ಬೆಂಗಳೂರು: ಬಿ.ಎಂ.ಟಿ.ಸಿ ಯಲ್ಲಿ 2285 ನಿರ್ವಾಹಕ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ ಎಂಬುದಾಗಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಅವರು 2018 ರಿಂದೀಚೆಗೆ ಬಿ.ಎಂ.ಟಿ ಸಿಯಲ್ಲಿ ಯಾವುದೇ ನೇಮಕಾತಿಯಾಗಿರಲಿಲ್ಲ. ನಮ್ಮ ಸರ್ಕಾರವು ಬಂದ ನಂತರ ದಿನಾಂಕ: 13/10/2023 ನೇಮಕಾತಿಗೆ ಅನುಮತಿ ನೀಡಲಾಗಿತ್ತು. ಅದರಂತೆ ದಿನಾಂಕ: 03/4/2024 ರಂದು ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. KEA ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 23021 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು. ಇಂದು ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗಿದ್ದು, ವರ್ಗಾವಾರು ಮೀಸಲಾತಿ , ಶೇಕಡವಾರು ಅಂಕ ಹಾಗೂ ಹುಟ್ಟಿದ ದಿನಾಂಕದೊಂದಿಗೆ ಪಟ್ಟಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.
ನಿರ್ವಾಹಕರ ಉಳಿಕೆ ಮೂಲ ವೃಂದದ ಹುದ್ದೆಗೆ ಅರ್ಜಿ ಸಲ್ಲಿಸಿ ಅರ್ಹತೆ ಪಡೆದಿದ್ದ ಅಭ್ಯರ್ಥಿಗಳ ಸಂಭವನೀಯ ಆಯ್ಕೆ ಪಟ್ಟಿಯನ್ನು ಹಾಗೂ ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಮೀಸಲಾತಿ ವಾರು ಕೊನೆಯ ಅಭ್ಯರ್ಥಿಯ ಶೇಕಡವಾರು ಅಂಕಗಳ ವಿವರವನ್ನು ಪ್ರಕಟಿಸಿ ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು ಎಂದಿದ್ದಾರೆ.
ಇನ್ನೂ ಸ್ವೀಕರಿಸಲಾಗಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ, ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಲಾಗಿದ್ದು, ಅಂತಿಮ ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಮೀಸಲಾತಿವಾರು ಕೊನೆಯ ಅಭ್ಯರ್ಥಿಗಳ ಶೇಕಡವಾರು ಅಂದರೆ Cut-Off ಅಂಕ ಹಾಗೂ ಹುಟ್ಟಿದ ದಿನಾಂಕದ ವಿವರಗಳನ್ನು ಪರಿಶೀಲಿಸುವಂತೆ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ ಎದುರಿಸಲು 60 ಕೋಟಿ ರೂ. ಮಂಜೂರು: ಸಚಿವ ಪ್ರಿಯಾಂಕ್ ಖರ್ಗೆ