ಪುತ್ತೂರು : ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ಮನೆ ಕಟ್ಟಿಸಿ ಕೊಡುತ್ತದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
BIG NEWS: ಆ.6ರವರೆಗೆ ‘ದಕ್ಷಿಣ ಕನ್ನಡ ಜಿಲ್ಲೆ’ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ‘ನಿಷೇಧಾಜ್ಞೆ ಜಾರಿ’
ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಿ ಪ್ರವೀಣ್ ಈ ಭಾಗದಲ್ಲಿ ಬೆಳೆಯುತ್ತಿದ್ದ ನಾಯಕ. ಪ್ರವೀಣ್ನನ್ನು ಕಳೆದುಕೊಂಡದ್ದು ತುಂಬಲಾರದ ನಷ್ಟವಾಗಿದೆ. ಈ ರೀತಿಯ ಸಾವು ಮರುಕಳಿಸದಂತೆ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ಯುವ ಮೋರ್ಚಾ 15 ಲಕ್ಷ ರೂ. ನೀಡುತ್ತದೆ. ಕುಟುಂಬಕ್ಕೆ ಬಿಜೆಪಿ ಮನೆ ಕಟ್ಟಿಸಿ ಕೊಡುತ್ತದೆ. ಪಕ್ಷ 25 ಲಕ್ಷ ರೂ. ನೀಡಿದೆ. ಸಮಸ್ತ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಇಸ್ಲಾಮೀ ಜಿಹಾದ್ನ್ನು ಮೂಲದಿಂದ ಉಚ್ಚಾಟನೆ ಮಾಡೋದಕ್ಕೆ ನಾವು ಬದ್ಧ ಎಂದು ಭರವಸೆ ಕೊಟ್ಟರು.
BIG NEWS: ಆ.6ರವರೆಗೆ ‘ದಕ್ಷಿಣ ಕನ್ನಡ ಜಿಲ್ಲೆ’ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ‘ನಿಷೇಧಾಜ್ಞೆ ಜಾರಿ’
ಪ್ರವೀಣ್ ಸಾವು ಆಗಬಾರದಿತ್ತು. ಪ್ರತಿ ಬಾರಿ ಕಾರ್ಯಕರ್ತರನ್ನು ಬೀಳ್ಕೊಟ್ಟಾಗಲೂ ಈ ಮಾತು ಹೇಳುತ್ತೇವೆ. ಈ ಬಾರಿ ಇಡೀ ರಾಜ್ಯ, ದೇಶ ಎಚ್ಚೆತ್ತಿದೆ. ಈಗಾಗಲೇ ಇಬ್ಬರ ಬಂಧನವಾಗಿದೆ. ಪ್ರವೀಣ್ ಅವರ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯ ಮಗನೇ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಇದು ಅತ್ಯಂತ ಬೇಸರ ಸಂಗತಿಯಾಗಿದೆ ಎಂದರು.
BIG NEWS: ಆ.6ರವರೆಗೆ ‘ದಕ್ಷಿಣ ಕನ್ನಡ ಜಿಲ್ಲೆ’ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ‘ನಿಷೇಧಾಜ್ಞೆ ಜಾರಿ’
ಜಿಹಾದಿ ಮನಸ್ಥಿತಿ ಯಾವ ಮಟ್ಟದಲ್ಲಿದೆ ಅನ್ನೋದು ಗೊತ್ತಾಗುತ್ತೆ. ಬಿಜೆಪಿಯ ಕಾರ್ಯಕರ್ತರು ಧೃತಿಗೆಡಬೇಡಿ. ನಾರಾಯಣ ಗುರು, ಶಿವಾಜಿಯ ಕ್ಷಾತ್ರ ರಕ್ತ ನಮ್ಮಲ್ಲಿದೆ. ಬಿಜೆಪಿ ಕಾರ್ಯಕರ್ತರ ಸಿಟ್ಟು ಕಾಂಗ್ರೆಸ್, ಜೆಡಿಎಸ್ಗೆ ಲಾಭವಾಗುತ್ತೆ ಎಂದು ಕೆಕೇ ಹಾಕುತ್ತಿದ್ದಾರೆ. ನಮ್ಮ ಕಾರ್ಯಕರ್ತರ ರೋಷದಿಂದ ನಮಗೆ ನಷ್ಟವಾಗಲ್ಲ. ನಮ್ಮ ಕಾರ್ಯಕರ್ತರು ಸಿದ್ಧಾಂತ ಬಿಡೋದಿಲ್ಲ ನಮ್ಮ ನಿಷ್ಟೆ ಪ್ರಶ್ನಾತೀತವಾಗಿದೆ. ಸರ್ಕಾರ ಎಲ್ಲ ರೀತಿಯ ಕ್ರಮಕೈಗೊಳ್ಳುತ್ತೆ. ಮೂಲಭೂತವಾದಿ ಸಿದ್ಧಾಂತದ ವಿರುದ್ಧ ಎಚ್ಚೆತ್ತು ಕೆಲಸ ಮಾಡುತ್ತೇವೆ ಎಂದು ಹೇಳಿದರು.