ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪ್ರಯಾಣಿಕರಿಗೆ ಶಾಕ್ ನೀಡಿದ್ದು, ಮಾಸಿಕ, ದೈನಿಕ ಬಸ್ ಪಾಸಿನ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಸಂಸ್ಥೆಯ ಆರ್ಥಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯು ವಿತರಣೆ ಮಾಡುತ್ತಿರುವ ವಜ್ರ ಹವಾನಿಯಂತ್ರಿತ ಸೇವೆಗಳ ದೈನಿಕ, ಮಾಸಿಕ ಪಾಸುಗಳ ದರಗಳನ್ನು ದಿನಾಂಕ 01.01.2023 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ.
ವಜ್ರ ಮಾಸಿಕ ಪಾಸು ದರ 1,500 ರಿಂದ 1800 ರೂ ಗೆ ಹೆಚ್ಚಳ ಮಾಡಲಾಗಿದೆ.ವಜ್ರ ದೈನಿಕ ಪಾಸು 100 ರೂಯಿಂದ 120 ರೂಗೆ ಏರಿಕೆ ಮಾಡಲಾಗಿದೆ,ಸಾಮಾನ್ಯ ಮಾಸಿಕ ಪಾಸುದಾರರು ವಜ್ರ ವಾಹನಗಳಲ್ಲಿ ಪ್ರಯಾಣಿಸುವ ಪ್ರತಿ ಸುತ್ತುವಳಿ ಚೀಟಿ ದರವನ್ನು ರೂ.20 ರಿಂದ 25 ರೂಗೆ ಹೆಚ್ಚಳ ಮಾಡಲಾಗಿದೆ.ಮುಂದುವರೆದು, ಸಾಮಾನ್ಯ ಮಾಸಿಕ ಪಾಸುದಾರರು ಮತ್ತು ಹಿರಿಯ ನಾಗರಿಕ ಸಾಮಾನ್ಯ ಮಾಸಿಕ ಪಾಸುದಾರರು ಭಾನುವಾರಗಳಂದು ಮಾನ್ಯತಾ ಪಾಸಿನೊಂದಿಗೆ ವಜ್ರ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಕಲ್ಪಿಸಲಾಗಿದ್ದ ಸೌಲಭ್ಯವನ್ನು ಹಿಂಪಡೆಯಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆ ಹೊರಡಿಸಿದೆ.
‘ಬಿಗ್ ಬಾಸ್’ ಮನೆಯಿಂದ ‘ದಿವ್ಯಾ ಉರುಡುಗ’ ಔಟ್ : ಈ ಸಲ ಯಾರಾಗಬಹುದು ವಿನ್ನರ್..? |BIGGBOSS-9