ಮೈಸೂರು : ನಾನು ಹಿಂದುಳಿದ ವರ್ಗದ ನಾಯಕನೆಂದು ಕೆಲವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನಿನ್ನೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು ಈ ಒಂದು ಹೇಳಿಕೆಗೆ ವಿಪಕ್ಷ ನಾಯಕ ನೀಡಿದ್ದು ನಿಜವಾದ ಹಿಂದುಳಿದ ವರ್ಗಗಳ ನಾಯಕ ಎಂದರೆ ಅದು ಬಿಕೆ ಎಂದು ತಿರುಗೇಟು ನೀಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಿಂದುಳಿದ ವರ್ಗದವನು ಎಂಬ ಕಾರಣಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಸಿಎಂ ಹೇಳಿಕೆಗೆ ಆರ್ ಅಶೋಕ ಪ್ರತಿಕ್ರಿಯೆ ನೀಡಿದ್ದು, ಹಿಂದುಳಿದ ವರ್ಗದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಏನು ಹೇಳಿದ್ದಾರೆ? ಬಿಜೆಪಿಯವರು ಬಿಟ್ಟರೂ ನಾನು ಬಿಡಲ್ಲ ಅಂತ ಹರಿಪ್ರಸಾದ್ ಹೇಳಿದ್ದಾರೆ.
ಇಬ್ಬರು ನಾಯಕರ ಕೈವಾಡ ಇದೆ ಹೋರಾಟ ಮಾಡುತ್ತೇನೇ. ಅಂದಿದ್ದಾರೆ. ಬಿಕೆ ಹರಿಪ್ರಸಾದ್ ನಿಜವಾದ ಹಿಂದುಳಿದ ನಾಯಕ ವಾಲ್ಮೀಕಿ ನಿಗಮದ ಹಗರಣದಲ್ಲೂ ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಕೆಲ ಪ್ರಕರಣದಲ್ಲಿ ರೇವಣ್ಣ ಸೇರಿ ಎಲ್ಲರನ್ನು ತಕ್ಷಣ ಅರೆಸ್ಟ್ ಮಾಡುತ್ತಾರೆ ಅದೇ ರೀತಿ ನಾಗೇಂದ್ರ ಅವರನ್ನು ಬಂಧಿಸಬೇಕಿತ್ತು. ಆದರೆ ಕಾಂಗ್ರೆಸ್ ಮಾಡಲಿಲ್ಲ ಈಗ ವಿಡಿಯೋ ಅಧಿಕಾರಿಗಳು ಅವರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ ಎಂದು ಮೈಸೂರಿನಲ್ಲಿ ವಿರೋಧ ಪಕ್ಷದ ನಾಯಕ ಆರಶೋಕ್ ಹೇಳಿಕೆ ನೀಡಿದರು.