ಗದಗ : ಬಿಜೆಪಿ ಪಕ್ಷ ಈ ಮಟ್ಟಕ್ಕೆ ಬೆಳೆಯಲು ಅಡ್ವಾಣಿ ಸಹ ಕಾರಣ. ಎಲ್.ಕೆ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದು ಸಂತೋಷ.ಆದರೆ ಅವರನ್ನು ಮೂಲೆಗುಂಪು ಮಾಡಿದ್ದರು. ಈಗಲಾದರೂ ಬಿಜೆಪಿಯವರಿಗೆ ಬುದ್ಧಿ ಬಂದು ಅವರಿಗೆ ಭಾರತ ರತ್ನ ಘೋಷಣೆ ಮಾಡಿದ್ದು ಸಂತೋಷ ಎಂದರು.
ನಗರದ ಹೊಸ ಬಸ್ ನಿಲ್ದಾಣದಲ್ಲಿ ನೂತನ 50 ಬಸ್ಗಳ ಉದ್ಘಾಟನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಹ್ಲಾದ್ ಜೋಷಿ ಹಾಗೂ ಸಂತೋಷ್ ಅವರು ಸೇರಿ ಯಡಿಯೂರಪ್ಪಗೆ ಏನು ಮಾಡಿದ್ರು? ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿದವರು ಯಾರು? ಇವರೆ ತಾನೇ ಇಳಿಸಿದ್ದು? ವಿಜಯೇಂದ್ರ ಏನು ಆಗಬಾರದು ಎಂದು ಮೊನ್ನೆಯೂ ಏನೋ ಪ್ರಯತ್ನ ಮಾಡಿದರು. ಆದರೂ ಏನು ನಡಿಯಲಿಲ್ಲ. ಚುನಾವಣೆ ಬಂತಲ್ವಾ, ಅದಕ್ಕೆ ಯಡಿಯೂರಪ್ಪ ಮುಖ ನೋಡಿ ಮತ ಹಾಕುತ್ತಾರೆ ಎಂದು ಸುಮ್ಮನಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನು ದಕ್ಷಿಣ ಭಾರತ ಪ್ರತ್ಯೇಕ ಕೂಗು ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ನಮ್ಮ ದೇಶದಲ್ಲಿ 560 ರಾಜ್ಯಗಳಿದ್ದವು. ಮೊದಲು ನಮ್ಮ ದೇಶನೇ ಇರಲಿಲ್ಲ. ಬ್ರಿಟಿಷರು ಆಳುವ ಸಂದರ್ಭದಲ್ಲಿ 560 ರಾಜ್ಯಗಳಿದ್ದವು. ಆಗ ಎಲ್ಲಾ ರಾಜ್ಯಗಳ ಭೂಪ್ರದೇಶ ಭಾರತ, ಇಂಡಿಯಾ ಎಂದು ಮಾಡಿದ್ದು ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ನವರು ಭಾಗವಹಿಸಿದ್ದರು. ಬಿಜೆಪಿ ಪೂರ್ವಜರು ವಿಹೆಚ್ಪಿ, ಆರ್ಎಸ್ಎಸ್ ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಅಖಂಡ ಭಾರತ ಕಟ್ಟಿದ್ದೇ ಕಾಂಗ್ರೆಸ್ ಪಕ್ಷ. ಭಾರತ ಒಡೆಯುವ ಪ್ರಶ್ನೆಯೇ ಇಲ್ಲ.
ಡಿಕೆ ಸುರೇಶ್ ಆ ರೀತಿ ಹೇಳಬೇಕು ಅಂದರೆ ಅವರಿಗೆ ಎಷ್ಟು ಕೋಪ ಬಂದಿರಬಾರದು? ದಕ್ಷಿಣ ಭಾರತ ರಾಜ್ಯಗಳಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ? 2 ಲಕ್ಷ ಕೋಟಿ ಸಹ ಕೊಟ್ಟಿಲ್ಲ. ನಮ್ಮ ರಾಜ್ಯದಿಂದ ನಾಲ್ಕೂವರೆ ಲಕ್ಷ ಕೋಟಿ ಟ್ಯಾಕ್ಸ್ ಹೋಗುತ್ತೆ. ಅದರಲ್ಲಿ ನಮಗೆ ಕೊಡುವುದು ಕೇವಲ 50 ಸಾವಿರ ಕೋಟಿ ಮಾತ್ರ. ದೇಶ ಅಖಂಡವಾಗಿ ಇರಬೇಕು.
ಆದರೆ ನಮಗೆ ಕೊಡುವಂತಹದ್ದು ಕೊಡಬೇಕಲ್ಲಾ? ನಮ್ಮ ರಾಜ್ಯಕ್ಕೆ ಅನುದಾನ ಕಡಿಮೆ ಕೊಡುತ್ತಿರುವುದರಿಂದ ಬಿಜೆಪಿಯವರಿಗೆ ಒಳಒಳಗೆ ಖುಷಿ. ರಾಜ್ಯದಲ್ಲಿ 123 ತಾಲೂಕು ಬರಗಾಲ ಎಂದು ಘೋಷಣೆ ಮಾಡಿದೆ. ಪ್ರಧಾನಿಗಳು ಬಿಡಿಗಾಸು ಸಹ ಕೊಟ್ಟಿಲ್ಲ. ಕೇಂದ್ರ ಸರ್ಕಾರದ ಗೈಡ್ಲೈನ್ಸ್ ಪ್ರಕಾರ ಒಂದು ರೂ. ಸಹ ಬಿಡುಗಡೆ ಮಾಡಿಲ್ಲ. ಇದು ಮಲತಾಯಿ ಧೋರಣೆ ಅಲ್ವಾ? ಈ ಕೋಪಕ್ಕೆ ಅವರು ಹೇಳಿದ್ದಾರೆ ಅಷ್ಟೇ ಎಂದರು.