ಶಿವಮೊಗ್ಗ : ಅಯ್ಯೋ ದೆಹಲಿಯಲ್ಲಿ ಜನವರಿ 22ರಂದು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಹ್ವಾನವನ್ನು ತಿರಸ್ಕರಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ ಈ ಒಂದು ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಸರ್ಕಾರದ 5ನೇ ಗ್ಯಾರಂಟಿ ಯೋಜನೆಯದ ಯುವನಿಧಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ತೆರಳುವ ಮುನ್ನ ವಿಮಾ ಶಿವಮೊಗ್ಗ ಜಿಲ್ಲೆಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾವು ಕೂಡ ಶ್ರೀರಾಮ ಭಕ್ತರು ಆದರೆ ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಿಸಿ ರಾಜಕೀಯ ಮಾಡೋದಕ್ಕೆ ಹೊರಟಿದ್ದಾರೆ.
ನಾವು ಧಾರ್ಮಿಕ ವಿಷಯಗಳಲ್ಲಿ ರಾಜಕೀಯ ವಿರೋಧಿಸುತ್ತಿವೆ ಹೊರತು ಶ್ರೀ ರಾಮನನ್ನು ವಿರೋಧಿಸಿಲ್ಲ.ನಾನು ಕೂಡ ಶ್ರೀರಾಮನ ಭಕ್ತ ಆದ್ದರಿಂದ ನಾನು ಹೋಗಿ ನೋಡಿಕೊಂಡು ಬರುತ್ತೇನೆ 22 ರಂದು ರಾಜ್ಯದಲ್ಲಿ ನಮ್ಮ ಎಲ್ಲ ಕಾರ್ಯಕರ್ತರು ಎಲ್ಲ ಶ್ರೀ ರಾಮನ ಮಂದಿರಕ್ಕೆ ಪೂಜೆ ಸಲ್ಲಿಸುತ್ತಾರೆ. ಬಿಜೆಪಿಯವರು ಕೇವಲ ರಾಜಕೀಯ ಮಾಡುವವರು ಎಂದು ವಾಗ್ದಾಳಿ ನಡೆಸಿದರು.
ನಮ್ಮ ಐದನೇ ಗ್ಯಾರಂಟಿ ಯುವ ನಿಧಿ ಇದನ್ನ ನಿರುದ್ಯೋಗ ಪದವಿಧರರಿಗೇ ನಿರುದ್ಯೋಗಿ ಹೋಲ್ಡರ್ಸ್ ಗೆ ಪದವೀಧರರಿಗೆ 3000 ಡಿಪ್ಲೋಮೋ ಹೋಲ್ಡರ್ಗೆ ಒಂದುವರೆ ಸಾವಿರ ರೂಪಾಯಿ ತಿಂಗಳಿಗೆ ಎರಡು ವರ್ಷದವರೆಗೆ ಕೊಡುತ್ತೇವೆ.ಈ ಭತ್ತೆ ಕೊಡುವುದರ ಜೊತೆಗೆ ಅವರಿಗೆ ಕೌಶಲ್ಯ ತರಬೇತಿ ಕೂಡ ನೀಡುತ್ತೇವೆ. ಎರಡು ವರ್ಷದಲ್ಲಿ ಅವರಿಗೆ ಕೆಲಸ ಸಿಕ್ಕರೆ ಅವರಿಗೆ ಕೊಡುವುದಿಲ್ಲ. ಸರ್ಕಾರಿ ಸೇವೆ ಸಲ್ಲಿಸಿರಬಹುದು ಅಥವಾ ಸ್ವಯಂ ಉದ್ಯೋಗ ಮಾಡುವುದು ಎರಡು ವರ್ಷದಲ್ಲಿ ಕೆಲಸ ಸಿಕ್ಕರೆ ಅವರಿಗೆ ಕೊಡುವುದಿಲ್ಲ ಒಂದು ವೇಳೆ ಸಿಗದಿದ್ದರೆ ಎರಡು ವರ್ಷದ ಪೂರ್ಣಾವಧಿ ಕೊಡುತ್ತೇವೆ.
ಇವತ್ತು ಉದ್ಯೋಗ ಸಿಗಬೇಕಾದರೆ ಯಾವ ರೀತಿ ಡಿಮ್ಯಾಂಡ್ ಇದೆ ಆ ತರಬೇತಿ ಕೂಡ ಕೊಡುತ್ತೇವೆ ತರಬೇತಿಯೂ ಎಷ್ಟು ಅವಧಿಯವರಿಗೆ ಇರುತ್ತದೆ ಎಂದು ಇಲಾಖೆಗೆ ಸಂಬಂಧಿಸಿದಾಗಿದೆ. ಗ್ಯಾರಂಟಿ ಯೋಜನೆ ನಾವು ಕೊಡುತ್ತಿರುವದ್ರಿಂದ ಬಿಜೆಪಿಗೆ ಹೊಟ್ಟೆ ಉರಿ ಶುರುವಾಗಿದೆ. ಒಂದು ಕೋಟಿ 18 ಲಕ್ಷ ಮಹಿಳಾ ಯಜಮಾನಿಯರಿಗೆ ತಿಂಗಳಿಗೆ 2000 ಕೊಡುತ್ತಿದ್ದೇವೆ.ಆಮೇಲೆ ಅವರು ಹೇಳೋದನ್ನ ಕೇಳಬೇಡಿ ನಾನು ಹೇಳಿದ್ದನ್ನು ಕೇಳಬೇಡಿ ವೆರಿಫೈ ಮಾಡಿ.130 ಕೋಟಿ ಎಲ್ಲಾ ಜಾತಿಯ ಮಹಿಳೆಯರು ಧರ್ಮದವರು ಉಚಿತವಾಗಿ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡಿರುವುದು ಸುಳ್ಳ ಎಂದು ಪ್ರಶ್ನಿಸಿದರು.
200 ಯೂನಿಟ್ ವರೆಗೆ ಫ್ರೀಯಾಗಿ ವಿದ್ಯುತ್ ಕೊಡುತ್ತಿರುವುದು ಸುಳ್ಳ? ಒಂದು ಕೋಟಿ ಐವತ್ತೊಂದು ಲಕ್ಷ ಜನರಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದ್ದೇವೆ. ಅನ್ನಭಾಗ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ 120 ರೂಪಾಯಿ ಕೊಡುತ್ತಿರುವುದು ಸುಳ್ಳ?ಈ ಯೋಜನೆಗಳು ಚುನಾವಣೆ ಗೋಸ್ಕರ ಮಾಡಿರುವುದಲ್ಲ.ವೋಟ್ಗೋಸ್ಕರ ಮಾಡಿದ್ದು ಅಲ್ಲ ಇದು ಮಾಡಿರುವುದು ಬಡವರಿಗೆ ಮಧ್ಯಮ ವರ್ಗದವರಿಗೆ ಎಂದು ತಿಳಿಸಿದರು.
ಆರ್ಥಿಕವಾಗಿ ಸಮಾಜಕವಾಗಿ ಶಕ್ತಿ ತುಂಬಬೇಕು ಅವರು ಮುಖ್ಯವಾಹಿನಿಗೆ ಬರಬೇಕಂತ ಮಾಡಿದ್ದೇವೆ. ಒಂದು ಕುಟುಂಬಕ್ಕೆ ಸುಮಾರು ನಾಲ್ಕರಿಂದ ಐದು ಸಾವಿರ ರೂಪಾಯಿ ತಿಂಗಳಿಗೆ ನಗದು ಹಣ ಸೇರುತ್ತಿದೆ. ವರ್ಷಕ್ಕೆ 48ರಿಂದ 50 ಸಾವಿರ ರೂಪಾಯಿ ಒಂದು ಕುಟುಂಬಕ್ಕೆ ಸೇರುತ್ತಿದೆ ಎಂದು ಅವ್ರು ತಿಳಿಸಿದರು.
ಬೆಲೆ ಏರಿಕೆಯಾಗಿದೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ,ಆಹಾರ ಪದಾರ್ಥಗಳ ಬೆಲೆ ಕೂಡ ಏರಿಕೆಯಾಗಿದೆ. ಇದಕ್ಕೆಲ್ಲ ಬಡವರಿಗೆ ಶಕ್ತಿ ಬೇಕಲ್ಲ? ಬಡವರಿಗೆ ಕೊಂಡುಕೊಳ್ಳುವ ಶಕ್ತಿ ಬೇಕಲ್ಲ ಆದ ಕಾರಣ ಇಂತಹ ಯೋಜನೆಗಳನ್ನು ನಾವು ಬಡವರಿಗೆ ಹಾಗೂ ಮಧ್ಯಮ ವರ್ಗಕ್ಕೆ ಜಾರಿಗೆ ಮಾಡಿದ್ದೇವೆ ಎಂದರು.
21ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಲ್ಲಾ ಕಾರ್ಯಕರ್ತರು ಮಂಗಳೂರಲ್ಲಿ ಬಂದು ಭಾಗವಹಿಸಬೇಕು ಎಲ್ಲಾ ರಾಜ್ಯದ ಎಲ್ಲ ಕಾರ್ಯಕರ್ತರು ಚಿಕ್ಕವರು ದೊಡ್ಡವರು ಎಲ್ಲರೂ ಮಂಗಳೂರಲ್ಲಿ ಸ್ವಂತ ಇಚ್ಛೆಯಿಂದ ಆಗಮಿಸಬೇಕು ಎಂದು ಡಿಕೆ ಶಿವಕುಮಾರ್ ತಿಳಿಸಿದರು..