ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ತರಾವರಿ ಪ್ರಚೋದನಕಾರಿ ಪೋಸ್ಟ್ ಗಳು ವೈರಲ್ ಆಗಿದ್ದವು. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ರಕ್ತಕ್ಕೆ ರಕ್ತವೇ ಉತ್ತರ ಎಂಬುದಾಗಿ ಪೋಸ್ಟ್ ಹಾಕಿದಂತ 12 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಸೋಷಿಲ್ ಮೀಡಿಯಾಗಳ ಮೇಲೆ ಪೊಲೀಸರು ಹತ್ತಿನ ಕಣ್ಣಿಟ್ಟಿದ್ದರು. ಇನ್ಸ್ಟಾ ಗ್ರಾಂ, ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿನ ಸಂದೇಶ, ಪೋಸ್ಟ್ ಗಳ ಬಗ್ಗೆ ಗಮನ ಇರಿಸಲಾಗಿತ್ತು. ಈ ಸಾಮಾಜಿಕ ಮಾಧ್ಯಮಗಳಲ್ಲಿ ಮುಲ್ಕಿ ಉರ್ವಾ, ಮಂಗಳೂರು ಉತ್ತರ, ಬರ್ಕೆ, ಮಂಗಳೂರು ದಕ್ಷಿಣ, ಮೂಡಬಿದ್ರೆ, ಕಾವೂರು ಠಾಣೆ ವ್ಯಾಪ್ತಿಯಲ್ಲಿ ಶತ್ರು ಸಂಹಾರ ಶುರುವಾಗಿದೆ, ಪ್ರತಿರೋಧ ಅಪರಾಧವಲ್ಲ, ಸುಹಾಸ್ ಬಲಿದಾದ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮನ್ನು ಬೆಂಬಲಿಸಿ ಅಂತೆಲ್ಲ ಪೋಸ್ಟ್ ಮಾಡಿದವರ ವಿರುದ್ಧ 12 ಎಫ್ಐಆರ್ ದಾಖಲಾಗಿದೆ.
BREAKING: ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್: ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿ ಬರ್ಬರ ಹತ್ಯೆ
ಭೂಕಬಳಿಕೆದಾರರಿಂದ ಶೀಬಿ ಅರಣ್ಯಭೂಮಿ ರಕ್ಷಣೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ