ಬೆಂಗಳೂರು : ಬಾಬಾ ಸಾಹೇಬರ ಮಾನವೀಯ ಸಿದ್ದಾಂತಕ್ಕೂ ಮನುವಾದಿ ಸಿದ್ದಾಂತಕ್ಕೆ ಎತ್ತಿಂದೆತ್ತಣ ಸಂಬಂಧ? ಇತಿಹಾಸದ ಸತ್ಯಗಳನ್ನ ಮರೆಮಾಚಿ, ಬಾಬಾ ಸಾಹೇಬರ ಹೆಸರಿಗೆ ಮಸಿ ಬಳಿಯುವುದನ್ನ ಬಿಜೆಪಿ ನಿಲ್ಲಿಸದಿದ್ದರೆ, ಜನರು ತಕ್ಕ ಪಾಠ ಕಲಿಸುವುದು ಗ್ಯಾರೆಂಟಿ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ವಾಗ್ಧಾಳಿ ನಡೆಸಿದ್ದಾರೆ.
ಸರಣಿ ಟ್ವಿಟ್ ನಲ್ಲಿ ಕಿಡಿಕಾರಿದ ಅವರು ಬಾಬಾ ಸಾಹೇಬರ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಇತಿಹಾಸದ ಸತ್ಯಗಳನ್ನ ಮರೆಮಾಚಿ, ಮೊಸಳೆ ಕಣ್ಣೀರು ಸುರಿಸುತ್ತಿರುವುದು ನಾಚಿಕೆಗೇಡು. ವಾಟ್ಸಪ್ ಯೂನಿವರ್ಸಿಟಿಯಲ್ಲಿ ಉತ್ಪಾದಿಸಿದ ಸುಳ್ಳುಗಳನ್ನ ಹರಿ ಬಿಟ್ಟಿರುವುದು, ಅಂಬೇಡ್ಕರ್ ಪರಿನಿರ್ವಾಣ ದಿನದಂದು ಬಾಬಾ ಸಾಹೇಬರಿಗೆ ಮಾಡಿದ ಅವಮಾನವಲ್ಲವೇ ಬಿಜೆಪಿ ಎಂದು ಪ್ರಶ್ನಿಸಿದ್ದಾರೆ. ‘
ಸಾರ್ವತ್ರಿಕ ಚುನಾವಣೆಯಲ್ಲಿ ಬಾಬಾ ಸಾಹೇಬರ ವಿರುದ್ಧ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದು ನಿಜಾ.ಅದೊಂದು ಚುನಾವಣಾ ಪ್ರಕ್ರಿಯೆ. ಆದ್ರೆ ಇಂದಿನ ಬಿಜೆಪಿ ಮುಖವಾಡವೇ ಆಗಿದ್ದ ಹಿಂದೂ ಮಹಾಸಭಾ,ಬಾಬಾ ಸಾಹೇಬರ ವಿರುದ್ಧ ಸ್ಪರ್ಧಿಸಿದ್ದು ಸುಳ್ಳಾ? ಬಾಬಾ ಸಾಹೇಬರಿಗೆ ಮತ ನೀಡಬೇಡಿ,ಹಿಂದೂ ವಿರೋಧಿಯೆಂದು ಪ್ರಚಾರ ಮಾಡಿದ್ದು ಸುಳ್ಳಾ? ಎಂದು ಕಿಡಿಕಾರಿದ್ದಾರೆ,
ಮನುವಾದಿ ಬಿಜೆಪಿಯ ಮುಖವಾಡವನ್ನ ಬಾಬಾ ಸಾಹೇಬರು ಅಂದೇ ಮನುಸ್ಮೃತಿಯನ್ನ ಸುಡುವ ಮೂಲಕ ದೇಶಕ್ಕೆ ಸಾರಿದ್ದು ಸುಳ್ಳಾ? ಮನುಷ್ಯ ವಿರೋಧಿ ಮನುಸ್ಮೃತಿಯನ್ನ ಸುಟ್ಟ ಸಿಟ್ಟಿಗೆ ಬಿಜೆಪಿ ಇಂದು ಸಂವಿಧಾನವನ್ನೇ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಿರುವುದು ನಿಜಾ ಅಲ್ವಾ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಮನುವಾದಿ ಬಿಜೆಪಿಯ ಮುಖವಾಡವನ್ನ ಬಾಬಾ ಸಾಹೇಬರು ಅಂದೇ ಮನುಸ್ಮೃತಿಯನ್ನ ಸುಡುವ ಮೂಲಕ ದೇಶಕ್ಕೆ ಸಾರಿದ್ದು ಸುಳ್ಳಾ?
ಮನುಷ್ಯ ವಿರೋಧಿ ಮನುಸ್ಮೃತಿಯನ್ನ ಸುಟ್ಟ ಸಿಟ್ಟಿಗೆ ಬಿಜೆಪಿ ಇಂದು ಸಂವಿಧಾನವನ್ನೇ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಿರುವುದು ನಿಜಾ ಅಲ್ವಾ @BJP4Karnataka ?
4/5— Hariprasad.B.K. (@HariprasadBK2) December 6, 2022
ಬಾಬಾ ಸಾಹೇಬರ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಇತಿಹಾಸದ ಸತ್ಯಗಳನ್ನ ಮರೆಮಾಚಿ, ಮೊಸಳೆ ಕಣ್ಣೀರು ಸುರಿಸುತ್ತಿರುವುದು ನಾಚಿಕೆಗೇಡು.
ವಾಟ್ಸಪ್ ಯೂನಿವರ್ಸಿಟಿಯಲ್ಲಿ ಉತ್ಪಾದಿಸಿದ ಸುಳ್ಳುಗಳನ್ನ ಹರಿ ಬಿಟ್ಟಿರುವುದು, ಅಂಬೇಡ್ಕರ್ ಪರಿನಿರ್ವಾಣ ದಿನದಂದು ಬಾಬಾ ಸಾಹೇಬರಿಗೆ ಮಾಡಿದ ಅವಮಾನವಲ್ಲವೇ @BJP4Karnataka ?
1/5— Hariprasad.B.K. (@HariprasadBK2) December 6, 2022
ಬಾಬಾ ಸಾಹೇಬರ ಮಾನವೀಯ ಸಿದ್ದಾಂತಕ್ಕೂ @BJP4Karnataka ಮನುವಾದಿ ಸಿದ್ದಾಂತಕ್ಕೆ ಎತ್ತಿಂದೆತ್ತಣ ಸಂಬಂಧ?
ಇತಿಹಾಸದ ಸತ್ಯಗಳನ್ನ ಮರೆಮಾಚಿ, ಬಾಬಾ ಸಾಹೇಬರ ಹೆಸರಿಗೆ ಮಸಿ ಬಳಿಯುವುದನ್ನ ಬಿಜೆಪಿ ನಿಲ್ಲಿಸದಿದ್ದರೆ, ಜನರು ತಕ್ಕ ಪಾಠ ಕಲಿಸುವುದು ಗ್ಯಾರೆಂಟಿ.
5/5— Hariprasad.B.K. (@HariprasadBK2) December 6, 2022
BIGG NEW : ಅಳುವ ಮಕ್ಕಳನ್ನು ಸಂಭಾಳಿಸಲು ಸರ್ಕಾರಿ ಸೌಮ್ಯದ ಕೇರಳ ಚಿತ್ರಮಂದಿರಗಳಲ್ಲಿ ‘Crying Room’ ನಿರ್ಮಾಣ
ಸಚಿವ ಬಿ.ಸಿ ನಾಗೇಶ್ ತಮ್ಮ ಹಿಡನ್ ಅಜೆಂಡಾಕ್ಕಾಗಿ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸಬಾರದು – ರಮೇಶ್ ಬಾಬು ಕಿಡಿ