ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ ನಲ್ಲಿ ನಿರ್ವಾಹಕರು ಶಕ್ತಿ ಯೋಜನೆ ದುರುಪಯೋಗ ಮಾಡುತ್ತಿರೋದಾಗಿ ಹೇಳಲಾಗುತ್ತಿತ್ತು. ಹೀಗಾಗಿ ಶಕ್ತಿ ಯೋಜನೆಯ ದುರುಪಯೋಗ ತಡೆಯಲು ನಿಗಮವು ಮಹತ್ವದ ಕ್ರಮ ವಹಿಸಿದೆ. ಪುರುಷ ಪ್ರಯಾಣಿಕರಿಗೆ ಮತ್ತು ಅನ್ಯ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆಯ ಉಚಿತ ಚೀಟಿಗಳನ್ನು ಅನಧಿಕೃತವಾಗಿ ವಿತರಿಸುವವರ ವಿರುದ್ಧ ಮುಲಾಜಿಲ್ಲದೇ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಈ ಸಂಬಂಧ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಮಾರ್ಪಾಡು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ವಾಹನದಲ್ಲಿ ಪ್ರಯಾಣಿಕರ ಸಂಖ್ಯೆ 20ಕ್ಕಿಂತ ಹೆಚ್ಚು ಇರುವಾಗ 1 ಮಹಿಳಾ ಶಕ್ತಿ ಯೋಜನೆಯ ಉಚಿತ ಚೀಟಿಯನ್ನು ಅನಧಿಕೃತವಾಗಿ ವಿತರಿಸಿದ್ದಲ್ಲಿ, ಇಳಿಯುವ ಪ್ರಯಾಣಿಕರ ತನಿಖೆಯಲ್ಲಿ 1 ಮಹಿಳಾ ಶಕ್ತಿ ಯೋಜನೆಯ ಉಚಿತ ಚೀಟಿಯನ್ನು ಅನಧಿಕೃತವಾಗಿ ವಿತರಿಸಿದ್ದಲ್ಲಿ ಅದನ್ನು ಸಾಮಾನ್ಯ ಪ್ರಕಣವೆಂದು ಪರಿಗಣಿಸಲಾಗುತ್ತದೆ. ಪ್ರಯಾಣಿಕರಿಂದ ದಂಡ ವಸೂಲಿ ಮಾಡದೇ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ.
ವಾಹನದಲ್ಲಿ ಪ್ರಯಾಣಿಕರ ಸಂಖ್ಯೆ 20 ಮತ್ತು ಅದಕ್ಕಿಂತ ಕಡಿಮೆ ಇರುವಾಗ 1 ಶಕ್ತಿ ಯೋಜನೆ ಉಚಿತ ಚೀಟಿಯನ್ನು ಅನಧಿಕೃತವಾಗಿ ವಿತರಿಸಿದಲ್ಲಿ, 20ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದು 2ರಿಂದ 3 ಪುರುಷ ಅಥವಾ ಅನ್ಯ ರಾಜ್ಯದ ಮಹಿಳೆ ಸೇರಿದಂತೆ ಮಹಿಳಾ ಶಕ್ತಿ ಯೋಜನೆಯ ಉಚಿತ ಚೀಟಿಗಳನ್ನು ಅನಧಿಕೃತವಾಗಿ ವಿತರಿಸಿದ್ದಲ್ಲಿ ಕೆಂಪು ಗುರುತಿನ ಪ್ರಕರಣವೆಂದು ಪರಿಣಿಸುವುದು.
ಇಳಿಯುವ ಪ್ರಯಾಣಿಕರ ತನಿಖೆಯಲ್ಲಿ 2ರಿಂದ ಮೂರು ಪುರುಷ ಅಥವಾ ಅನ್ಯ ರಾಜ್ಯದ ಮಹಿಳೆ ಸೇರಿದಂತೆ ಜನರಿಗೆ ಮಹಿಳಾ ಶಕ್ತಿ ಯೋಜನೆಯ ಉಚಿತ ಚೀಟಿಯನ್ನು ಅನಧಿಕೃತವಾಗಿ ವಿತರಿಸಿದಲ್ಲಿ ಕೆಂಪು ಗುರುತಿನ ಪ್ರಕರಣವೆಂದು ಪರಿಗಣಿಸಿ, ಪ್ರಯಾಣಿಕರಿಂದ ದಂಡ ವಸೂಲಿ ಮಾಡದೇ ಪ್ರಕರಣ ದಾಖಲಿಸುವಂತೆ ಖಡಕ್ ಸೂಚನೆ ನೀಡಲಾಗಿದೆ.
ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ 20 ಮತ್ತು ಅದಕ್ಕಿಂತ ಕಡಿಮೆ ಇರುವಾಗ ಇಬ್ಬರು ಪುರುಷ ಅಥವಾ ಅನ್ಯ ರಾಜ್ಯದ ಮಹಿಳೆ ಸೇರಿದಂತೆ ಮತ್ತು ಅದಕ್ಕಿಂತ ಹೆಚ್ಚು ಶಕ್ತಿ ಯೋಜನೆ ಉಚಿತ ಚೀಟಿಯನ್ನು ಅನಧಿಕೃತವಾಗಿ ನೀಡಿದ್ದರೇ ಅದನ್ನು ಗಂಭೀರ ಕೆಂಪು ಗುರುತಿನ ಕೇಸ್ ಎಂಬುದಾಗಿ ಪರಿಗಣಿಸುವುದಾಗಿ ತಿಳಿಸಿದೆ.
ನಾಲ್ಕಕ್ಕಿಂತ ಹೆಚ್ಚಿನ ಶಕ್ತಿ ಯೋಜನೆ ಚೀಟಿ, ಇಳಿಯುವಾಗ ತಪಾಸಣೆ ವೇಳೆ ನಾಲ್ಕು ಅಥವಾ ಅಧಕ್ಕಿಂತ ಹೆಚ್ಚಿನ ಜನರಿಗೆ ಮಹಿಳಾ ಶಕ್ತಿ ಯೋಜನೆಯ ಉಚಿತ ಚೀಟಿ ನೀಡಿದ್ದಲ್ಲಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡದೇ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ.
ಇದಲ್ಲದೇ ಬಿಎಂಟಿಸಿ ಚಾಲಕರು ನಮೂನೆ-4ರಂತೆ ಕಾರ್ಯಾಚರಣೆ ಸುತ್ತುವಳಿಯ ಕೊನೆಯ ನಿಲ್ದಾಣಕ್ಕೆ ಹೋಗದೇ ಮಾರ್ಗ ಮಧ್ಯದಲ್ಲಿ ಬಿಎಂಟಿಸಿ ಬಸ್ಸನ್ನು ತಿರುಗಿಸಿ ಕಾರ್ಯಾಚರಣೆ ಮಾಡಿ ಮಾರ್ಗ ಪತ್ರದಲ್ಲಿ ಹೋಗಿರುವುದಾಗಿ ಸುಳ್ಳು ಮಾಹಿತಿ ನಮೂದಿಸಿದಲ್ಲೂ ಶಿಸ್ತು ಕ್ರಮ ಕೈಗೊಳ್ಳಲು ಖಡಕ್ ಸೂಚನೆ ನೀಡಲಾಗಿದೆ. ಈ ಆದೇಶವು ತಕ್ಷಣವೇ ಜಾರಿಗೆ ಬರುತ್ತದೆ ಎಂಬುದಾಗಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾರ್ಪಾಡು ಆದೇಶದಲ್ಲಿ ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

GOOD NEWS: ರಾಜ್ಯದ ಪೊಲೀಸರಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮತ್ತೊಂದು ಗುಡ್ ನ್ಯೂಸ್
BREAKING ;’IBPS ಕ್ಲರ್ಕ್ ಪ್ರಿಲಿಮ್ಸ್’ ಫಲಿತಾಂಶ ಬಿಡುಗಡೆ ; ಈ ರೀತಿ ಸ್ಕೋರ್ಕಾರ್ಡ್ ಡೌನ್ಲೋಡ್ ಮಾಡಿ!








