ಬೆಂಗಳೂರು: ನಗರದಲ್ಲಿ ಮಳೆಯಿಂದ ಪ್ರವಾಹ ಭೀತಿ ಎದುರಾಗಿದ್ದು ಈ ನಡುವೆಯೇ ಸಂಸದ ತೇಜಸ್ವಿ ಸೂರ್ಯ ದೋಸೆ ತಿಂದ ಸಾರ್ವಜನಿಕರ ಚರ್ಚೆಗೆ ಒಳಗಾಗಿದ್ದಕ್ಕೆ ಇಂದು ಅವರು ಸ್ಪಷ್ಟನೆ ನೀಡಿದ್ದಾರೆ. ಅಂದು ನಾನು ಯಾವುದೋ ಹೊಟೇಲ್ ಉದ್ಘಾಟನೆಗೆ ಹೋಗಿದ್ದನ್ನು ಟ್ರೋಲ್ ಮಾಡಿದ್ದು ಸರಿಯಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BIGG NEWS: ಬಾಗಲಕೋಟೆ ಜನರಿಗೆ ಮಳೆ ಕಂಟಕ; ನೂರಕ್ಕೂ ಹೆಚ್ಚು ಮನೆ ಜಲಾವೃತ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಅನಾವಶ್ಯಕವಾಗಿ ವಿಷಯಗಳನ್ನು ತೆಗೆದುಕೊಂಡು ಟೀಕೆ ಮಾಡುತ್ತಾರೆ. ನನ್ನ ಕ್ಷೇತ್ರದ ಬೊಮ್ಮನಹಳ್ಳಿ ಎರಡು ಕಡೆ ಮಳೆಯಿಂದ ಸಮಸ್ಯೆ ಆಗಿದ್ದು ಬಿಟ್ಟರೆ ಬೇರೆ ಕಡೆಯೂ ಆಗಿಲ್ಲ. ಹೀಗಾಗಿ ಮಳೆ ಪ್ರವಾಹ ನಿರ್ವಹಣೆಗೆ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ಬದ್ಧವಾಗಿದೆ ಎಂದರು.