ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಚಾಮರಾಜನಗರ: ಪಟ್ಟಣದಲ್ಲಿ ದಿನೆ ದಿನೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ.ಈ ಬೆನ್ನ ಹಿಂದೆಯೆ ಅಪ್ರಾಪ್ತರಿಂದ ವಾಹನ ಚಾಲನೆ ಕೂಡ ಹೆಚ್ಚುತ್ತಿದೆ. ಅದರಲ್ಲೂ ಹೆಲ್ಮೆಟ್ ರಹಿತ ಚಾಲನೆ ಹೇಳತೀರದಂತಾಗಿದೆ. ಚಾಮರಾಜನಗರ ಪೊಲೀಸ್ ವರೀಷ್ಟಾದಿಕಾರಿಗಳು ಈಗಾಗಲೇ ಆದೇಶ ಹೊರಡಿಸಿದ್ದು ಕರ್ತವ್ಯ ಅವದಿಯಲ್ಲಿ ಹಾಗೂ ಖಾಸಗೀ ಅವದಿಯಲ್ಲೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು.ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಇಲಾಖಾವಾರು ನಿಯಮ ತೆಗೆದುಕೊಳ್ಳಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.
ದೀಪದ ಕೆಳಗೆ ಕತ್ತಲು ಎಂಬಂತೆ ಎಸ್ಪಿ ಕಚೇರಿ ಸಿಬ್ಬಂದಿಗಳು ,ಡಿವೈಸ್ಪಿ ಕಚೇರಿ ಸಿಬ್ಬಂದಿಗಳು, ಸಶಸ್ತ್ರ ಮೀಸಲು ಪಡೆಯ ಕೆಲವು ಸಿಬ್ಬಂದಿಗಳು ಎಗ್ಗಿಲ್ಲದೆ ನಿಯಮ ರಾಜಾರೋಷವಾಗಿ ಉಲ್ಲಂಘಿಸುತ್ತಿದ್ದು ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.
ನಿಯಮ ಪಾಲಿಸಬೇಕಾದ ಪೊಲೀಸ್ ಸಿಬ್ಬಂದಿಗಳೆ ಪಾಲಿಸದಿರುವುದು ವಿಪರ್ಯಾಸ : ಕಾನೂನು ಅರಿತವರಿಂದಲೆ ತಲೆ ಮೇಲೆ ಹಾಕಬೇಕಾದ ಹೆಲ್ಮೆಟ್ ಮಿರರ್ ಗೆ ಸಿಲುಕಿಸೋದು, ಪೆಟ್ರೊಲ್ ಟ್ಯಾಂಕ್ ಮೇಲೆ ಇಟ್ಟುಕೊಂಡು ಹೋಗೊದು ಶೋಚನೀಯವಾಗಿದೆ . ಚಾಮರಾಜನಗರ ಪಟ್ಟಣದಲ್ಲಿ ಪಾರ್ಕಿಂಗ್ ಅವ್ಯವಸ್ಥೆ, ಶಾಲಾ ಮಕ್ಕಳಿಂದ ವಾಹನ ಚಾಲನೆ, ಅತಿ ಹೆಚ್ಚು ಹೆಲ್ಮೆಟ್ ರಹಿತ ವಾಹನ ಚಾಲನೆ ಯಥೇಚ್ಚವಾಗಿದೆ. ತಿಂಗಳಿಗೆ ಎರಡು -ಮೂರು ದಿನವಾದರೂ ಸ್ಪೇಷಲ್ ಡ್ರೈವ್ ಪ್ರಕರಣ ದಾಖಲಿಸುತ್ತಾ ಹೋದರೆ ಸ್ವಲ್ಪಮಟ್ಟಿಗೆ ಚೇತರಿಕೆ ಕಾಣಬಹುದು ಎಂಬುದು ಸಾರ್ವಜನಿಕರ ಅಬಿಪ್ರಾಯವಾದರೆ ,ನಿಯಮ ಉಲ್ಲಂಘನೆ ಮಾಡಿದ ವಾಹನ ಹಿಡಿದಾಗ ಪೊಲೀಸರಿಂದಲೇ ವಾಹನ ಬಿಡುಗಡೆಗೆ ಹೆಚ್ಚು ಕರೆ ಮಾಡಿಸಿ ಬಿಡಿಸಿಕೊಂಡು ಹೋಗುತ್ತಾರೆ ಎಂಬ ಆರೋಪವನ್ನ ತಳ್ಳಿ ಹಾಕುವಂತಿಲ್ಲ.
ಪೊಲೀಸರಷ್ಟೆ ಪೋಷಕರದ್ದು ಜವಬ್ದಾರಿ: ಹೆಲ್ಮೆಟ್ ಇಲ್ಲದೆ ವಾಹನ ಓಡಿಸುವುದು ತಪ್ಪು, ಮಕ್ಕಳು ಅಪ್ರಾಪ್ತರಾಗಿದ್ದರೂ ವಾಹನ ಚಾಲನೆ ಮಾಡಿಸೊದು ತಪ್ಪು ಎಂದು ತಿಳಿದಿದ್ದರೂ ಪೋಷಕರು ಮಾತ್ರ ಕಾನೂನಿನ ಅರಿವಿನ ಕೊರತೆ ಇದೆ. ಜಿಲ್ಲೇಲಿ ಇಷ್ಟು ಅಪ್ರಾಪ್ತ ಮಕ್ಕಳಿಂದ ವಾಹನ ಚಾಲನೆ ಮಾಡುತ್ತಿದ್ದರೂ ಯಾವ್ದೆ ಪ್ರಕರಣ ನ್ಯಾಯಾಲಯಕ್ಕೆ ಹಸ್ತಾಂತರಿಸದೆ ರಾಜೀ ಮಾಡಿಕೊಂಡು ಕೈ ಬಿಡುತ್ತಿರುವುದೆ ಸಾಕ್ಷಿಯಾಗಿದೆ. ಅನ್ಯ ಜಿಲ್ಲೆಯೊಂದರಲ್ಲಿ ನ್ಯಾಯಾಲಯ ಅಪ್ರಾಪ್ತ ಮಕ್ಕಳ ವಾಹನ ಚಾಲನೆ ಮಾಡಿದ ತಪ್ಪಿದೆ ೨೫ ಸಾವಿರ ದಂಡ ಹಾಕಿದ ಸುದ್ದಿ ಪ್ರಚಲಿತವಾಗಿದೆ. ಹೀಗಿರುವಾಗ ಜಿಲ್ಲೇಲಿ ಇಂತಹ ಪ್ರಕರಣ ಪೊಲೀಸರು ಕಣ್ಣಿಗೆ ಕಂಡರೂ ಮೌನವಹಿಸಿದೆ. ದಂಡ ಹಾಕೊ ಪೊಲೀಸರು ಸರಿಯಾದ ಅರಿವು ಮೂಡಿಸದೆ ಇರೋದು.ಕಠಿಣ ಕ್ರಮ ಜರುಗಿಸದೆ ಇರೋದು ಇಂತಹ ಸನ್ನಿವೇಶಗಳಿಗೆ ಕಾರಣವಾಗಿದೆ.