ಬೆಂಗಳೂರು : ಬಿಎಂಟಿಸಿ ತನ್ನ ಸೇವೆಯನ್ನು ಉತ್ತಮಗೊಳಿ ಸಲು ಹೊಸದಾಗಿ 1,500ಕ್ಕೂ ಹೆಚ್ಚಿನ ಬಸ್‌ಗಳ ಸೇರ್ಪಡೆಗೆ ಮುಂದಾಗಿದ್ದು, ಅದರಲ್ಲಿ ಬಹು ತೇಕ ಬಸ್‌ಗಳನ್ನು ಗ್ರಾಸ್ ಕಾಸ್ಟ್ ಕಾಂಟ್ಯಾಕ್ಟ್ (ಜಿಸಿಸಿ) ಮಾದರಿ ಯಲ್ಲಿ ಪಡೆಯಲಿದೆ.
ಹೊಸ ಬಸ್ ಗಳ ಸೇರ್ಪಡೆ ಮೂಲಕ ಬಿಎಂ ಟಿಸಿಯ ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಿನ ದಿನಗಳಲ್ಲಿ ಬಿಎಂಟಿಸಿಗೆ ಹೊಸದಾಗಿ 1,500ಕ್ಕೂ ಹೆಚ್ಚಿನ ಬಸ್‌ಗಳನ್ನು ಸೇರ್ಪಡೆ ಮಾಡಲಿದೆ. ಪ್ರಮುಖವಾಗಿ 400 ಬಿಎಸ್ – 6ಬಸ್ ಗಳನ್ನು ಖರೀದಿಸಲಾಗುತ್ತಿದೆ.
ಅದರ ಜತೆಗೆ 20 ಮಿಡಿ ಬಸ್ ಗಳು, 10 ಡಬ್ಬಲ್ ಡೆಕ್ಕರ್ ಬಸ್, 921 ಎಲೆಕ್ನಿಕ್ ಬಸ್‌ಗಳನ್ನು ಜಿಸಿಸಿ ಆಧಾರದಲ್ಲಿ ಪಡೆಯಲು ನಿರ್ಧರಿ ಸಲಾಗಿದೆ. ಎಲೆಕ್ನಿಕ್ ಬಸ್‌ಗಳ ಪೈಕಿ ಈಗಾಗಲೇ 100 ಬಸ್‌ಗಳು ಪೂರೈಕೆ ಯಾಗಿದ್ದು, ಉಳಿದ ಬಸ್‌ಗಳ ಈ ಆರ್ಥಿಕ ವರ್ಷದ ಅಂತ್ಯದೊಳಗೆ ಬಿಎಂಟಿಸಿ ಪಡೆಯಲಿದೆ.
ಕೊರೋನಾ ಪೂರ್ವದಲ್ಲಿ ಬಿಎಂಟಿಸಿ 6,185 ಬಸ್‌ಗಳ ಮೂಲಕ ಸೇವೆ ನೀಡುತ್ತಿತ್ತು. ಆದರೆ, ಕೊರೋನಾ ನಂತರ ಆ ಸಂಖ್ಯೆ 5,587ಕ್ಕೆ ಇಳಿದಿದೆ. ಒಟ್ಟು 598 ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ಅದರ ಜತೆಗೆ ಗುಜರಿಗೆ ಹೋಗಬೇಕಾದ ಬಸ್‌ಗಳನ್ನು ಸೇವೆಯಿಂದ ಹೊರಗಿಡಲೂ ನಿರ್ಧರಿಸಲಾಗಿದೆ. ಹೀಗಾಗಿ ಬಿಎಂಟಿಸಿ ಹೊಸ ಬಸ್ ಗಳನ್ನು ಪಡೆಯಲು ಮುಂದಾಗಿದೆ.