ 21 ಜಿಲ್ಲೆಗಳಿಗೆ 200 ಕೋಟಿ ರೂ. ಅನುದಾನ ಬಿಡುಗಡೆ
BIGG NEWS : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ