ಬೆಂಗಳೂರು: ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ( BJP Government ) ಆಡಳಿತದ ಅವಧಿಯಲ್ಲಿನ ಲಂಚದ ಬಗ್ಗೆ, ಕಾಂಗ್ರೆಸ್ ಪಕ್ಷದಿಂದ ( Congress Party ) ಬಿಜೆಪಿ ಲಂಚ ರೇಟ್ ಕಾರ್ಡ್ ಬಿಡುಗಡೆ ಮಾಡಲಾಗಿದೆ. 40% ಸರ್ಕಾರ, ಬಿಜೆಪಿ ಅಂದ್ರೇ ಭ್ರಷ್ಟಾಚಾರ ಎಂಬುದಾಗಿ ಹೇಳಿದೆ.
ಕಾಂಗ್ರೆಸ್ ನಿಂದ ಬಿಡುಗಡೆ ಮಾಡಲಾಗಿರುವಂತ ಬಿಜೆಪಿ ಲಂಚ ರೇಟ್ ಕಾರ್ಡ್ ನಂತೆ, ಸರ್ಕಾರವು ಕೋವಿಡ್ ಕಿಟ್ ಪೂರೈಕೆಯಲ್ಲಿ ಶೇ.75ರಷ್ಟು ಲಂಚ ಪಡೆದಿದೆ. ಪಿಡಬ್ಲ್ಯೂಡಿ ಒಪ್ಪಂದ ಶೇ.40, ಮಠಕ್ಕೆ ಅನುದಾನ ಶೇ.40, ಉಪಕರಣಗಳ ಪೂರೈಕೆ ಶೇ.40 ಹಾಗೂ ಮೊಟ್ಟೆ ಪೂರೈಕೆಯಲ್ಲಿ ಶೇ.30ರಷ್ಟು ಸರ್ಕಾರ ಡೀಲ್ ನಡೆಸಿದೆ ಎಂದಿದೆ.
‘KPCC ಹಿಂದುಳಿದ ವರ್ಗಗಳ ವಿಭಾಗ’ದ ರಾಜ್ಯಾಧ್ಯಕ್ಷರಾಗಿ ‘ಮಧು ಬಂಗಾರಪ್ಪ’ ನೇಮಕ
ಇನ್ನೂ ನೇಮಕಾತಿಯಲ್ಲಿಯೂ ಡೀಲ್ ನಡೆಸಲಾಗಿದೆ ಎಂದು ಆರೋಪಿಸಿರುವಂತ ಕಾಂಗ್ರೆಸ್, ಬೆಸ್ಕಾಂನಲ್ಲಿನ ಹುದ್ದೆಗಳಿಗೆ 1 ಕೋಟಿ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ 50 ರಿಂದ 70 ಲಕ್ಷ ದರ ನಿಗದಿ ಪಡಿಸಿ, ಲಂಚ ಪಡೆದಿದೆ ಎಂದು ಹೇಳಿದೆ.
ಪಿಎಸ್ಐ ನೇಮಕಾತಿಯಲ್ಲಿ 80 ಲಕ್ಷ, ಉಪನ್ಯಾಸಕರ ಹುದ್ದೆಗಳ ನೇಮಕದಲ್ಲಿ 30 ರಿಂದ 50 ಲಕ್ಷ, ಎಫ್ ಡಿಎ 30 ಲಕ್ಷ, ಸಹಾಯಕ ಇಂಜಿನಿಯರ್ 30 ಲಕ್ಷ, ಬಮುಲ್ 25 ಲಕ್ಷ, ಪಿಡಬ್ಯೂಡಿ ಸಹಾಯಕ ಇಂಜಿನಿಯರ್ 10 ಲಕ್ಷ, ಪೊಲೀಸ್ ಪೇದೆ ನೇಮಕಾತಿಯಲ್ಲಿ 8 ಲಕ್ಷ ಡೀಲ್ ನಡೆಸಿದೆ ಎಂದು ಪಟ್ಟಿಯಲ್ಲಿ ತಿಳಿಸಿದೆ.
ಇದಷ್ಟೇ ಅಲ್ಲದೇ ವರ್ಗಾವಣೆ ಪ್ರಕ್ರಿಯೆಯಲ್ಲಿಯೂ ಲಂಚಾವತಾರ ನಡೆದಿದೆ. ಸಬ್ ರಿಜಿಸ್ಟ್ರಾರ್ ವರ್ಗಾವಣೆಗೆ 50 ಲಕ್ಷದಿಂದ 5 ಕೋಟಿ, ಪಿಎಸ್ಐ ವರ್ಗಾವಣೆಗೆ 10 ಲಕ್ಷದಿಂದ 1 ಕೋಟಿ, ಇಂಜಿನಿಯರ್ 5 ಲಕ್ಷದಿಂದ 5 ಕೋಟಿ ಲಂಚವನ್ನು ಪಡೆದು ವರ್ಗಾವಣೆ ಮಾಡಿಸಿಕೊಟ್ಟಿದೆ ಎಂದಿದೆ.
3 ವರ್ಷಗಳಲ್ಲಿ ಬಿಜೆಪಿ ಲೂಟಿ ಮಾಡಿದ ನಿಮ್ಮ ಹಣ 15,00,00,00,00,000 ಆಗಿದೆ. ಇದು ಟೆಂಡರ್ ಹಗರಣ, ಆಹಾರ ಕಿಟ್, ಪಿಎಸ್ಐ ಹಗರಣ, ಬಿಟ್ ಕಾಯಿನ್ ಹಗರಣ ಸೇರಿದಂತೆ ವಿವಿಧ ಹಗರಣಗಳ ಹಣವಾಗಿದೆ ಎಂದು ಹೇಳಿದೆ.