ಬೆಂಗಳೂರು : ಕಾಮಗಾರಿ ಒಂದಕ್ಕೆ ಗುತ್ತಿಗೆದಾರನ ಬಳಿ 5ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಇಂದು ಬಿಜೆಪಿ ಶಾಸಕ ಚಂದ್ರು ಲಮಾಣಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ಗೆ ಚಂದ್ರು ಲಮಾಣಿ ರಾಜಕೀಯ ವಕೀಲರಿಂದ ಲಿಖಿತ ವಾದಾಂಶ ಸಲ್ಲಿಕೆ ಆಯಿತು. ಬಳಿಕ ಮಾರ್ಚ್ 11ಕ್ಕೆ ಜಾಮೀನು ಅರ್ಜಿ ಸಂಬಂಧ ಕೋರ್ಟ್ ಇದೆ ವೇಳೆ ಆದೇಶ ಕಾಯ್ದಿರಿಸಿತು.








