ಬೆಳಗಾವಿ: ಜಿಲ್ಲೆಯ ಸುಳೇಭಾವಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ರೌಡಿಗಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
BIGG NEWS: ಆಳಂದ ತಾಲೂಕು ಆರೋಗ್ಯಾಧಿಕಾರಿ ವಿರುದ್ಧ ಹಣ ಡ್ರಾ ಮಾಡಿಕೊಂಡ ಆರೋಪ; ದೂರು ದಾಖಲು
28 ವರ್ಷದ ಮಹೇಶ್ ಮುರಾರಿ ಹಾಗೂ 24 ವರ್ಷದ ಪ್ರಕಾಶ್ ಹುಂಕರಿ ಪಾಟೀಲ್ ಹತ್ಯೆಯಾದವರು.
ನಿನ್ನೆ ರಾತ್ರಿ ಕೆಲ ಪಡ್ಡೆ ಹುಡುಗರು ಸುಳೇಭಾವಿ ಗ್ರಾಮದ ಲಕ್ಷ್ಮಿ ಗಲ್ಲಿಯ ಶಿವಾಜಿ ಪ್ರತಿಮೆಯ ಬಳಿ ನಿಂತು ಹರಟೆ ಹೊಡೆಯುತ್ತಿದ್ದರು. ಎಂಟೂವರೆ ಗಂಟೆ ಸುಮಾರಿಗೆ ಕೈಯಲ್ಲಿ ಮಾರಕಾಸ್ತ್ರಗಳು ಹಾಗೂ ಖಾರದ ಪುಡಿ ಹಿಡಿದುಕೊಂಡು ಬಂದ 10ಕ್ಕೂ ಅಧಿಕ ಯುವಕರ ಗ್ಯಾಂಗ್ ಅಲ್ಲೇ ನಿಂತಿದ್ದವರ ಮೇಲೆ ದಾಳಿ ಮಾಡಿದೆ.
BIGG NEWS: ಆಳಂದ ತಾಲೂಕು ಆರೋಗ್ಯಾಧಿಕಾರಿ ವಿರುದ್ಧ ಹಣ ಡ್ರಾ ಮಾಡಿಕೊಂಡ ಆರೋಪ; ದೂರು ದಾಖಲು
ಯುವಕರ ಗ್ಯಾಂಗ್ ರೌದ್ರಾವತಾರ ಕಂಡ ಕೆಲ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಇಬ್ಬರನ್ನ ಮಾತ್ರ ಎಲ್ಲಿಯೂ ಹೋಗದಂತೆ ತಡೆದಿದ್ದಾರೆ. ಈ ವೇಳೆ ಓರ್ವನನ್ನ ಶಿವಾಜಿ ವೃತ್ತದಲ್ಲೇ ಹತ್ಯೆ ಮಾಡಿದರೆ, ಇನ್ನೋರ್ವ ಅಲ್ಲಿಂದ ಎಸ್ಕೇಪ್ ಆಗಿ ಅಲ್ಲೇ ಇದ್ದ ಗಣಪತಿ ದೇವಸ್ಥಾನಕ್ಕೆ ಹೋಗಿ ಜೀವ ಉಳಿಸಿಕೊಳ್ಳಲು ಯತ್ನಿಸಿದ್ದಾನೆ. ದೇವಸ್ಥಾನದ ಕಟ್ಟೆಯ ಮೇಲೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.