ಮೆಕ್ಸಿಕೊ ಸಿಟಿ: ಹೈಟಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಭಾನುವಾರ ಮುಂಜಾನೆ ಬಹಾಮಾಸ್ ಸಮುದ್ರದಲ್ಲಿ ಮುಳುಗಿದೆ. ಘಟನೆಯಲ್ಲಿ 15 ಮಹಿಳೆಯರು, ಮಗು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದಾರೆ. ಬಹಮಿಯನ್ ಭದ್ರತಾ ಪಡೆಗಳು ಮೃತದೇಹಗಳನ್ನು ವಶಪಡಿಸಿಕೊಂಡಿದ್ದು, 25 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂ ಪ್ರಾವಿಡೆನ್ಸ್ನಿಂದ ಸುಮಾರು ಏಳು ಮೈಲಿ ದೂರದಲ್ಲಿ ದೋಣಿ ಮುಳುಗಿದ ನಂತರ ಎಷ್ಟು ಮಂದಿ ಕಾಣೆಯಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃತರಲ್ಲಿ 15 ಮಹಿಳೆಯರು, ಮಗು ಸೇರಿದಂತ 17 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಿಸಲ್ಪಟ್ಟ ಜನರು ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಪ್ರಧಾನಿ ಫಿಲಿಪ್ ಬ್ರೇವ್ ಡೇವಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
60 ಜನರನ್ನು ಹೊತ್ತೊಯ್ಯುತ್ತಿದ್ದ ಅವಳಿ-ಎಂಜಿನ್ ವೇಗದ ದೋಣಿ ಬಹಾಮಾಸ್ನಿಂದ ಸುಮಾರು ರಾತ್ರಿ 1 ಗಂಟೆಗೆ ಹೊರಟಿತು. ಶಂಕಿತ ಮಾನವ ಕಳ್ಳಸಾಗಣೆ ಶಂಕೆ ಇದ್ದು, ತನಿಖೆ ಪ್ರಾರಂಭಿಸಲಾಗಿದೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸರ್ಕಾರ ಮತ್ತು ಬಹಾಮಾಸ್ ಜನರ ಸಂತಾಪವನ್ನು ತಿಳಿಸಲು ನಾನು ಬಯಸುತ್ತೇನೆ. ನನ್ನ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಈ ವಿಶ್ವಾಸಘಾತುಕ ಯಾತ್ರೆಗಳ ವಿರುದ್ಧ ಎಚ್ಚರಿಕೆ ನೀಡುತ್ತಿದೆ ಎಂದರು.
ಹೈಟಿಯು ಕೊಲೆಗಳು ಮತ್ತು ಅಪಹರಣ ಕೃತ್ಯಗಳ ತೀವ್ರ ಏರಿಕೆ ಸೇರಿದಂತೆ ಗ್ಯಾಂಗ್ ವಾರ್ಗಳೂ ನಡೆಯುತ್ತಿವೆ. ಉತ್ತಮ ಮತ್ತು ಸುರಕ್ಷಿತ ಜೀವನ ಸಾಗಿಸಲು 11 ಮಿಲಿಯನ್ಗಿಂತಲೂ ಹೆಚ್ಚು ದೇಶದಿಂದ ಪಲಾಯನ ಮಾಡಿದ್ದಾರೆ. ಈ ವರ್ಷ ಹೈಟಿ ವಲಸಿಗರನ್ನು ಒಳಗೊಂಡ ಹಲವಾರು ದೋಣಿ ದುರಂತಗಳು ಸಂಭವಿಸಿವೆ. ಇದರಲ್ಲಿ ಮೇ ತಿಂಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 38 ಮಂದಿಯನ್ನು ರಕ್ಷಿಸಲಾಗಿದೆ.
Shocking: ಬೈಸಿಕಲ್ಗೆ ಅಡ್ಡ ಬಂದ ಕಿವುಡ, ಹಾರ್ನ್ ಮಾಡಿದ್ರೂ ಪ್ರತಿಕ್ರಿಯಿಸದಕ್ಕೆ ಚಾಕುವಿನಿಂದ ಇರಿದು ಕೊಂದ ಬಾಲಕಿ
ನನ್ನ ಬಾಯಿ ಮುಚ್ಚಿಸೋಕೆ ಯಾರಿಂದಲೂ ಸಾಧ್ಯವಿಲ್ಲ: ಡಿಕೆಶಿಗೆ ಜಮೀರ್ ಸೆಡ್ಡು