Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿಕ್ಕಬಳ್ಳಾಪುರ : ಮನೆಯ ಬೀಗ ಒಡೆದು ನಗದು ಹಣ, ಚಿನ್ನಾಭರಣ ದೋಚಿ ಕಳ್ಳರು ಪರಾರಿ!

07/02/2026 6:37 PM

ಬೆಂಗಳೂರಿನ ‘ನಮ್ಮ ಮೆಟ್ರೋ ಪ್ರಯಾಣಿಕ’ರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ‘BMRCL’

07/02/2026 6:26 PM

ಟಿ20 ವಿಶ್ವಕಪ್ 2026: ಅಮೆರಿಕ ವಿರುದ್ಧದ ಭಾರತದ ಮೊದಲ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಗೈರು ಸಾಧ್ಯತೆ – ವರದಿ

07/02/2026 6:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ‘ನಮ್ಮ ಮೆಟ್ರೋ ಪ್ರಯಾಣಿಕ’ರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ‘BMRCL’
KARNATAKA

ಬೆಂಗಳೂರಿನ ‘ನಮ್ಮ ಮೆಟ್ರೋ ಪ್ರಯಾಣಿಕ’ರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ‘BMRCL’

By kannadanewsnow0907/02/2026 6:26 PM

ಬೆಂಗಳೂರು: ನಗರದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ರೈಲು ಇಳಿದ ಬಳಿಕ ಬಿಎಂಟಿಸಿ ಬಸ್ ನಿಲ್ದಾಣ ಸಮೀಪದಲ್ಲೇ ಇರುವಂತೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಆ ಮೂಲಕ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಮತ್ತೊಂದು ಗುಡ್ ನ್ಯೂಸ್ ನೀಡುತ್ತಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು, ಕೆಲವು ಪ್ರದೇಶಗಳಲ್ಲಿ ಬಿಎಂಟಿಸಿ ಬಸ್ ನಿಲ್ದಾಣಗಳು ಮೆಟ್ರೋ ನಿಲ್ದಾಣಗಳಿಂದ ದೂರದಲ್ಲಿದ್ದ ಕಾರಣ ಮೆಟ್ರೋ ಪ್ರಯಾಣಿಕರಿಗೆ ಅಸೌಕರ್ಯವಾಗುತ್ತಿತ್ತು. ಮೆಟ್ರೋ ಪ್ರಯಾಣಿಕರ ಕೊನೆಯ ಹಂತದ ಸಂಪರ್ಕ (ಲಾಸ್ಟ್ ಮೈಲ್ ಕನೆಕ್ಟಿವಿಟಿ)” ಸುಧಾರಿಸುವ ಉದ್ದೇಶದಿಂದ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್), ಬಿಎಂಟಿಸಿ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯೊಂದಿಗೆ ಸಂಯುಕ್ತವಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದಿದೆ.

ದಿನಾಂಕ 05.02.2026ರಿಂದ ನೇರಳೆ ಮಾರ್ಗ (ವೈಟ್‌ಫೀಲ್ಡ್‌ನಿಂದ ಚಲಘಟ್ಟವರೆಗೆ) ಹಾಗೂ ಹಸಿರು ಮಾರ್ಗ (ಮಾದಾವರದಿಂದ ರೇಷ್ಮೆ ಸಂಸ್ಥೆವರೆಗೆ) ಮಾರ್ಗಗಳಲ್ಲಿನ ಕೆಲವು ಮೆಟ್ರೋ ನಿಲ್ದಾಣಗಳ ಸಮೀಪ ಹೊಸ ಬಸ್ ನಿಲ್ದಾಣಗಳನ್ನು ಒದಗಿಸಲಾಗಿದೆ.

ಹೊಸದಾಗಿ ಒದಗಿಸಲಾದ ಬಸ್ ನಿಲ್ದಾಣಗಳ ವಿವರಗಳು

ನೇರಳೆ ಮಾರ್ಗ

  • ಟ್ರಿನಿಟಿ: ಎಂ.ಜಿ.ರಸ್ತೆಯಿಂದ ಹಲಸೂರು ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ (ಹೋಟೆಲ್ ಒಬೆರಾಯ್ ಎದುರು) ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.
  • ಹೂಡಿ: ಸೀತಾರಾಮಪಾಳ್ಯದಿಂದ ಗರುಡಾಚರ್ಪಾಳ್ಯ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ (ಡಿ’ಮಾರ್ಟ್ ಎದುರು) ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.

ಹಸಿರು ಮಾರ್ಗ

  1.  ಮಂಜುನಾಥ ನಗರ: ಚಿಕ್ಕಬಿದರಕಲ್ಲುದಿಂದ ನಾಗಸಂದ್ರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಎ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.
  2. ಪೀಣ್ಯ: ಗೋರಗುಂಟೆಪಾಳ್ಯದಿಂದ ಪೀಣ್ಯ ಕೈಗಾರಿಕಾ ಪ್ರದೇಶದ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ಮೆಟ್ರೋ ನಿಲ್ದಾಣದ ಎದುರಿನ ಸರ್ವಿಸ್ ರಸ್ತೆಯಲ್ಲಿ ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.

ಪೀಣ್ಯ ಕೈಗಾರಿಕಾ ಪ್ರದೇಶದಿಂದ ಗೋರಗುಂಟೆಪಾಳ್ಯ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಮತ್ತೊಂದು ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.

  1. ಲಾಲ್‌ಬಾಗ್: ಸೌತ್ ಎಂಡ್ ಸರ್ಕಲ್‌ನಿಂದ ನ್ಯಾಷನಲ್ ಕಾಲೇಜ್ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಸಮೀಪ ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.
  2. ಸೌತ್ ಎಂಡ್ ಸರ್ಕಲ್: ಲಾಲ್‌ಬಾಗ್‌ನಿಂದ ಜಯನಗರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಎ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಮೊದಲು ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.
  3. ಜಯಪ್ರಕಾಶ್ ನಗರ: ಬನಶಂಕರಿಯಿಂದ ಯಲಚೇನಹಳ್ಳಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಸಿ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಎದುರು ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.

ಯಲಚೇನಹಳ್ಳಿಯಿಂದ ಬನಶಂಕರಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಡಿ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಮತ್ತೊಂದು ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.

  1. ಕೊಣನಕುಂಟೆ ಕ್ರಾಸ್: ದೊಡ್ಡಕಲ್ಲಸಂದ್ರದಿಂದ ಯಲಚೇನಹಳ್ಳಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಎ’ ಪ್ರವೇಶದ್ವಾರದ ಬಳಿ (ಪಿಲ್ಲರ್ ಸಂಖ್ಯೆ 147) ಮೆಟ್ರೋ ನಿಲ್ದಾಣದ ಸಮೀಪ ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.

ಯಲಚೇನಹಳ್ಳಿಯಿಂದ ದೊಡ್ಡಕಲ್ಲಸಂದ್ರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ (ಪಿಲ್ಲರ್ ಸಂಖ್ಯೆ 148) ಮತ್ತೊಂದು ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.

  1. ವಜ್ರಹಳ್ಳಿ: ತಲಘಟ್ಟಪುರದಿಂದ ದೊಡ್ಡಕಲ್ಲಸಂದ್ರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.

ದೊಡ್ಡಕಲ್ಲಸಂದ್ರದಿಂದ ತಲಘಟ್ಟಪುರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಎ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಸಮೀಪ ಮತ್ತೊಂದು ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.

  1. ತಲಘಟ್ಟಪುರ: ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ವಜ್ರಹಳ್ಳಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಬಿ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಸಮೀಪ ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.

      ವಜ್ರಹಳ್ಳಿಯಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಎ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಮತ್ತೊಂದು ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.

ಇತರೆ ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೇ ಮೆಟ್ರೋ ನಿಲ್ದಾಣದಿಂದ 100 ಮೀಟರ್ ವ್ಯಾಪ್ತಿಯೊಳಗೆ ಬಸ್ ನಿಲ್ದಾಣಗಳು ಲಭ್ಯವಿದ್ದು, ಕೆಲವೆಡೆ ಸ್ಥಳಾಭಾವದ ಕಾರಣದಿಂದ ಹೊಸ ಬಸ್ ನಿಲ್ದಾಣಗಳನ್ನು ಒದಗಿಸಲು ಸಾಧ್ಯವಾಗಿಲ್ಲ.

ಇದಲ್ಲದೆ, **ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ**, ಮಾರ್ಗದಲ್ಲಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಟಿಸಿ **ವಾಯುವಜ್ರ (ವಿಮಾನ ನಿಲ್ದಾಣ) ಬಸ್‌ಗಳಿಗಾಗಿ** ಬಸ್ ನಿಲ್ದಾಣಗಳನ್ನು ಒದಗಿಸಲಾಗಿದೆ. ಪ್ರಯಾಣಿಕರು ನೇರವಾಗಿ ಮೆಟ್ರೋ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಹಾಗೂ ಬರುವ ಬಸ್‌ಗಳನ್ನು ಏರಬಹುದು ಅಥವಾ ಇಳಿಯಬಹುದು.

ಟಿ20 ವಿಶ್ವಕಪ್ 2026: ಅಮೆರಿಕ ವಿರುದ್ಧದ ಭಾರತದ ಮೊದಲ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಗೈರು ಸಾಧ್ಯತೆ – ವರದಿ

BREAKING: ಇನ್ಮುಂದೆ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಜನಪ್ರತಿನಿಧಿ ಆಹ್ವಾನದ ವೇಳೆ ಈ ಶಿಷ್ಟಾಚಾರ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ

Share. Facebook Twitter LinkedIn WhatsApp Email

Related Posts

ಚಿಕ್ಕಬಳ್ಳಾಪುರ : ಮನೆಯ ಬೀಗ ಒಡೆದು ನಗದು ಹಣ, ಚಿನ್ನಾಭರಣ ದೋಚಿ ಕಳ್ಳರು ಪರಾರಿ!

07/02/2026 6:37 PM1 Min Read

BREAKING: ಇನ್ಮುಂದೆ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಜನಪ್ರತಿನಿಧಿ ಆಹ್ವಾನದ ವೇಳೆ ಈ ಶಿಷ್ಟಾಚಾರ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ

07/02/2026 6:16 PM2 Mins Read

BREAKING : ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಗೆ ‘ಲೈಂಗಿಕ ಕಿರುಕುಳ’ ನೀಡಿದ ಪ್ರಾಧ್ಯಾಪಕನಿಗೆ ಬಿತ್ತು ಧರ್ಮದೇಟು!

07/02/2026 6:04 PM1 Min Read
Recent News

ಚಿಕ್ಕಬಳ್ಳಾಪುರ : ಮನೆಯ ಬೀಗ ಒಡೆದು ನಗದು ಹಣ, ಚಿನ್ನಾಭರಣ ದೋಚಿ ಕಳ್ಳರು ಪರಾರಿ!

07/02/2026 6:37 PM

ಬೆಂಗಳೂರಿನ ‘ನಮ್ಮ ಮೆಟ್ರೋ ಪ್ರಯಾಣಿಕ’ರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ‘BMRCL’

07/02/2026 6:26 PM

ಟಿ20 ವಿಶ್ವಕಪ್ 2026: ಅಮೆರಿಕ ವಿರುದ್ಧದ ಭಾರತದ ಮೊದಲ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಗೈರು ಸಾಧ್ಯತೆ – ವರದಿ

07/02/2026 6:18 PM

BREAKING: ಇನ್ಮುಂದೆ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಜನಪ್ರತಿನಿಧಿ ಆಹ್ವಾನದ ವೇಳೆ ಈ ಶಿಷ್ಟಾಚಾರ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ

07/02/2026 6:16 PM
State News
KARNATAKA

ಚಿಕ್ಕಬಳ್ಳಾಪುರ : ಮನೆಯ ಬೀಗ ಒಡೆದು ನಗದು ಹಣ, ಚಿನ್ನಾಭರಣ ದೋಚಿ ಕಳ್ಳರು ಪರಾರಿ!

By kannadanewsnow0507/02/2026 6:37 PM KARNATAKA 1 Min Read

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ದರೋಡೆ ನಡೆದಿದ್ದು ಮನೆಯ ಬೀಗ ಒಡೆದು ಹಣ ಮತ್ತು ಚಿನ್ನಾಭರಣವನ್ನು ದೋಚಿ ಕಳ್ಳರು ಪರಾರಿಯಾಗಿರುವ…

ಬೆಂಗಳೂರಿನ ‘ನಮ್ಮ ಮೆಟ್ರೋ ಪ್ರಯಾಣಿಕ’ರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ‘BMRCL’

07/02/2026 6:26 PM

BREAKING: ಇನ್ಮುಂದೆ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಜನಪ್ರತಿನಿಧಿ ಆಹ್ವಾನದ ವೇಳೆ ಈ ಶಿಷ್ಟಾಚಾರ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ

07/02/2026 6:16 PM

BREAKING : ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಗೆ ‘ಲೈಂಗಿಕ ಕಿರುಕುಳ’ ನೀಡಿದ ಪ್ರಾಧ್ಯಾಪಕನಿಗೆ ಬಿತ್ತು ಧರ್ಮದೇಟು!

07/02/2026 6:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.