ತೆಲಂಗಾಣ: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)ಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ರಾಹುಲ್ ಗಾಂಧಿ(Rahul Gandhi) ವಾಗ್ದಾಳಿ ನಡೆಸಿದ್ದಾರೆ.
ನಮಗೆ ಬಿಜೆಪಿ ಮತ್ತು ಟಿಆರ್ಎಸ್ ಒಂದೇ ಎಂದು ನಾನು ಇಲ್ಲಿ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಇವು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ ಮತ್ತು ಹಣದ ರಾಜಕೀಯದಲ್ಲಿ ತೊಡಗಿದೆ. ಟಿಆರ್ಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕುದುರೆ ವ್ಯಾಪಾರ ಮಾಡುತ್ತಿದ್ದು, ಸರ್ಕಾರಗಳನ್ನು ಉರುಳಿಸುತ್ತಿವೆ. ಅವರು ಶಾಸಕರನ್ನು ಖರೀದಿಸುವ ಮೂಲಕ ಹಣದ ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಪ್ರಮುಖವಾಗಿ, ಬಿಜೆಪಿ ಶಾಸಕರನ್ನು ಹಣ ಮತ್ತು ಗುತ್ತಿಗೆಯ ಆಮಿಷವೊಡ್ಡುವ ಮೂಲಕ ಬೇಟೆಯಾಡಲು ಪ್ರಯತ್ನಿಸುತ್ತಿದೆ ಎಂದು ಟಿಆರ್ಎಸ್ ಆರೋಪಿಸಿದೆ. ಇದರಲ್ಲಿ ಬಿಜೆಪಿಯಿಂದ ಬೇಟೆಯಾಡುವ ಪ್ರಯತ್ನದ ಬಗ್ಗೆ ಟಿಆರ್ಎಸ್ ಶಾಸಕರಿಂದ ಮಾಹಿತಿ ಪಡೆದ ನಂತರ ಸೈಬರಾಬಾದ್ ಪೊಲೀಸರು ಬುಧವಾರ ಸಂಜೆ ರಂಗಾ ರೆಡ್ಡಿಯ ಫಾರ್ಮ್ಹೌಸ್ನಲ್ಲಿ ಮೂವರನ್ನು ಬಂಧಿಸಿದ್ದಾರೆ. ಇದನ್ನು ಬಿಜೆಪಿ ಮಾಡಿದೆ ಎಂದು ಮುಖಂಡರು ಆರೋಪಿಸಿದ್ದಾರೆ.
ಆದರೆ, ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಸೈಬರಾಬಾದ್ ಪೊಲೀಸರ ಮನವಿಯನ್ನು ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನ್ಯಾಯಾಲಯ ತಿರಸ್ಕರಿಸಿದೆ. ಈ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಕೋರಿ ಬಿಜೆಪಿ ತೆಲಂಗಾಣ ಹೈಕೋರ್ಟ್ಗೆ ಮೊರೆ ಹೋಗಿದೆ.
BIGG NEWS : ಧಾರವಾಡ ಶಾಲಾ, ಕಾಲೇಜುಗಳಿಗೆ ಬಣ್ಣದರ್ಪಣೆ ಅಭಿಯಾನ : ನಾಳೆ ಸಚಿವ ಪ್ರಲ್ಹಾದ ಜೋಶಿ ಚಾಲನೆ
SHOCKING NEWS: ರಾಜಸ್ಥಾನ ಸರ್ಕಾರಿ ಆಸ್ಪತ್ರೆಯ ಎನ್ಐಸಿಯುನಲ್ಲಿ ವಾರ್ಮರ್ ಹೆಚ್ಚು ಬಿಸಿಯಾಗಿ ನವಜಾತ ಶಿಶುಗಳು ಸಾವು
ಜರ್ಮನ್: ಟೇಕಾಫ್ ಆಗ್ಬೇಕಿದ್ದ ʻಲುಫ್ಥಾನ್ಸʼ ವಿಮಾನದ ಲ್ಯಾಂಡಿಂಗ್ ಗೇರ್ ಬೇಯಲ್ಲಿ ಶವ ಪತ್ತೆ… ಮುಂದುವರೆದ ತನಿಖೆ
BIGG NEWS : ಧಾರವಾಡ ಶಾಲಾ, ಕಾಲೇಜುಗಳಿಗೆ ಬಣ್ಣದರ್ಪಣೆ ಅಭಿಯಾನ : ನಾಳೆ ಸಚಿವ ಪ್ರಲ್ಹಾದ ಜೋಶಿ ಚಾಲನೆ