ಹೈದರಾಬಾದ್: ಮಾಜಿ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಅವರು ತೆಲಂಗಾಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ತಮಿಳುನಾಡಿನಲ್ಲಿ ದೇವಸ್ಥಾನದ ಆನೆಗೆ ಮಾವುತರಿಂದಲೇ ಹಿಗ್ಗಾಮುಗ್ಗಾ ಥಳಿತ | ವೀಡಿಯೊ ವೈರಲ್
39 ರ ಹರೆಯದ ಭಾರತ ವನಿತಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಮಾದರಿಗಳಿಗೆ ಈ ವರ್ಷದ ಜೂನ್ 8 ರಂದು ನಿವೃತ್ತಿ ಘೋಷಿಸಿದ್ದರು.
ತಮಿಳುನಾಡಿನಲ್ಲಿ ದೇವಸ್ಥಾನದ ಆನೆಗೆ ಮಾವುತರಿಂದಲೇ ಹಿಗ್ಗಾಮುಗ್ಗಾ ಥಳಿತ | ವೀಡಿಯೊ ವೈರಲ್
ಅವಿವಾಹಿತೆಯಾಗಿರುವ ಮಿಥಾಲಿ ರಾಜ್, ಎರಡನೇ ಇನ್ನಿಂಗ್ಸ್ ಆರಂಭಿಸುವ ಕುರಿತು ನಿವೃತ್ತಿ ಘೋಷಿಸುವ ವೇಳೆ ಹೇಳಿಕೊಂಡಿದ್ದರು. ಬಿಜೆಪಿ ಸೇರ್ಪಡೆಯಾಗಿ ರಾಜಕಾರಣದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಾರಾ ಎನ್ನುವ ಕುತೂಹಲ ಮೂಡಿದೆ.
ತಮಿಳುನಾಡಿನಲ್ಲಿ ದೇವಸ್ಥಾನದ ಆನೆಗೆ ಮಾವುತರಿಂದಲೇ ಹಿಗ್ಗಾಮುಗ್ಗಾ ಥಳಿತ | ವೀಡಿಯೊ ವೈರಲ್
ಪಕ್ಷದ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು ವಾರಂಗಲ್ನ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಕೈಗೊಂಡಿರುವ ಮೂರನೇ ಹಂತದ ‘ಪ್ರಜಾ ಸಂಗ್ರಾಮ ಯಾತ್ರೆ’ಯ ಸಮಾರೋಪಕ್ಕಾಗಿ ಸಂಜೆ ಹನಮಕೊಂಡ ಕಲಾ ಕಾಲೇಜಿನಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದ್ದು, ಅದರಲ್ಲಿ ನಡ್ಡಾ ಅವರು ಭಾಗಿಯಾಗಲಿದ್ದಾರೆ. ಸಂಜೆ ತೆಲುಗು ಚಲನಚಿತ್ರ ನಟ ನಿತಿನ್ ಮತ್ತು ರಾಜ್ಯದ ಇತರ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದಾರೆ.