ಬೆಂಗಳೂರು : ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ಕುಟುಂಬಕ್ಕೆ ಕರ್ನಾಟಕ ಸರ್ಕಾರದಿಂದ 15 ಲಕ್ಷ ರೂಪಾಯಿ ಪರಿಹಾರ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿದಕ್ಕೆ ಅವರು ಪ್ರತಿನಿಧಿಸುವ ವಯನಾಡು ಲೋಕಸಭಾ ಕ್ಷೇತ್ರದ ವ್ಯಕ್ತಿಗೆ ಪರಿಹಾರ ನೀಡುವುದು ಸರಿಯೇ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.
ಕರ್ನಾಟಕ ಸರ್ಕಾರ, ರಾಜ್ಯದ ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಅವಮಾನಕರ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.ಇದೀಗ ಅರಣ್ಯ ಸಚಿವ ಈಶ್ವರ ಕಂಡ್ರೆ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಕೇರಳದಲ್ಲಿ ವ್ಯಕ್ತಿಯನ್ನು ಕೊಂದಂತಹ ಆನೆಯು ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಸೆರೆಹಿಡಿಯಲಾಗಿತ್ತು. ಸ್ಥಳೀಯರು ಯಾರೇ ಇಲ್ಲಿರುವುದು ಬೇಡ ಎಂದಿದಕ್ಕೆ ಬಂಡಿಪುರ ಅರಣ್ಯಕ್ಕೆ ಬಿಡಲಾಗಿತ್ತು. ಆ ಆನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಈ ವೇಳೆ ಆನೆ ಗಡಿ ದಾಟಿ ಕೇರಳಕ್ಕೆ ಹೋಗಿದೆ ಈ ವೇಳೆ ಅಲ್ಲಿ ವ್ಯಕ್ತಿಯು ಈ ಹಣೆಯ ಕಾಲ್ತುಳಿಟಕ್ಕೆ ಬಲಿಯಾಗಿದ್ದಾನೆ.
ಉದ್ಯೋಗವಾರ್ತೆ: ರಾಜ್ಯ ಸರ್ಕಾರದಿಂದ ಶೀಘ್ರವೇ 1000 ‘ಗ್ರಾಮ ಆಡಳಿತ ಅಧಿಕಾರಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಆ ವ್ಯಕ್ತಿಯ ಪರಿವಾರದ ಪರಿಸ್ಥಿತಿ ಏನಿದೆ ನೋಡಿದ್ದೀರಾ? ವಿಧವೆ ಮಹಿಳೆ, ಆತನ ಮಕ್ಕಳ ಬಗ್ಗೆ ಮಾನವೀಯತೆ ಇರಬಾರದಾ? ದಯೆ ಇರಬಾರದಾ? ಬಿಜೆಪಿಯವರು ಇಷ್ಟು ಅಮಾನವೀಯವಾಗಿ ವರ್ತನೆ ಮಾಡ್ಬೇಕಾ? ಪ್ರತಿಯೊಂದಕ್ಕೂ ರಾಜಕೀಯ ಮಾಡ್ಬೇಕಾ?ಸಾವಿನಲ್ಲೂ ರಾಜಕೀಯನಾ? ಜನರ ಹೆಣದ ರಾಶಿಯ ಮೇಲೆ ರಾಜಕೀಯ ಮಾಡುವಂತವರು ಈ ರೀತಿ ವಿಚಾರ ಮಾಡ್ತಾರೆ. ಇದು ಸರಿಯಾದ ಭಾವನೆ ಅಲ್ಲ ಎಂದು ಈಶ್ವರ್ ಖಂಡ್ರೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯಗಳು ಸುಭದ್ರವಾಗಿದ್ದರೆ ಮಾತ್ರ ದೇಶ ಸುಭದ್ರ. : ಸಿ.ಎಂ ಸಿದ್ದರಾಮಯ್ಯ