ಬೆಂಗಳೂರು : ಕಳೆದ ವರ್ಷ ಕಾಂಗ್ರೆಸ್ ಸರ್ಕಾರ 136 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದ ತಕ್ಷಣ ಭರವಸೆ ನೀಡಿದಂತೆ 5 ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿತ್ತು. ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದರಿಂದ ಬಿಜೆಪಿ ನಾಯಕರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ನನ್ನ ಅಧಿಕಾರದಿಂದ ತೆಗೆಯಬೇಕು ಅಂತಿರೋದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇಂದು ಅವರು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಚರಕ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ತಾರತಮ್ಯ ಹೋಗಲಾಡಿಸಲು ಗ್ಯಾರಂಟಿ ಯೋಜನೆ ತಂದಿದ್ದೇವೆ. ಬಿಜೆಪಿಯವರಿಗೆ ಇದನ್ನು ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ಬಿಜೆಪಿಗರು ವಿಲಿ ವಿಲಿ ಅಂತ ಒದ್ದಾಡುತ್ತಿದ್ದಾರೆ ಎಂದರು.
ಬಿಜೆಪಿಯವರು ಹಿಟ್ಲರ್ ವಂಶದವರು. ನಾವು ಗ್ಯಾರೆಂಟಿಗಳಿಗೆ ಖರ್ಚು ಮಾಡಿದಷ್ಟು ಬಿಜೆಪಿ ಮಾಡಿದೆಯಾ? ಅದಕ್ಕೆ ಹೇಗಾದರೂ ಮಾಡಿ ನನ್ನ ತೆಗೆಯಬೇಕು ಅಂತಿರೋದು ಎಂದು ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಹಿಟ್ಲರ್ ಕಾಲದ ಒಬ್ಬ ಮಂತ್ರಿ ಗೋಬೆಲ್ ಅಂತ ಇದ್ದ. ಅವಂದು ಬರೀ ಸುಳ್ಳು ಹೇಳುವುದೇ ಕೆಲಸ. ಬಿಜೆಪಿಯವರು ಸುಳ್ಳನ್ನೇ ಸತ್ಯ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.