ಬೆಂಗಳೂರು: ಕರ್ನಾಟಕ – ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಕುರಿತು ಮಾಜಿ ಪ್ರಧಾನಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ.
BIGG NEWS: ಬೆಂಗಳೂರು ಬನಶಂಕರಿ ಪೊಲೀಸರ ಭರ್ಜರಿ ಬೇಟೆ; ನಿಷೇಧಿತ ನೋಟುಗಳ ಚಲಾವಣೆಗೆ ಯತ್ನಿಸುತ್ತಿದ್ದ ಮೂವರ ಬಂಧನ
ಈ ವಿವಾದವು ಕರ್ನಾಟಕದ ಜನತೆಯ ಹಿತಾಸಕ್ತಿಯ ವಿರುದ್ಧ ರಾಷ್ಟ್ರೀಯ ಪಕ್ಷಗಳು ನಡೆಸುತ್ತಿರುವ ದಾಳಿಯ ಭಾಗವಾಗಿದೆ.ಇದು ಕನ್ನಡಿಗರಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ ಎಂದು ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ನಮ್ಮ ತೆರಿಗೆ ಸರಿಯಾದ ಪಾಲು ನಮಗೆ ಸಿಗಬೇಕಾದರೆ, ನಮ್ಮ ಮಕ್ಕಳಿಗೆ ಉದ್ಯೋಗ ಸಿಗಬೇಕಾದರೆ,
BIGG NEWS: ಬೆಂಗಳೂರು ಬನಶಂಕರಿ ಪೊಲೀಸರ ಭರ್ಜರಿ ಬೇಟೆ; ನಿಷೇಧಿತ ನೋಟುಗಳ ಚಲಾವಣೆಗೆ ಯತ್ನಿಸುತ್ತಿದ್ದ ಮೂವರ ಬಂಧನ
ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಹೊರಗಿನವರಿಂದ ರಕ್ಷಿಸಬೇಕಾದರೆ, ಗಡಿ ವಿವಾದ ಬಗೆಹರಿಯಬೇಕಾದರೆ, ಜೊತೆಗೆ ನಮ್ಮ ಅಸ್ಮಿತೆಯೊಂದಿಗೆ ರಾಜಿ ಮಾಡಿಕೊಳ್ಳದೆ ನಮ್ಮ ನೋವನ್ನು ನಮ್ಮವರೇ ಅರ್ಥಮಾಡಿಕೊಳ್ಳಬಲ್ಲರು ಎಂಬ ಸತ್ಯವನ್ನು ಅರಿತು ಕನ್ನಡ ಪ್ರಾದೇಶಿಕ ಪಕ್ಷವನ್ನು ಬಲಪಡಿಸಬೇಕು’’ ಎಂದು ಬಹಿರಂಗ ಪತ್ರದಲ್ಲಿ ಬರೆದಿದ್ದಾರೆ. ಈ ಸಂಕಷ್ಟದಿಂದ ಹೊರಬರಲು ಪ್ರಾದೇಶಿಕ ಪಕ್ಷಗಳನ್ನು ಬಲಪಡಿಸುವುದೊಂದೇ ದಾರಿ ಎಂದು ಹೇಳಿದ್ದಾರೆ.