ಬೆಂಗಳೂರು : ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ಚಾಲಕ ಮರಕ್ಕೆ ಬಸ್ ಡಿಕ್ಕಿ ಹೊಡೆಸಿದ ಘಟನೆ ಕಳೆದ ಭಾನುವಾರ ಬೆಗಳೂರಿನ ಜೈ ಮಾರುತಿ ನಗರದ ಸಮೀಪ ನಡೆದಿದೆ. ಈ ವೇಳೆ ರಸ್ತೆ ಬದಿಯ ವ್ಯಾಪಾರಿಗಳು ಅಪಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ.
ಹೌದು ಸುಮನಹಳ್ಳಿಯ ಬಿಎಂಟಿಸಿ ಡಿಪೋ 31ಕ್ಕೆ ಸೇರಿದ ಕೆಎ 57 ಎಫ್ 2319 ಬಸ್ ಎಂದು ತಿಳಿದುಬಂದಿದ್ದು, ಪದೇಪದೇ ಬಿಎಂಟಿಸಿ ಬಸ್ ಅಪಘಾತಗಳು ನಡೆಯುತ್ತಿದ್ದರು. ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಬ್ರೇಕ್ ಫೇಲಾದ ಬಸ್ ನಲ್ಲಿ ಪ್ರಯಾಣಿಕರು ಇಲ್ಲದಿದ್ದರಿಂದ ಭಾರಿ ಅನಾಹುತ ಒಂದು ಇದೀಗ ತಪ್ಪಿದೆ.
ಭಾನುವಾರ ಸಂಜೆ 7:45 ಕ್ಕೆ ಸಂಬಂಧಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೈ ಮಾರುತಿ ನಗರದಿಂದ ಮೆಜೆಸ್ಟಿಕ್ ಕಡೆಗೆ ಬಿಎಂಟಿಸಿ ತೆರಳುತ್ತಿತ್ತು. ಬಸ್ ಬ್ರೇಕ್ ಆಗಿದ್ದರಿಂದ ಚಾಲಕ ಗಂಗಾಧರ್ ಕೂಡಲೇ ಮರಕ್ಕೆ ಗುದ್ದಿಸಿದ್ದಾರೆ. ಚಾಲಕ ಗಂಗಾಧರನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಗಾಯಗೊಂಡ ಕಂಡಕ್ಟರ್ ಮಂಜುಳಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಭಂದ ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಪಘಾತಕ್ಕೆ ಈಡಾದ ಬಿಎಂಟಿಸಿ ಬಸ್ ಚಾಲಕ ನಿರ್ವಾಹಕಿ ಮಂಜುಳಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಹಿರಿಯ ಅಧಿಕಾರಿಗಳ ಭಯದಿಂದ ಚಾಲಕ ಮತ್ತು ನಿರ್ವಹಾಕಿ ಬಾಯಿ ಬಿಡುತ್ತಿಲ್ಲ.
ಮರದ ಪಕ್ಕದಲ್ಲಿ ಇದ್ದ ಹಣ್ಣು ಮತ್ತು ತರಕಾರಿ ವ್ಯಾಪರಿಗಳು ಜಸ್ಟ್ ಮಿಸ್ ಆಗಿದ್ದಾರೆ. ಬಸ್ ಮರಕ್ಕೆ ಡಿಕ್ಕಿ ಹೊಡೆದು ನಿಲ್ಲದಿದ್ದರೆ ಹಲವರಿಗೆ ಹಾನಿ ಆಗುವ ಸಂಭವ ಇತ್ತು. ಇಳಿಜಾರಿನಲ್ಲಿ ಹ್ಯಾಂಡ್ ಬ್ರೇಕ್ ಹಾಕಿದರೆ ಬಸ್ ಪಲ್ಟಿ ಆಗುತ್ತಿತ್ತು. ಹಾಗಾಗಿ ಮರಕ್ಕೆ ಬಸ್ ಗುದ್ದಿಸಿ ನಿಲ್ಲಿಸಿದ್ದಾಗಿ ಚಾಲಕ ಗಂಗಾಧರ್ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.