ನವದೆಹಲಿ: ದೇಶದಲ್ಲಿ ಭಾರತ್ ಜೋಡೋ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ(Rahul Gandhi) ಅವರನ್ನು ಟೀಕಿಸುವ ಅನಿಮೇಷನ್ ವಿಡಿಯೋವನ್ನು ಬಿಜೆಪಿ(BJP) ನಿನ್ನೆ ಬಿಡುಗಡೆ ಮಾಡಿದೆ.
ಬಿಜೆಪಿಯು ಟ್ವಿಟ್ಟರ್ನಲ್ಲಿ ರಾಹುಲ್ ಗಾಂಧಿಯ ಎರಡು ನಿಮಿಷಗಳ ಅವಧಿಯ ಅನಿಮೇಷನ್ ವಿಡಿಯೋವನ್ನು ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ, ಗೋವಾದಲ್ಲಿ ಕಾಂಗ್ರೆಸ್ ಶಾಸಕರು ಪಕ್ಷ ತೊರೆಯುವುದು, ಗುಲಾಂ ನಬಿ ಆಜಾದ್ ಅವರ ರಾಜೀನಾಮೆ, ರಾಜಸ್ಥಾನದಲ್ಲಿ ಆಂತರಿಕ ಕಲಹದ ಬಗ್ಗೆ ತಿಳಿಸಲಾಗಿದೆ. ವಿಡಿಯೋ ಕೊನೆಯಲ್ಲಿ ಸೋನಿಯಾ ಗಾಂಧಿಯವರು ಎಂಟ್ರಿ ಕೊಡುತ್ತಾರೆ. ಆಗ “ಮಮ್ಮಿ, ಸಂಕಟಗಳು ಏಕೆ ಕೊನೆಗೊಳ್ಳುವುದಿಲ್ಲ? ಖತಮ್…ಟಾಟಾ…ಗುಡ್ ಬೈ ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ಈ ವಿಡಿಯೋ ಶೇರ್ ಮಾಡಿದೆ.
मम्मी ये दुःख खतम काहे नहीं होता है?
खतम…टाटा…गुडबाय! pic.twitter.com/J4tFqQgPOQ
— BJP (@BJP4India) October 16, 2022
ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನಗಳ ಉಸ್ತುವಾರಿ ಜೈರಾಮ್ ರಮೇಶ್, “ಭಾರತ್ ಜೋಡೋ ಯಾತ್ರೆಯ ಯಶಸ್ಸನ್ನು ಎದುರಿಸಲು ಬಿಜೆಪಿ ಬಳಸಿದ ಹೊಸ ತಂತ್ರ ಇದು ಎಂದಿದ್ದಾರೆ.
WATCH VIDEO : ಇಸ್ತಾನ್ಬುಲ್ನಲ್ಲಿ ಹೊತ್ತಿ ಉರಿದ 24 ಅಂತಸ್ತಿನ ಕಟ್ಟಡ, ಭಯಾನಕ ವಿಡಿಯೋ ವೈರಲ್
BIGG NEWS : ಮುರುಘಾ ಮಠದ ಉಸ್ತುವಾರಿ ಪೀಠಾಧಿಪತಿಯಾಗಿ ದಾವಣಗೆರೆ ವಿರಕ್ತಮಠದ `ಬಸವಪ್ರಭು ಶ್ರೀ’ ನೇಮಕ