ಬೆಂಗಳೂರು : ಬಟ್ಟೆ ಕೊಳಕಾಗಿದೆ ಶರ್ಟ್ ಗುಂಡಿ ಇಲ್ಲವೆಂದು ನಿನ್ನೆ ಬೆಂಗಳೂರಿನ ದೊಡ್ಡಕಲ್ಲಸಂದ್ರ ಮೆಟ್ರೋದಲ್ಲಿ ವ್ಯಕ್ತಿಯೊಬ್ಬನಿಗೆ ಮೆಟ್ರೋ ಸಿಬ್ಬಂದಿಗಳು ಪ್ರವೇಶಕ್ಕೆ ನಿರಾಕರಿಸಿದ್ದಾರೆ ಎಂದು ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಕುರಿತಾಗಿ ಇದೀಗ ಬಿಎಮ್ಆರ್‌ಪಿಎಲ್ ಸ್ಪಷ್ಟನೆ ನೀಡಿದ್ದು ಹಾಗಾಗಿ ಆತನಿಗೆ ಮೆಟ್ರೋ ರೈಲಿನಲ್ಲಿ ಪ್ರವೇಶಿಸಿದಂತೆ ಸಿಬ್ಬಂದಿ ತಡೆದಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.
ಬಿಎಂಆರ್‌ಸಿಎಲ್ ನಿಂದ ದೊಡ್ಡಕಲ್ಲಸಂದ್ರ ಘಟನೆ ಬಗ್ಗೆ ಇದೀಗ ಸ್ಪಷ್ಟೀಕರಣ ನೀಡಿದ್ದು, ಮದ್ಯ ಸೇವಿಸಿ ಮೆಟ್ರೋದಲ್ಲಿ ಪ್ರಯಾಣಿಸಲು ವ್ಯಕ್ತಿ ಒಬ್ಬ ಮುಂದಾಗಿದ್ದ, ಈ ವೇಳೆ ಮೆಟ್ರೋ ಭದ್ರತಾ ಸಿಬ್ಬಂದಿ ಆತನನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಮದ್ಯದ.ವಾಸನೆ ಗಮನಿಸಿ ಪ್ರಯಾಣಿಸಿದಂತೆ ಸಿಬ್ಬಂದಿಗಳು ಆತನಿಗೆ ಹೇಳಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಸುದ್ದಿ ವೈರಲ್ ಆಗಿತ್ತು.
ವ್ಯಕ್ತಿಯ ಬಟ್ಟೆ ಕೊಳಕಾಗಿತ್ತು ಶರ್ಟ್ ಬಟನ್ ಹರಿದಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಟ್ಟೆಯ ಕಾರಣಕ್ಕೆ ಮೆಟ್ರೋ ಸಿಬ್ಬಂದಿಗಳು ಆತನ ಪ್ರವೇಶಕ್ಕೆ ನಿರಾಕರಿಸಿದ್ದಾರೆ ಎಂದು ವೈರಲ್ ಆಗಿತ್ತು.ಬಟ್ಟೆ ಹರಿದಿರುವುದರಿಂದ ಆತನಿಗೆ ಪ್ರಯಾಣಿಸಲು ನಾವು ನಿರಾಕರಿಸಿಲ್ಲ ಎಂದು ಇದೀಗ ಬಿ ಎಂ ಆರ್ ಸಿ ಎಲ್ ಸ್ಪಷ್ಟನೆ ನೀಡಿದೆ. ಮದ್ಯ ಸೇವನೆ ಹಿನ್ನೆಲೆ ಪ್ರಯಾಣಿಸಲು ನಿರಾಕರಿಸಿದ್ದಾಗಿ ಬಿಎಮ್ಆರ್‌ಸಿಎಲ್ ಸ್ಪಷ್ಟನೆ ನೀಡಿದೆ.