ವಿಜಯಪುರ : ಸಿದ್ದರಾಮಯ್ಯ ಇರುವವರೆಗೂ ನಮ್ಮನ್ನು ಯಾರಿಂದಲೂ ಏನೂ ಮಾಡಲಾಗದು ಎಂಬ ಧೈರ್ಯ ಮುಸ್ಲಿಮರಿಗೆ ಬಂದಿದೆ. ಇದನ್ನೆಲ್ಲ ವಿರೋಧಿಸಿ ಹೋರಾಟ ಮಾಡುವಲ್ಲಿ ಬಿಜೆಪಿಯೂ ವಿಫಲವಾಗಿದೆ. ಈ ಮೊದಲೇ ಸರಿಯಾಗಿ ಹೋರಾಟ ಮಾಡಿಕೊಂಡು ಬಂದಿದ್ದರೆ ಇದೆಲ್ಲಾ ಹೇಗೆ ಆಗುತ್ತಿತ್ತು. ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಅಡ್ಜೆಸ್ಟ್ಮೆಂಟ್ ಗಿರಾಕಿ ಎಂದು ಶಾಸಕ ಬಸನಗೌಡ ಪಾಟೀಲ್ ವಾಗ್ದಾಳಿ ನಡೆಸಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ನಮ್ಮವರು ಕೂಡ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಹಿಂದೆ ಕೆಜೆ ಹಳ್ಳಿ ಡಿಜೆ ಹಳ್ಳಿ, ಹುಬ್ಬಳ್ಳಿ ಗಲಾಟೆಗಳ ಸಂದರ್ಭಗಳಲ್ಲಿ ನಾಲ್ಕಾರು ಎನ್ಕೌಂಟತರ್ ಮಾಡಿದ್ದರೆ ಸರಿಯಾಗಿರುತ್ತಿತ್ತು. ಇಂತಹ ಘಟನೆಗಳಲ್ಲಿ ನಮ್ಮವರು ದೊಡ್ಡದೇನೂ ಮಾಡಿಲ್ಲ. ನಮ್ಮವರು ಮಾಡಿದ ತಪ್ಪಿನಿಂದಲೇ ಹಿಂದೂ ಜನರು ಬೇಜಾರಾದರು. ಹಾಗಾಗಿ ಕೆಟ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. 136 ಸ್ಥಾನಗಳು ಬರಲು ನಮ್ಮ ಮೇಲಿನ ಹಿಂದುಗಳ ಬೇಸರವೇ ಪ್ರಮುಖ ಕಾರಣ ಎಂದರು.
ಸಾಮಾನ್ಯ ಶಿಕ್ಷಣ ಕಾಯ್ದೆ ಮದರಸಾಗಳಿಗೆ ಅನ್ವಯವಾಗಬೇಕು. ಅಲ್ಲಿ ರಾಷ್ಟ್ರಗೀತೆ ಹಾಡಿ ಗಣಿತ, ವಿಜ್ಞಾನ. ಸಮಾಜದಂತಹ ವಿಷಯಗಳ ಬೋಧನೆ ಆಗಬೇಕು. ಮದರಸಾಗಳಲ್ಲಿ ಇಂದಿನ ವಿಜ್ಞಾನ ಒಪ್ಪಲ್ಲ, ಖುರಾನ್ ಮಾತ್ರ ಒಪ್ಪುತ್ತಾರೆ. ಸಿದ್ದರಾಮಯ್ಯ ಕಂಪ್ಯೂಟರ್ ಕೊಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಕಂಪ್ಯೂಟರ್ ತಗೊಂಡು ಅವರು ದೇಶ ವಿರೋಧ ಚಟುವಟಿಕೆ ಮಾಡುತ್ತಾರೆ. ವಿಶ್ವ ವಿರೋಧಿ ಚಟುವಟಿಕೆಗಳ ಉನ್ನತೀಕರಣಕ್ಕೆ ಅವಕಾಶ ನೀಡಿದಂತಾಗಿದೆ ಎಂದರು.
ನನ್ನ ಬಿಟ್ಟು ಬೇರೆ ಯಾರು ಅನ್ನಕೋಮಿನವರ ಬಗ್ಗೆ ಮಾತನಾಡಲ್ಲ. ಪಾಕಿಸ್ತಾನ ಹಿಂದುಗಳ ಬಗ್ಗೆ ಮಾತನಾಡುವುದಿದ್ದರೆ ವಿರೋಧ ಪಕ್ಷದ ನಾಯಕರು ನನಗೆ ಮಾತನಾಡು ಎನ್ನುತ್ತಾರೆ.ಲವ್ ಜಿಹಾದ್ ಮಾಡಬೇಕೆಂಬುದನ್ನು ಕಲಿಸುವವರಿಗೆ ಸಿದ್ದರಾಮಯ್ಯ ಹಣ ನೀಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರದಿಂದ ಅನ್ಯಕೋಮಿನವರಿಗೆ ಶಕ್ತಿ ಬಂದಾಗಿದೆ. ಈ ಕುರಿತು ಸದನದಲ್ಲಿ ಮಾತನಾಡಿ ಜನಪರ ಹೋರಾಟ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದರು.