ಬೀದರ್: ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ಇಂದು ಮಂಗಳವಾರ ಬಿಜೆಪಿ ಜನ ಸಂಕಲ್ಪಯಾತ್ರೆಯ ಹೆಸರಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
BIGG NEWS: ಬಾಗಲಕೋಟೆಯಲ್ಲಿ ಮಾರ್ಯಾದೆ ಹತ್ಯೆ; ಪ್ರೇಮಿಗಳಿಬ್ಬರನ್ನು ನಂಬಿಸಿ ಕೊಲೆ ಮಾಡಿದ ಪೋಷಕರು
ಔರಾದ್ ಪಟ್ಟಣದ ಅಮರೇಶ್ವರ ಕಾಲೇಜು ಮೈದಾನದಲ್ಲಿ ಸಂಕಲ್ಪಯಾತ್ರೆಗಾಗಿ ಬೃಹತ್ ವೇದಿಕೆ ಸಜ್ಜಾಗಿದೆ. ಹುಮ್ನಾಬಾದ್ ಪಟ್ಟಣದ ಥೇರು ಮೈದಾನದಲ್ಲಿಯೂ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಎರಡೂ ಜನ ಸಂಕಲ್ಪಯಾತ್ರೆ ಸಮಾವೇಶಗಳಲ್ಲಿ ತಲಾ ಸುಮಾರು 50 ಸಾವಿರ ಜನರು ಸೇರುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಹಲವು ಸಚಿವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೀದರ್ನ ವಾಯುನೆಲೆಗೆ ಬಂದ ಸಿಎಂ ಬೊಮ್ಮಾಯಿ, ಹೆಲಿಕಾಪ್ಟರ್ ಮೂಲಕ ಬಲ್ಲೂರು (ಜೆ) ಗ್ರಾಮಕ್ಕೆ ತೆರಳಿ ‘ಸಿಪೆಟ್’ ಕಾಲೇಜಿಗೆ ಭೂಮಿಪೂಜೆ ನೆರವೇರಿಸಿದರು.