ಕೊಪ್ಪಳ : ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಕೊಪ್ಪಳದಲ್ಲಿ ಬಿಜೆಪಿ ಕಚೇರಿಯಲ್ಲಿ ಕರಡಿ ಸಂಗಣ್ಣ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕೊಪ್ಪಳದ ಬಿಜೆಪಿ ಕಚೇರಿಯಲ್ಲಿ ಬೆಂಬಲಿಗರಿಂದ ಕಲ್ಲುತೂರಾಟ ನಡೆದಿರುವ ಘಟನೆ ನಡೆದಿದೆ.
ಬಿಜೆಪಿಯ ಮೂವರು ಸಂಸದರು ಕಾಂಗ್ರೆಸ್ ಸೇರ್ಪಡೆ: ಹೊಸ ಬಾಂಬ್ ಸಿಡಿಸಿದ DCM ಡಿ.ಕೆ ಶಿವಕುಮಾರ್
ಕೊಪ್ಪಳ ಬಿಜೆಪಿ ಕಚೇರಿಯ ಗಾಜು ಪುಡಿ ಪುಡಿಯಾಗಿದ್ದು, ಅಲ್ಲದೆ ಹಲವು ಕಛೇರಿ ಪೀಠೋಪಕರಣಗಳೆಲ್ಲವೂ ಪುಡಿಪುಡಿಯಾಗಿವೆ. ಸಂಸದ ಕರಡಿ ಸಂಗಣ್ಣ ಟಿಕೆಟ್ ಕೈತಪ್ಪಿದ್ದಕ್ಕೆ ಇದೀಗ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕೊಪ್ಪಳದ ಬಿಜೆಪಿ ಕಚೇರಿಯಲ್ಲಿ ಕರಡಿ ಸಂಗಣ್ಣ ಬೆಂಬಲಿಗರಿಂದ ಈ ಘಟನೆ ನಡೆದಿದೆ.
2025-25ರ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇ.6.5ರಿಂದ ಶೇ.7ಕ್ಕೆ ಪರಿಷ್ಕರಿಸಿದ ಫಿಚ್
ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಟರು ಯಾವ ಮಾನದಂಡ ಇಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡಿದ್ದರೂ ಅದಕ್ಕೆ ನಾವು ತಲೆಬಾಗುತ್ತೇವೆ. ಯಾವ ಮಾನದಂಡದಲ್ಲಿ ನನಗೆ ಟಿಕೆಟ್ ತಪ್ಪಿದೆಯೋ ಗೊತ್ತಿಲ್ಲ. ಅದೆಲ್ಲ ವರಿಷ್ಠರಿಗೆ ಗೊತ್ತಿರುತ್ತದೆ ಇಡೀ ಜಗತ್ತು ಮೋದಿಯವರ ನಾಯಕತ್ವವನ್ನು ಮೆಚ್ಚಿಕೊಂಡಿರುವ ಹಿನ್ನೆಲೆಯಲ್ಲಿ ನಾವು ಕೂಡ ಮೋದಿ ಅವರ ನಾಯಕತ್ವವನ್ನು ಮೆಚ್ಚಿಕೊಂಡಿದ್ದೇವೆ.
BREAKING : ಬೆಂಗಳೂರಿನ ಹಾಡಹಾಗಲೇ ‘ಜುವೆಲ್ಲರೀ ಶಾಪ್’ ನಲ್ಲಿ ಗುಂಡಿನ ದಾಳಿ’ : ಇಬ್ಬರಿಗೆ ಗಾಯ
ನಾನು 1978ರಿಂದ ರಾಜಕಾರಣದಲ್ಲಿದ್ದೇನೆ.ಯಾವುದೇ ಸಮಾಜದಲ್ಲಿ ನಾನು ಬೆಂಬಲಿಸಿಲ್ಲ. ಎಲ್ಲ ಜನಾಂಗದವರ ಜೊತೆಗೆ ಇದ್ದೇನೆ ಒಂದು ಸಮಾಜದಲ್ಲಿ ನಾನು ಅವಲಂಬನೆಯಾಗಿಲ್ಲ. ಮೋದಿ ಅವರ ನಾಯಕತ್ವದಲ್ಲಿ ಈ ಲೋಕಸಭಾ ಚುನಾವಣೆಯನ್ನು ಎದುರುತ್ತೇವೆ ನನ್ನ ಬೆಂಬಲಿಗರಿಗೂ ಹಾಗೂ ಮುಖಂಡರಿಗೂ ಕಾರ್ಯಕರ್ತರಿಗೂ ಬೆಂಬಲಿಸಲು ತಿಳಿಸಿದ್ದೇನೆ ಎಂದು ತಿಳಿಸಿದರು.