ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆಯನ್ನು ಮಾಡೋದೋ ಅಥವಾ ಇಲ್ಲವೋ ಎನ್ನುವ ಬಗ್ಗೆ ನಿರ್ಧರಿಸೋ ಸಂಬಂಧ ಇಂದು ಬಿಎಂಆರ್ ಸಿಎಲ್ ಬೋರ್ಡ್ ಸಭೆ ನಿಗದಿಯಾಗಿತ್ತು. ಆದರೇ ಇಂತಹ ಸಭೆಯನ್ನು ದಿಢೀರ್ ರದ್ದುಪಡಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇಂದು ನಮ್ಮ ಮೆಟ್ರೋ ದರ ಏರಿಕೆಯನ್ನು ರದ್ದುಗೊಳಿಸೋ ಸಂಬಂಧ ಬಿಎಂಆರ್ ಸಿಎಲ್ ಬೋರ್ಡ್ ಮೀಟಿಂಗ್ ನಿಗದಿಯಾಗಿತ್ತು. ಆ ಸಭೆಯನ್ನು ಅನಿವಾರ್ಯ ಕಾರಣಗಳಿಂದಾಗಿ ರದ್ದುಗೊಳಿಸಲಾಗಿದೆ. ಬೆಂಗಳೂರಿನ ಶಾಂತಿನಗರದ ಬಿಎಂಆರ್ ಸಿಎಲ್ ಕಚೇರಿಯಲ್ಲಿ ಈ ಸಭೆ ನಡೆಸಲು ನಿಗದಿ ಪಡಿಸಲಾಗಿತ್ತು.
ಇಂದು ಮೆಟ್ರೋ ದರ ಏರಿಕೆಯ ಸಂಬಂಧ ನಿರ್ಧಾರ ಆಗಬೇಕಿತ್ತು. ಮೆಟ್ರೋ ಟಿಕೆಟ್ ದರ ಏರಿಕೆ ಭವಿಷ್ಯ ನಿರ್ಧಾರಗೊಳ್ಳಬೇಕಿತ್ತು. ಆದರೇ ಬೋರ್ಡ್ ಮೀಟಿಂಗ್ ರದ್ದುಗೊಂಡಿದೆ. ಈ ಬಿಎಂಆರ್ ಸಿಎಲ್ ಬೋರ್ಡ್ ಮೀಟಿಂಗ್ ನಾಳೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇವು ವಿಶ್ವದ ಅತಿ ಹೆಚ್ಚು `ಆದಾಯ’ ಹೊಂದಿರುವ ಟಾಪ್ 10 ಕಂಪನಿಗಳು : `ರಿಲಯನ್ಸ್’ಗೆ ಎಷ್ಟನೇ ಸ್ಥಾನ ಗೊತ್ತಾ?
BREAKING: ನಾಳೆ ಬೆಳಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ








