Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

RTI ನಿಯಮ ಪಾಲಿಸದ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬಿಸಿ: ಈ ಮಾರ್ಗಸೂಚಿ ಪ್ರಕಟ, ಪಾಲನೆ ಕಡ್ಡಾಯ!

BREAKING: ಪಿಎಂ ಮೋದಿ ಕುರಿತು ದಾರಿ ತಪ್ಪಿಸುವ ಎಕ್ಸ್ ಪೋಸ್ಟ್: ಮಧು ಕಿಶ್ವರ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್!

Monsoon Rain: ದೇಶದ ಅನ್ನದಾತರಿಗೆ ಶಾಕಿಂಗ್ ನ್ಯೂಸ್: ಈ ವರ್ಷ ಶೇ.90ರಷ್ಟು ಮಾತ್ರ ಮುಂಗಾರು ಮಳೆ- IMD ಮುನ್ಸೂಚನೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮುಸ್ಲೀಮರನ್ನು ಆಚೆ ಇಡಬೇಕೆಂಬುದು ಬಿಜೆಪಿಯ ಹತಾಶೆ, ದುರುದ್ದೇಶದ ಹೇಳಿಕೆಯಾಗಿದೆ: ರಮೇಶ್ ಬಾಬು
KARNATAKA

ಮುಸ್ಲೀಮರನ್ನು ಆಚೆ ಇಡಬೇಕೆಂಬುದು ಬಿಜೆಪಿಯ ಹತಾಶೆ, ದುರುದ್ದೇಶದ ಹೇಳಿಕೆಯಾಗಿದೆ: ರಮೇಶ್ ಬಾಬು

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ದೇಶದ ಸಾಮಾಜಿಕ ವಾಹಿನಿಯಿಂದ ಮುಸಲ್ಮಾನರನ್ನು ಆಚೆ ಇಡಬೇಕೆಂಬ ಬಿಜೆಪಿಯ ರಾಜಕೀಯ ಹೇಳಿಕೆಯು ಅವರ ಹತಾಶೆಯ ಹೇಳಿಕೆಯಾಗಿದ್ದು, ದುರುದ್ದೇಶದಿಂದ ಕೂಡಿರುತ್ತದೆ ಎಂಬುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ವಾಗ್ಧಾಳಿ ನಡೆಸಿದ್ದಾರೆ.

ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯದ ಪರಿಪಾಲನೆಯ ಹಿನ್ನೆಲೆಯಲ್ಲಿ ಕರ್ನಾಟಕದ 2025-26ರ ಆಯವ್ಯಯದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಕಾಯಿದೆಗೆ ಅನುಗುಣವಾಗಿ ಸರ್ಕಾರಿ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2A ಮತ್ತು ಪ್ರವರ್ಗ-2B ಗುತ್ತಿಗೆದಾರರಿಗೆ ಎರಡು ಕೋಟಿ ರೂಪಾಯಿಗಳ ವರೆಗಿನ ಕಾಮಗಾರಿಗಳನ್ನು ನೀಡಲು ಘೋಷಣೆಯನ್ನು ಮಾಡಿರುತ್ತದೆ ಎಂದಿದ್ದಾರೆ.

ಆರ್ಥಿಕವಾಗಿ ಈ ಸಮುದಾಯಗಳನ್ನು ಸಬಲೀಕರಣ ಮಾಡುವ ಉದ್ದೇಶದಿಂದ ಅಲ್ಪಸಂಖ್ಯಾತರನ್ನು ಒಳಗೊಂಡಂತೆ ಆಯವ್ಯಯದಲ್ಲಿ ಘೋಷಣೆಯನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಮಾಡಲಾಗಿರುತ್ತದೆ. ರಾಜಕೀಯ ವೈಷಮ್ಯಕ್ಕಾಗಿ ಅಲ್ಪಸಂಖ್ಯಾತ ಮುಸಲ್ಮಾನರನ್ನು ದ್ವೇಷ ಮಾಡುವ ಬಡಾಯಿ ಜನತಾ ಪಾರ್ಟಿ (ಬಿಜೆಪಿ), ಸತ್ಯವನ್ನು ತಿರುಚಿ ಸುಳ್ಳು ಸುದ್ದಿಗಳ ಮೂಲಕ ಜನರನ್ನು ಧಾರ್ಮಿಕವಾಗಿ ಕೆರಳಿಸುವ ಸಂಚನ್ನು ಮಾಡುತ್ತಿದೆ. ಶೋಷಿತ ಸಮುದಾಯಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಆಯಾ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರಗಳು ಕೆಳಕಂಡಂತೆ ಕರ್ನಾಟಕದಲ್ಲಿ ಯೋಜನೆಗಳನ್ನು ನೀಡಿರುತ್ತವೆ ಎಂದಿದ್ದಾರೆ.

1. 2015 ರಲ್ಲಿ, ರೂ 50 ಲಕ್ಷಗಳ ಮಿತಿಯೊಂದಿಗೆ ಗುತ್ತಿಗೆ ಕೆಲಸಗಳಲ್ಲಿ SC/ST ಗಾಗಿ 24% ಮೀಸಲಾತಿಗಾಗಿ ಮಸೂದೆಯನ್ನು ಪ್ರಸ್ತಾಪಿಸಲಾಯಿತು. ಈ ಮಸೂದೆಯನ್ನು ಕರ್ನಾಟಕದಲ್ಲಿ 2017 ರಲ್ಲಿ ಜಾರಿಗೆ ತರಲಾಯಿತು.
2. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಜುಲೈ, 2023 ರಲ್ಲಿ, ಎಸ್ಸಿ/ಎಸ್ಟಿಗಳಿಗೆ ರೂ 50 ಲಕ್ಷಗಳ ಮಿತಿಯನ್ನು ರೂ ಒಂದು ಕೋಟಿಗೆ ಏರಿಸಿತು.
3. ಜೂನ್ 2024 ರಲ್ಲಿ, ಸಿವಿಲ್ ವರ್ಕ್ಸ್ ಗುತ್ತಿಗೆಗಳಲ್ಲಿ ಈ ಮೀಸಲಾತಿಯನ್ನು ವಿಸ್ತರಿಸಲಾಯಿತು
* ವರ್ಗ-I ಗೆ ಸೇರಿದ OBC ಗುತ್ತಿಗೆದಾರರು ಅಂದರೆ ಅತ್ಯಂತ ಹಿಂದುಳಿದವರು (4%)
* ವರ್ಗ- IIA ಅಂದರೆ ತುಲನಾತ್ಮಕವಾಗಿ ಅತ್ಯಂತ ಹಿಂದುಳಿದ (15%)
4. ಮಾರ್ಚ್ 2025 ರಲ್ಲಿ, ಸಿವಿಲ್ ವರ್ಕ್ಸ್ ಗುತ್ತಿಗೆಗಳಲ್ಲಿ ಮೀಸಲಾತಿಯ ಮಿತಿಯನ್ನು ರಾಜ್ಯಾದ್ಯಂತ ರೂ. ಎರಡು ಕೋಟಿ ಈ ಕೆಳಗಿನಂತೆ ಅನ್ವಯಿಸುತ್ತದೆ:-
• SC/ST ಗಳಿಗೆ 24%
• OBC ಗುತ್ತಿಗೆದಾರರಿಗೆ 4% ವರ್ಗ- I ಗೆ ಸೇರಿದೆ
• IIA ವರ್ಗಕ್ಕೆ ಸೇರಿದ OBC ಗುತ್ತಿಗೆದಾರರಿಗೆ 15%
• ವರ್ಗ IIB ಗೆ ಸೇರಿದ OBC ಗುತ್ತಿಗೆದಾರರಿಗೆ 4%

5. ಹಿಂದಿನ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ವರ್ಗೀಕರಣವನ್ನು ಸೆಪ್ಟೆಂಬರ್, 1994 ರಲ್ಲಿ ಜಾರಿ ಮಾಡಿತು. ಅದರ ಅಡಿಯಲ್ಲಿ ಮುಸ್ಲಿಂ ಸಮುದಾಯಗಳನ್ನು ವರ್ಗ- IIB ಅಡಿಯಲ್ಲಿ ಪಟ್ಟಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

6. ಡಿಸೆಂಬರ್ 20, 2019 ರಂದು, ಕರ್ನಾಟಕ ಹೈಕೋರ್ಟ್ ಸಿವಿಲ್ ವರ್ಕ್ ಗುತ್ತಿಗೆಗಳ ಮೀಸಲಾತಿಯನ್ನು ಎತ್ತಿಹಿಡಿದಿದೆ ಎಂದಿದ್ದಾರೆ.

ಈ ಅಂಶಗಳು ವಾಸ್ತವವಾಗಿದ್ದು, ಸಾಮಾಜಿಕ ನ್ಯಾಯದ ವಿರುದ್ಧವಾಗಿರುವ, ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಧರ್ಮಾಧಾರಿತವಾಗಿ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹವಣಿಸುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕ ಕಾಂಗ್ರೆಸ್ ಸರ್ಕಾರದ ನೀತಿ ಮತ್ತು ನಿಲುವುಗಳನ್ನು ಪ್ರಶ್ನಿಸುವುದರ ಮೂಲಕ ಬೆತ್ತಲಾಗುತ್ತಿವೆ. ಈ ದೇಶದ ಸಾಮಾಜಿಕ ವಾಹಿನಿಯಿಂದ ಮುಸಲ್ಮಾನರನ್ನು ಆಚೆ ಇಡಬೇಕೆಂಬ ಬಿಜೆಪಿಯ ರಾಜಕೀಯ ಹೇಳಿಕೆಯು ಅವರ ಹತಾಶೆಯ ಹೇಳಿಕೆಯಾಗಿದ್ದು, ದುರುದ್ದೇಶದಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕದ ಹೆಮ್ಮೆಯ KSRTCಗೆ 3 ಅಂತಾರಾಷ್ಟ್ರೀಯ ಮಟ್ಟದ ಬ್ರಾಂಡ್ ಕೌನ್ಸಿಲ್ ರೇಟಿಂಗ್ ಪ್ರಶಸ್ತಿ

BREAKING : ನಾನು ಸೇರಿದಂತೆ ಎಲ್ಲಾ ವಿರೋಧ ಪಕ್ಷದ ನಾಯಕರ ‘ಫೋನ್ ಟ್ಯಾಪಿಂಗ್’ ಆಗ್ತಿದೆ : ಆರ್ ಅಶೋಕ್ ಸ್ಪೋಟಕ ಹೇಳಿಕೆ!

Share. Facebook Twitter LinkedIn WhatsApp Email

Related Posts

RTI ನಿಯಮ ಪಾಲಿಸದ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬಿಸಿ: ಈ ಮಾರ್ಗಸೂಚಿ ಪ್ರಕಟ, ಪಾಲನೆ ಕಡ್ಡಾಯ!

2 Mins Read

ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ್ ನಕಾರ

2 Mins Read

ಬೆಂಗಳೂರಲ್ಲಿ ವರುಣನ ಆರ್ಭಟಕ್ಕೆ ಮತ್ತೊಂದು ಬಲಿ: ಭಾರಿ ಮಳೆಗೆ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವು

1 Min Read
Recent News

RTI ನಿಯಮ ಪಾಲಿಸದ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬಿಸಿ: ಈ ಮಾರ್ಗಸೂಚಿ ಪ್ರಕಟ, ಪಾಲನೆ ಕಡ್ಡಾಯ!

BREAKING: ಪಿಎಂ ಮೋದಿ ಕುರಿತು ದಾರಿ ತಪ್ಪಿಸುವ ಎಕ್ಸ್ ಪೋಸ್ಟ್: ಮಧು ಕಿಶ್ವರ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್!

Monsoon Rain: ದೇಶದ ಅನ್ನದಾತರಿಗೆ ಶಾಕಿಂಗ್ ನ್ಯೂಸ್: ಈ ವರ್ಷ ಶೇ.90ರಷ್ಟು ಮಾತ್ರ ಮುಂಗಾರು ಮಳೆ- IMD ಮುನ್ಸೂಚನೆ

Too much sex: ಅತಿಯಾದ ಲೈಂಗಿಕ ಕ್ರಿಯೆಯಿಂದ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾಗುತ್ತಾ? ತಜ್ಞರ ಮಾಹಿತಿ ಇಲ್ಲಿದೆ

State News
KARNATAKA

RTI ನಿಯಮ ಪಾಲಿಸದ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬಿಸಿ: ಈ ಮಾರ್ಗಸೂಚಿ ಪ್ರಕಟ, ಪಾಲನೆ ಕಡ್ಡಾಯ!

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಮಾಹಿತಿ ಹಕ್ಕು ಅಧಿನಿಯಮ (RTI), 2005ರ ನಿಬಂಧನೆಗಳನ್ನು ಜಾರಿಗೊಳಿಸುವಲ್ಲಿ ಮತ್ತು ಮೇಲ್ಮನವಿಗಳನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ…

ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರಲ್ಲಿ ವರುಣನ ಆರ್ಭಟಕ್ಕೆ ಮತ್ತೊಂದು ಬಲಿ: ಭಾರಿ ಮಳೆಗೆ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವು

Lokayukta Raid: ಬೆಂಗಳೂರಲ್ಲಿ 15 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ಬೆಸ್ಕಾಂ ಜಾಗೃತದಳದ ಎಇಇ ಲೋಕಾಯುಕ್ತ ಬಲೆಗೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.