ಹಾಸನ: ವರ್ಷಕೊಮ್ಮೆ ಓಪನ್ ಆಗುವ ಹಾಸನಾಂಬೆ ದರ್ಶನಕ್ಕೆ ಇಂದು ಕೊನೆಯ ದಿನವಾಗಿದೆ. ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ದೇಗುಲದ ಬಳಿ ಗಿಳಿ ಶಾಸ್ತ್ರ ಕೇಳಿದ್ದಾರೆ.
BIGG NEWS: ಪಟಾಕಿ ತಂದ ಆಪತ್ತು; ಪಟಾಕಿ ಸಿಡಿತದಿಂದ 78 ಮಕ್ಕಳಿಗೆ ಗಾಯ
ಹಾಸನಾಂಬೆಯ ದರ್ಶನ ಪಡೆದು ವಾಪಸ್ ಬರೋ ವೇಳೆ ಬಿಜೆಪಿ ನಾಯಕ ಭವಿಷ್ಯ ಕೇಳಿದ್ದಾರೆ. ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಸಾಗಿ ಬಂದು ಸಿ.ಟಿ. ರವಿ ಇಂದು ಬೆಳಗ್ಗೆ ಶಾಸ್ತ್ರ ಕೇಳಿದರು. ಬಳಿಕ ಸಿಟಿ ರವಿಯವರಿಗೆ ಭವಿಷ್ಯ ಹೇಳಿದ ಜ್ಯೋತಿಷಿ ನಿಮ್ಮ ಕೈ ರೇಖೆ ಚೆನ್ನಾಗಿದೆ. ಎಲ್ಲೇ ಹೋದರೂ ಅನ್ನ ಸಿಗುತ್ತದೆ. ಬಟ್ಟೆ, ಅನ್ನಕ್ಕೆ ನಿಮಗೆ ತೊಂದರೆಯಿಲ್ಲ.
BIGG NEWS: ಪಟಾಕಿ ತಂದ ಆಪತ್ತು; ಪಟಾಕಿ ಸಿಡಿತದಿಂದ 78 ಮಕ್ಕಳಿಗೆ ಗಾಯ
ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಶಾಸ್ತ್ರ ಹೇಳಿದ ಆತ. ನಿಮ್ಮ ಆರೋಗ್ಯ ಹಾಗೂ ನೀವು ಮಾಡುವ ಕೆಲಸದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ. ದಾನ ಧರ್ಮ ಮಾಡೋದ್ರಲ್ಲಿ ಉದಾರತೆ ಬೇಡ, ತಿಥಿ ಊಟ ಮಾಡೋದಕ್ಕೆ ಹೋಗಬೇಡಿ. ಹೀಗೆ ಶಾಸ್ತ್ರ ನೋಡಿ ಸಾಲು ಸಾಲು ವಿಚಾರಗಳನ್ನ ಆ ವ್ಯಕ್ತಿ ಹೇಳಿದರು.ʼ
ಇದೇ ವೇಳೆ ಮಾತನಾಡಿದ ಅವರು, ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಷಿ ಸುನಕ್ ಆಯ್ಕೆ ವಿಚಾರ ಪ್ರಸ್ತಾಪಿಸಿ, ಯಾವ ಜನ ಭಾರತೀಯರಿಗೆ ಆಳುವ ಯೋಗ್ಯತೆ ಇಲ್ಲ ಅಂದಿದ್ರೋ ಇಂದು ಅವರ ದೇಶವನ್ನೇ ಆಳುವ ಯೋಗ್ಯತೆಯೂ ಇದೆ ಅನ್ನೋದನ್ನು ರಿಷಿ ಸುನಕ್ ಮೂಲಕ ತೋರಿಸಿದ್ದೇವೆ; ಸವಾಲುಗಳನ್ನು ಎದುರಿಸಿ ನಮ್ಮ ಸಾಮರ್ಥ್ಯ ಏನು ಅನ್ನೋದನ್ನ ತೋರಿಸಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.