ಬೆಂಗಳೂರು : ಬಿಎಂಟಿಸಿ ಚಾಲಕರಿಗೆ ನಿಗಮದಿಂದ ಖಡಕ್ ರೂಲ್ಸ್ ಜಾರಿ ಮಾಡಲಾಗಿದ್ದು, ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದ್ರೆ ತಲೆದಂಡ ಗ್ಯಾರಂಟಿ.
ಹೌದು, ಬಿಎಂಟಿಸಿ ಚಾಲಕರು ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಬಳಸಿದ್ರೆ ಅಮಾನತು, ವರ್ಗಾವಣೆ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದೆ.
ಬಿಎಂಟಿಸಿ ಚಾಲಕರು ಬಸ್ ಚಾಲನೆ ವೇಳೆ ಮೊಬೈಲ್ ಬಳಸಿದ್ರೆ 5,000 ರೂ.ಕಡಿತ ಮಾಡಲು ನಿಗಮ ಮುಂದಾಗಿದೆ. ಜೊತೆಗೆ ಅಮಾನತು ತೆರವು ಮಾಡಿದ ನಂತರ ಬೇರೆ ಘಟಕಕ್ಕೆ ವರ್ಗಾವಣೆ ಮಾಡಲಾಗುವುದು. ಎರಡನೇ ಪ್ರಕರಣದಲ್ಲಿಯೂ 15 ದಿನಗಳ ಅಮಾನತು ಮಾಡಲಾಗುವುದು. ಅಮಾನತು ತೆರವು ನಂತರ ಬೇರೆ ಘಟಕಕ್ಕೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿದುಬಂದಿದೆ.








