ಬೆಂಗಳೂರು : ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪದ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಪೇ-ಸಿಎಂ ಪೋಸ್ಟರ್ ಅಂಟಿಸುವ ಮೂಲಕ ವಿನೂತನ ಅಭಿಯಾನ ಶುರು ಮಾಡಿದೆ. ಇದೀಗ ಹೊಸ ವಿವಾದ ಸೃಷ್ಟಿಯಾಗಿದೆ.
ಈಗಾಗಲೇ ಆನ್ ಲೈನ್ ಪೇಮೆಂಟ್ ಗೆ ಪೇಟಿಎಂ ಮೊಬೈಲ್ ಅಪ್ಲಿಕೇಷನ್ ಇದಡೆ. ಅದೇ ರೀತಿ ಕಾಂಗ್ರೆಸ್ ವತಿಯಿಂದ ಪೇ ಸಿಎಂ ಅಭಿಯಾನ ಶುರುವಾಗಿದೆ. ಅದರಲ್ಲಿ ಕ್ಯುಆರ್ ಕೋಡ್ ಮುದ್ರಿಸಿ ಅದರ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಫೋಟೋ ಅಂಟಿಸಲಾಗಿದೆ.
ಇದೀಗ ಕಾಂಗ್ರೆಸ್ ನಡೆಗೆ ಬಿಜೆಪ ಆಕ್ರೋಶವ ವ್ಯಕ್ತಪಡಿಸಿದೆ. ಈ ಬಗ್ಗೆ ವಿಧಾನಪರಿಷತ್ ಸದಸ್ಯ ಎನ್ .ರವಿಕುಮಾರ್ ಪ್ರತಿಕ್ರಿಯೆ ನೀಡಿ, ರಾಹುಲ್ ಗಾಂಧಿ ಭಾರತ್ ಜೋಡೋ ಮಾಡುತ್ತಾ ಇದ್ದಾರೆ. ಮೊದಲು ಅವರಿಗೆ ಪೇ ಮಾಡಲಿ. ಸಿದ್ದರಾಮಯ್ಯ ಕಾರು, ವಾಚ್ ಬೇಕು ಅವರಿಗೆ ಪೇ ಮಾಡಲಿ. ರಮೇಶ್ ಕುಮಾರ್ ನೂರು ನಾಲ್ಕು ತಲೆಮಾರಿಗೆ ಆಉವಷ್ಟು ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ ಎಂದು ಟೀಕಿಸಿದ್ದಾರೆ. ಘನತೆ ಇಟ್ಟುಕೊಂಡು ಸಿಎಂ ವಿರುದ್ಧ ಟೀಕೆ ಮಾಡಬೇಕು ಎಂದು ರವಿಕುಮಾರ್ ಗರಂ ಆಗಿದ್ದಾರೆ. ಭ್ರಷ್ಟಾಚಾರ ಎಂಬ ಪರ ಕಾಂಗ್ರೆಸ್ ನಿಂದ ಹುಟ್ಟಿದೆ. ಕಾಂಗ್ರೆಸ್ ಇರುವವರಿಗೆ ಭ್ರಷ್ಟಾಚಾರ ನಿಲ್ಲುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.