ಬೆಂಗಳೂರು : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ 75 ಎಲೆಕ್ಟ್ರಿಕ್ ಬಸ್ಗಳಿಗೆ ವಿಧಾನ ಸೌಧದ ಎದುರು ಸಿಎಂ ಹಸಿರು ನಿಶಾನೆ ತೋರಿಸೋ ಮೂಲಕ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಮಾತನಾಡಿ ” ಕೋವಿಡ್ನಿಂದಾಗಿ ʻ ಬಿಎಂಟಿಸಿ ಮತ್ತೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.” ಎಂದಿದ್ದಾರೆ.
ಕೋವಿಡ್ನಿಂದಾಗಿ ಬಿಎಂಟಿಸಿ ಮತ್ತೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆರ್ಥಿಕ ಸಂಕಷ್ಟದಿಂದ ಪಾರು ಮಾಡೋದೆ ಸರ್ಕಾರದ ಸಂಕಲ್ಪ ಮಾಡಬೇಕಾಗಿದೆ . ಬೆಂಗಳೂರಿನಲ್ಲಿ ಜನ ಸಂಖ್ಯೆಗೆ ಅನುಗುಣವಾಗಿ ಸಮನಾಗಿ ವಾಹನಗಳಿವೆ ಮುಂದಿನ 3 ವರ್ಷದಲ್ಲಿ ಜನರಿಗಿಂತ ವಾಹಗಳೇ ಹೆಚ್ಚಾಗಲಿದೆ.
ಇದಕ್ಕೆ ಪೂರಕವಾಗಿ ಮೂಲ ಸೌಕರ್ಯಗಳು ಬೇಕಾಗಿದೆ. ಬೆಂಗಳೂರು ಸಾರಿಗೆಯಲ್ಲಿ ಹೊಸ ಚಿಂತನೆಯ ಅಗತ್ಯವಿದೆ ಮಾಧ್ಯಮಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ