ಬೆಂಗಳೂರು : ಇತ್ತೀಚಿಗೆ ಮಂಗಳೂರಿಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡಿದ್ದರು. ಈ ವಿಷಯದ ಕುರಿತಾಗಿ ಬಿಜೆಪಿ ನಾಯಕರು ಕಿಡಿ ಕಾರಿದ್ದರು. ಇದಕ್ಕೆ ತಿರುಗೆಟು ನೀಡಿದ ಸಚಿವ ದಿನೇಶ್ ಗುಂಡೂರಾವ್ ಅವರು ಬಿಜೆಪಿಯವರು ಡೆಂಗ್ಯೂ ಸೊಳ್ಳೆಗಿಂತಲೂ ವೇಗವಾಗಿ ಸುಳ್ಳುಗಳನ್ನು ಹರಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಕೆಲಸ ಇಲ್ಲ. ಸ್ವಿಮಿಂಗ್ ಮಾಡುವುದು ಒಂದು ಉತ್ತಮ ಹವ್ಯಾಸ. ವಾಕಿಂಗ್, ಜಾಗಿಂಗ್, ರೀತಿ ಸ್ವಿಮ್ಮಿಂಗ್ ಕೂಡ ಆರೋಗ್ಯಕರ ಹವ್ಯಾಸವಾಗಿದೆ. ಬಿಜೆಪಿಯವರ ರೀತಿ ರೆಸಾರ್ಟಿಗೆ ಹೋಗಿ ಸ್ವಿಮ್ ಮಾಡಿದ್ದಲ್ಲ. ಅದು ಬಿಜೆಪಿ ಅವರಿಗೆ ಬರಿ ಮೋಜು ಮಸ್ತಿ ಅಂತ ಮಾತನಾಡಿ ಅಭ್ಯಾಸವಿದೆ ಎಂದರು.
ನಿನ್ನೆ ನೆಲಮಂಗಲ ಬಳಿ ಜನರಿಗೆ ಬಾಡೂಟದ ಜೊತೆ ಮದ್ಯ ಹಂಚಿದ್ದಾರಲ್ಲ. ನಾನೇನಾದ್ರೂ ಆ ರೀತಿ ಮಾಡಿದ್ದೀನಾ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.ಕಾರ್ಪೊರೇಷನ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಸ್ವಿಮ್ ಮಾಡಿದೆ ತಪ್ಪೇನಿದೆ? ನಂತರ ಆಸ್ಪತ್ರೆಗಳಿಗೆ ಭೇಟಿ ನೀಡಿ ನನ್ನ ಕೆಲಸವನ್ನು ಮಾಡಿದ್ದೇನೆ. ಬಿಜೆಪಿ ನಾಯಕರು ಸುಮ್ಮನೆ ಸುಳ್ಳುಗಳನ್ನು ಹಬ್ಬಿಸಿದ್ದಾರೆ.ಅವರು ಡೆಂಗಿ ಸೊಳ್ಳೆ ಗಿಂತ ವೇಗವಾಗಿ ಸುಳ್ಳು ಹರಡಿಸುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರ ವಾಗ್ದಾಳಿ ನಡೆಸಿದರು.