ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ಕಾನ್ಸ್ ಟೇಬಲ್ ಬಾಲಿವುಡ್ ನ ಪ್ರಸಿದ್ಧ ಹಾಡು ಹಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಅವರ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಅಧಿಕೃತ ಖಾತೆಯಲ್ಲಿ ಕಾನ್ಸ್ ಟೇಬಲ್ ಹಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಕಾನ್ಸ್ಟೆಬಲ್ ವಿಕ್ರಮಜೀತ್ ಸಿಂಗ್ ಅವರು ಗಾಯಕ ರೂಪ್ ಕುಮಾರ್ ರಾಥೋಡ್ ಅವರು ಹಾಡಿರುವ ಹಿಟ್ ಹಾಡನ್ನು ಹಾಡುತ್ತಿದ್ದಾರೆ, ಅವರ ಸಹೋದ್ಯೋಗಿಗಳು ಕೇಳುತ್ತಿದ್ದಾರೆ.
1997 ರ ಬಾರ್ಡರ್ ಚಲನಚಿತ್ರದ ಎ ಜಾಥೇ ಹುಯೇ ಲಮಹೋ….ಎಂಬ ಹಾಡನ್ನು ಹಿಮ ವೀರ ಸಹೋದರರ ಕೋರಿಕೆಯ ಮೇರೆಗೆ ಕಾನ್ಸ್ ಟೇಬಲ್ ವಿಕ್ರಮಜೀತ್ ಸಿಂಗ್ ಅವರು ಹಾಡಿದ್ದಾರೆ.
ಬಾರ್ಡರ್, ಬಹುತಾರಾಗಣದ 1971 ರ ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯುಳ್ಳ ಸಿನಿಮಾ. ಬಾರ್ಡರ್ ಸಿನಿಮಾವನ್ನು ಜೆಪಿ ದತ್ತಾ ಬರೆದು, ನಿರ್ಮಿಸಿ ಮತ್ತು ನಿರ್ದೇಶಿಸಿದ್ದಾರೆ. ಅಂದು ಸಿನಿಮಾ ಮತ್ತು ಹಾಡು ಸಿನಿಮಾ ಪ್ರೇಮಿಗಳ ಮನಗೆದ್ದಿತ್ತು.