Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಕರ್ನಾಟಕದಲ್ಲಿ 2 ವರ್ಷದಲ್ಲಿ 5,394 ರೈತರು ಆತ್ಮಹತ್ಯೆ: ಪ್ರಕರಣ ಮುಚ್ಚಿಟ್ಟು ರಾಜ್ಯ ಸರ್ಕಾರ ಜಾಣ್ಮೆ- HDK ಗಂಭೀರ ಆರೋಪ

GOOD NEWS: ಬೆಂಗಳೂರು-ತುಮಕೂರು ನಡುವೆ ಬಿಎಂಟಿಸಿ ‘ವೋಲ್ವೋ ವಜ್ರ ವಿಸ್ತಾರ’ ಎಸಿ ಬಸ್ ಸೇವೆ ಆರಂಭ | BMTC Bus

BIG BREAKING: ಹೈಕೋರ್ಟ್ ಆದೇಶಕ್ಕೆ ಮಣಿದ ಸಾರಿಗೆ ನೌಕರರು: ಮುಷ್ಕರ ವಾಪಸ್, ನಾಳೆ ಎಂದಿನಂತೆ ಬಸ್ ಸಂಚಾರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ಬೆಂಗಳೂರು-ತುಮಕೂರು ನಡುವೆ ಬಿಎಂಟಿಸಿ ‘ವೋಲ್ವೋ ವಜ್ರ ವಿಸ್ತಾರ’ ಎಸಿ ಬಸ್ ಸೇವೆ ಆರಂಭ | BMTC Bus
KARNATAKA

GOOD NEWS: ಬೆಂಗಳೂರು-ತುಮಕೂರು ನಡುವೆ ಬಿಎಂಟಿಸಿ ‘ವೋಲ್ವೋ ವಜ್ರ ವಿಸ್ತಾರ’ ಎಸಿ ಬಸ್ ಸೇವೆ ಆರಂಭ | BMTC Bus

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಬೆಂಗಳೂರು ನಗರ ಹಾಗೂ ಹೊರವಲಯದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಕಲ್ಪಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC), ಇದೀಗ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಿದೆ. ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಸ್ಥೆಯು ಬೆಂಗಳೂರು ಮತ್ತು ತುಮಕೂರು ನಡುವೆ ನೂತನ ವೋಲ್ವೋ ಹವಾನಿಯಂತ್ರಿತ (AC) ಬಸ್ ಸೇವೆಗಳನ್ನು ಪ್ರಾರಂಭಿಸಿದೆ.

ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸೇವೆ:

ಪ್ರಸ್ತುತ ಬಿಎಂಟಿಸಿ ಸಂಸ್ಥೆಯು 50 ಘಟಕಗಳಿಂದ ವಿವಿಧ ಮಾದರಿಯ ಬಸ್ಸುಗಳ ಮೂಲಕ ಪ್ರತಿದಿನ 6,275 ಅನುಸೂಚಿಗಳಿಂದ 65,952 ಸುತ್ತುವಳಿಗಳನ್ನು ಕಾರ್ಯಾಚರಿಸುತ್ತಿದೆ. ಪ್ರತಿದಿನ ಸುಮಾರು 13.06 ಲಕ್ಷ ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸುತ್ತಿದ್ದು, ಸರಾಸರಿ 45 ಲಕ್ಷ ಪ್ರಯಾಣಿಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇವುಗಳ ಪೈಕಿ 1,741 ಎಲೆಕ್ಟ್ರಿಕ್ ಬಸ್ಸುಗಳನ್ನು ಸಹ ಕಾರ್ಯಾಚರಣೆ ಮಾಡಲಾಗುತ್ತಿದೆ.

ಹೊರವಲಯದ ಸಾರಿಗೆ ಸಂಪರ್ಕ:

ಸಂಸ್ಥೆಯು ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ 145 ಅನುಸೂಚಿಗಳಿಂದ 1,332 ಸುತ್ತುವಳಿಗಳನ್ನು ಹಾಗೂ ಬಿಡದಿ ವ್ಯಾಪ್ತಿಯಲ್ಲಿ 136 ಅನುಸೂಚಿಗಳಿಂದ 1,163 ಸುತ್ತುವಳಿಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಇದರೊಂದಿಗೆ ಮಾಗಡಿ ವಲಯದಲ್ಲಿ 39 ಅನುಸೂಚಿಗಳಿಂದ 240 ಸುತ್ತುವಳಿಗಳು ಮತ್ತು ಸೋಲೂರು/ದಾಬಸಪೇಟೆ ವಲಯದಲ್ಲಿ 35 ಅನುಸೂಚಿಗಳಿಂದ 220 ಸುತ್ತುವಳಿಗಳನ್ನು ಈಗಾಗಲೇ ಯಶಸ್ವಿಯಾಗಿ ನಡೆಸಲಾಗುತ್ತಿದೆ.

ಅಲ್ಲದೆ, “ವಜ್ರ ವಿಸ್ತಾರ” ಯೋಜನೆಯಡಿ ಬೆಂಗಳೂರು ನಗರದಿಂದ ಚನ್ನಪಟ್ಟಣಕ್ಕೆ (ಮಾರ್ಗ ಸಂಖ್ಯೆ: V-EX-RMN-1) ಕೆಬಿಎಸ್‌ನಿಂದ 8 ಬಸ್ಸುಗಳ ಮೂಲಕ 44 ಸುತ್ತುವಳಿಗಳು ಹಾಗೂ ಬನಶಂಕರಿಯಿಂದ ಕನಕಪುರಕ್ಕೆ (ಮಾರ್ಗ ಸಂಖ್ಯೆ: V-EX-KNP-1) 8 ಬಸ್ಸುಗಳ ಮೂಲಕ 48 ಸುತ್ತುವಳಿಗಳನ್ನು ಕಾರ್ಯಾಚರಿಸಲಾಗುತ್ತಿದೆ.

ಬೆಂಗಳೂರು-ತುಮಕೂರು ನೂತನ ವೋಲ್ವೋ ಸೇವೆ:

ಪ್ರಯಾಣಿಕರ ಹೆಚ್ಚಿನ ಅನುಕೂಲಕ್ಕಾಗಿ ಇಂದಿನಿಂದ (ದಿನಾಂಕ: 19-05-2026) ಬೆಂಗಳೂರು ಮತ್ತು ತುಮಕೂರು ನಡುವೆ ಆರಂಭಿಕ ಹಂತವಾಗಿ 10 ಹವಾನಿಯಂತ್ರಿತ ವೋಲ್ವೋ ಬಸ್ಸುಗಳಿಂದ ಒಟ್ಟು 54 ಸುತ್ತುವಳಿಗಳನ್ನು ಪ್ರಾರಂಭಿಸಲಾಗಿದೆ. ಮಾರ್ಗ ಸಂಖ್ಯೆ V-EX-TMK-1 ರ ಅಡಿಯಲ್ಲಿ ಈ ಬಸ್ಸುಗಳು ಪ್ರತೀ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. ಈ ನೂತನ ಸೇವೆಯು ಪ್ರಯಾಣಿಕರಿಗೆ ಸುಗಮ, ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣದ ಅನುಭವ ನೀಡಲಿದ್ದು, ಎರಡು ನಗರಗಳ ನಡುವಿನ ಸಾರ್ವಜನಿಕ ಸಂಪರ್ಕವನ್ನು ಬಲಪಡಿಸಲಿದೆ.

ಮುಖ್ಯಮಂತ್ರಿಗಳಿಂದ ಉದ್ಘಾಟನೆ:

ಈ ನೂತನ ವೋಲ್ವೋ ಬಸ್ ಸೇವೆಯ ಉದ್ಘಾಟನೆಯನ್ನು ತುಮಕೂರಿನಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನೆರವೇರಿಸಿದ್ದಾರೆ.

ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷರಾದ ವಿ.ಎಸ್.ಆರಾಧ್ಯ, ಉಪಾಧ್ಯಕ್ಷರಾದ ಶ್ರೀ ನಿಕೇತ್ ರಾಜ್ ಮೌರ್ಯ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ. ಬಿ. ಶಿವಕುಮಾರ್ (ಭಾ.ಆ.ಸೇ.) ಉಪಸ್ಥಿತರಿದ್ದರು

ಬಸ್ ಸಂಚಾರ ಮತ್ತು ಟಿಕೆಟ್ ದರದ ವಿವರಗಳು

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (KBS) ತುಮಕೂರಿಗೆ ಸಂಚರಿಸುವ ವೋಲ್ವೋ ಬಸ್ಸುಗಳ ಒಟ್ಟಾರೆ ವಿವರ ಈ ಕೆಳಗಿನಂತಿದೆ:

ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಬಸ್ಸುಗಳ ಸಂಖ್ಯೆ ಒಟ್ಟು ಸುತ್ತುವಳಿಗಳು ಒಟ್ಟು ಪ್ರಯಾಣ ದರ (GST & ಟೋಲ್ ಸೇರಿ)
V-EX-TMK-1 ಕೆಬಿಎಸ್ (KBS) ತುಮಕೂರು 10 54 ರೂ. 120.00

ಪ್ರಮುಖ ನಿಲುಗಡೆಗಳು ಮತ್ತು ಹಂತವಾರು ಪ್ರಯಾಣ ದರ (ರೂ. ಗಳಲ್ಲಿ):

ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಹೊರಡುವ ಬಸ್‌ಗಳ ನಿಲುಗಡೆ ಹಾಗೂ ಜಿಎಸ್‌ಟಿ ಮತ್ತು ಟೋಲ್ ಒಳಗೊಂಡಂತೆ ದರದ ಚಾರ್ಟ್ ಇಲ್ಲಿದೆ:

ಪ್ರಾರಂಭ ಸ್ಥಳ ನಿಲುಗಡೆಗಳ ವಿವರ ಪ್ರಯಾಣ ದರ (ರೂ. ಗಳಲ್ಲಿ)
ಕೆಂಪೇಗೌಡ ಬಸ್ ನಿಲ್ದಾಣ ನವರಂಗ್ 25.00
ಗೋವರ್ಧನ್ ಟಾಕೀಸ್ 35.00
ಗೊರಗುಂಟೆಪಾಳ್ಯ 35.00
ಜಾಲಹಳ್ಳಿ ಕ್ರಾಸ್ 40.00
ಟಿ. ದಾಸರಹಳ್ಳಿ (ಬಸ್ ನಿಲ್ದಾಣದಲ್ಲಿ ಮಾತ್ರ) 40.00
8ನೇ ಮೈಲಿ 40.00
ವೀಡಿಯಾ ನಿಲ್ದಾಣ 50.00
ಕ್ಯಾತಸಂದ್ರ 120.00
ತುಮಕೂರು 120.00

ಸಾರ್ವಜನಿಕರು ಈ ಅತ್ಯಾಧುನಿಕ ಹಾಗೂ ಆರಾಮದಾಯಕ ಸಾರಿಗೆ ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಬಿಎಂಟಿಸಿ ವಿನಂತಿಸಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

BIG BREAKING: ಹೈಕೋರ್ಟ್ ಆದೇಶಕ್ಕೆ ಮಣಿದ ಸಾರಿಗೆ ನೌಕರರು: ಮುಷ್ಕರ ವಾಪಸ್, ನಾಳೆ ಎಂದಿನಂತೆ ಬಸ್ ಸಂಚಾರ

Share. Facebook Twitter LinkedIn WhatsApp Email

Related Posts

BIG NEWS: ಕರ್ನಾಟಕದಲ್ಲಿ 2 ವರ್ಷದಲ್ಲಿ 5,394 ರೈತರು ಆತ್ಮಹತ್ಯೆ: ಪ್ರಕರಣ ಮುಚ್ಚಿಟ್ಟು ರಾಜ್ಯ ಸರ್ಕಾರ ಜಾಣ್ಮೆ- HDK ಗಂಭೀರ ಆರೋಪ

3 Mins Read

BIG BREAKING: ಹೈಕೋರ್ಟ್ ಆದೇಶಕ್ಕೆ ಮಣಿದ ಸಾರಿಗೆ ನೌಕರರು: ಮುಷ್ಕರ ವಾಪಸ್, ನಾಳೆ ಎಂದಿನಂತೆ ಬಸ್ ಸಂಚಾರ

1 Min Read

ಮೇ.29ರಂದು ರೋಟರಿ ಬೆಂಗಳೂರು ಎಬಿಲಿಟೀಸ್ ಸಂಸ್ಥೆಯಿಂದ ‘ಅಬಿಲಿಟೀಸ್ ಗಾನ ರಸಮಂಜರಿ’

3 Mins Read
Recent News

BIG NEWS: ಕರ್ನಾಟಕದಲ್ಲಿ 2 ವರ್ಷದಲ್ಲಿ 5,394 ರೈತರು ಆತ್ಮಹತ್ಯೆ: ಪ್ರಕರಣ ಮುಚ್ಚಿಟ್ಟು ರಾಜ್ಯ ಸರ್ಕಾರ ಜಾಣ್ಮೆ- HDK ಗಂಭೀರ ಆರೋಪ

GOOD NEWS: ಬೆಂಗಳೂರು-ತುಮಕೂರು ನಡುವೆ ಬಿಎಂಟಿಸಿ ‘ವೋಲ್ವೋ ವಜ್ರ ವಿಸ್ತಾರ’ ಎಸಿ ಬಸ್ ಸೇವೆ ಆರಂಭ | BMTC Bus

BIG BREAKING: ಹೈಕೋರ್ಟ್ ಆದೇಶಕ್ಕೆ ಮಣಿದ ಸಾರಿಗೆ ನೌಕರರು: ಮುಷ್ಕರ ವಾಪಸ್, ನಾಳೆ ಎಂದಿನಂತೆ ಬಸ್ ಸಂಚಾರ

ಮೇ.29ರಂದು ರೋಟರಿ ಬೆಂಗಳೂರು ಎಬಿಲಿಟೀಸ್ ಸಂಸ್ಥೆಯಿಂದ ‘ಅಬಿಲಿಟೀಸ್ ಗಾನ ರಸಮಂಜರಿ’

State News
KARNATAKA

BIG NEWS: ಕರ್ನಾಟಕದಲ್ಲಿ 2 ವರ್ಷದಲ್ಲಿ 5,394 ರೈತರು ಆತ್ಮಹತ್ಯೆ: ಪ್ರಕರಣ ಮುಚ್ಚಿಟ್ಟು ರಾಜ್ಯ ಸರ್ಕಾರ ಜಾಣ್ಮೆ- HDK ಗಂಭೀರ ಆರೋಪ

By ವಸಂತ ಬಿ ಈಶ್ವರಗೆರೆ KARNATAKA 3 Mins Read

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮುಚ್ಚಿಟ್ಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು…

GOOD NEWS: ಬೆಂಗಳೂರು-ತುಮಕೂರು ನಡುವೆ ಬಿಎಂಟಿಸಿ ‘ವೋಲ್ವೋ ವಜ್ರ ವಿಸ್ತಾರ’ ಎಸಿ ಬಸ್ ಸೇವೆ ಆರಂಭ | BMTC Bus

BIG BREAKING: ಹೈಕೋರ್ಟ್ ಆದೇಶಕ್ಕೆ ಮಣಿದ ಸಾರಿಗೆ ನೌಕರರು: ಮುಷ್ಕರ ವಾಪಸ್, ನಾಳೆ ಎಂದಿನಂತೆ ಬಸ್ ಸಂಚಾರ

ಮೇ.29ರಂದು ರೋಟರಿ ಬೆಂಗಳೂರು ಎಬಿಲಿಟೀಸ್ ಸಂಸ್ಥೆಯಿಂದ ‘ಅಬಿಲಿಟೀಸ್ ಗಾನ ರಸಮಂಜರಿ’

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.