ಕೆಎನ್ಎನ್ ಡಿಜಿಟಲ್ ಡೆಸ್ಕ್ : ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಭಾರತದ ವೈವಿಧ್ಯತೆ ಮತ್ತು ಮುಸ್ಲಿಂ ಗುರುತನ್ನು ಕೊನೆಗೊಳಿಸುವುದು ಕೇಸರಿ(ಬಿಜೆಪಿ) ಪಕ್ಷದ ನಿಜವಾದ ಅಜೆಂಡಾ ಎಂದು ಆರೋಪಿಸಿದ್ದಾರೆ.
ಹಲಾಲ್ ಮಾಂಸ, ಮುಸ್ಲಿಮರ ಟೋಪಿಗಳು, ಗಡ್ಡ, ಅವರ ಆಹಾರ ಪದ್ಧತಿಗಳಿಂದ ಅವರಿಗೆ ಅಪಾಯವಿದೆ ಎಂದು ಅವರು ಭಾವಿಸುತ್ತಾರೆ. ಬಿಜೆಪಿ ನಿಜವಾಗಿಯೂ ಮುಸ್ಲಿಂ ಅಸ್ಮಿತೆಯ ವಿರುದ್ಧವಾಗಿದೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಎಂಬ ಪ್ರಧಾನಿ ಮಾತುಗಳು ಖಾಲಿ ಮಾತುಗಳಾಗಿವೆ. ಭಾರತದ ವೈವಿಧ್ಯತೆ ಮತ್ತು ಮುಸ್ಲಿಂ ಅಸ್ಮಿತೆಯನ್ನು ಕೊನೆಗೊಳಿಸುವುದೇ ಬಿಜೆಪಿಯ ನಿಜವಾದ ಅಜೆಂಡಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಗುಜರಾತ್ನ ಖೇಡಾ ಜಿಲ್ಲೆಯಲ್ಲಿ ಗರ್ಬಾ ಡ್ಯಾನ್ಸ್ ಭಾಗವಹಿಸುವವರ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಕೆಲವು ಮುಸ್ಲಿಂ ಸಮುದಾಯದ ಸದಸ್ಯರ ಮೇಲೆ ಸಾರ್ವಜನಿಕವಾಗಿ ಕೆಲವು ಪೊಲೀಸರು ಥಳಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ಬೆನ್ನಲ್ಲೆ, ಓವೈಸಿಯವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೇಶದಲ್ಲಿ ಬಿಜೆಪಿ ಸರ್ಕಾರ ಎಲ್ಲೇ ಇದ್ದರೂ ಮುಸ್ಲಿಮರು ತೆರೆದ ಜೈಲಿನಲ್ಲಿ ವಾಸಿಸುತ್ತಿದ್ದಾರೆ ಎಂದು ಭಾಸವಾಗುತ್ತದೆ. ಮುಸ್ಲಿಮರಿಗಿಂತ ರಸ್ತೆ ನಾಯಿಗೆ ಹೆಚ್ಚು ಗೌರವವಿದೆ ಎಂದು ನಿನ್ನೆ ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ವಿವಾಹದಲ್ಲಿ ‘ಆಯ್ಕೆ ಸ್ವಾತಂತ್ರ್ಯ’ ಸಂವಿಧಾನದ ಅಂತರ್ಗತ ಭಾಗ ; ಹೈಕೋರ್ಟ್