ಮಂಡ್ಯ: ಬಿಜೆಪಿ ಅವರಿಗೆ ಗಲಭೆ ಎಬ್ಬಿಸಲು ರೌಡಿಗಳು ಬೇಕು. ಅದೇ ಕಾರಣಕ್ಕೆ ರೌಡಿ ಶೀಟರ್ಗಳನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
BIGG NEWS: ಮಹಾರಾಷ್ಟ್ರ ಸಚಿವರನ್ನು ಬೆಳಗಾವಿಗೆ ಪ್ರವೇಶಿಸದಂತೆ ನಿಷೇಧಿಸಬೇಕು; ಕರವೇ ಆಗ್ರಹ
ನಗರದಲ್ಲಿ ಮಾತನಾಡಿದ ಅವರು, ಇಬ್ಬರು ಎಂಪಿಗಳು ಬಿಜೆಪಿಯವರು ಸೈಲೆಂಟ್ ಸುನೀಲ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವನು ಸರ್ಚ್ ವಾರೆಂಟ್ನಲ್ಲಿದ್ದಾನೆ. ಇಂಥವರ ಜೊತೆ ಓಡಾಡಿ ಸಮರ್ಥನೆ ಮಾಡಿಕೊಳ್ಳುತ್ತಾರೆ. ಬಿಜೆಪಿಯವರಿಗೆ ಇದು ಅಂಟು ರೋಗ ಆಗಿದೆ. ಅದರಲ್ಲೂ ಬಸವರಾಜ ಬೊಮ್ಮಾಯಿಗೆ ಜಾಸ್ತಿಯಾಗಿದೆ. ಏನೇ ಹೇಳಿದರು ಹಿಂದಿನ ಸರ್ಕಾರದಲ್ಲಿ ಆಗಿಲ್ವಾ ಅಂತಾರೆ. ನಿಮ್ಮ ತಪ್ಪುಗಳನ್ನು ಹೇಳಿ ಜನ ನಿಮಗೆ ಅಧಿಕಾರ ಕೊಟ್ಟಿಲ್ಲ. ನೀವು ಅನೈತಿಕವಾಗಿ ಬಂದಿದ್ದೀರಾ ಎಂದು ಕಿಡಿಕಾರಿದ್ರು.
BIGG NEWS: ಮಹಾರಾಷ್ಟ್ರ ಸಚಿವರನ್ನು ಬೆಳಗಾವಿಗೆ ಪ್ರವೇಶಿಸದಂತೆ ನಿಷೇಧಿಸಬೇಕು; ಕರವೇ ಆಗ್ರಹ
ನಮ್ಮನ್ನು ಬಿಡಿ ನೀವು ಏನು ಮಾಡಿದ್ದೀರಾ ಅಂತಾ ಹೇಳಿ ರೌಡಿ ಜೊತೆ ವೇದಿಕೆ ಹಂಚಿಕೊಂಡಿದ್ದು ಸರಿನಾ? ಫೈಟರ್ ರವಿ ಆಹಾ ಹೆಸರು ನೋಡು ಫೈಟರ್ ರವಿ ಅಂತೆ ಆರ್ಎಸ್ಎಸ್ ಬಿಜೆಪಿ ಇಂತಹದ್ದೇ ಕೆಲಸ ಮಾಡುತ್ತದೆ. ಅಶಾಂತಿ ನಿರ್ಮಾಣ ಮಾಡಲು ಇಂತವರು ಅವರಿಗೆ ಬೇಕು ಸಮಾಜದಲ್ಲಿ ಅಶಾಂತಿ ಮೂಡಿಸಲು ಇಂತವರನ್ನು ಸೇರಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರು ಜೈಲಿಗೆ ಹೋಗಿ ಬಂದಿದ್ದಾರೆ ಅಂತಾರೆ.