ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಂಧನದ ಭೀತಿ ಎದುರಾಗಿದೆ. ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ, ಬಿಗ್ ಶಾಕ್ ನೀಡಿದೆ.
ಬಿಕ್ಲು ಶಿವ ಕೊಲೆ ಕೇಸಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದಂತ ಹೈಕೋರ್ಟ್ ಪೀಠವು ವಿಚಾರಣೆ ನಡೆಸಿ, ವಜಾಗೊಳಿಸಿದೆ.
ಭೈರತಿ ಬಸವರಾಜ್, ಬಿಕ್ಲು ಶಿವ ಮಧ್ಯೆ ಮೊದಲೇ ವೈಮನಸ್ಸಿತ್ತು. ಫೆಬ್ರವರಿ.18, 2025ರಂದೇ ಜೀವ ಬೆದರಿಕೆ ಬಗ್ಗೆ ದೂರು ನೀಡಿದ್ದಾನೆ. ಬಿಎ ಬಸವರಾಜ್ ಗೆ ಜಗ್ಗ ಆಲಿಯಾಸ್ ಜಗದೀಶ್ ಪರಿಚಿತ. ಜಗ್ಗ ಆಲಿಯಾಸ್ ಜಗದೀಶ್ ಪರಿಚಿತನೆಂಬುದಕ್ಕೆ ಸಾಕ್ಷ್ಯಗಳಿವೆ. ಪೋಟೋ, ಸಿಡಿಆರ್, ಹಳೆಯ ದೂರಿನ ಬಗ್ಗೆ ತನಿಖೆ ಅಗತ್ಯವಿದೆ. ಆರೋಪಿಯ ವಿವರಣೆ ಪಡೆಯಲು ತನಿಖೆಗೆ ಒಳಪಡಿಸಬೇಕಿದೆ ಎಂಬುದಾಗಿ ಬಿಕ್ಲು ಶಿವ ಪರ ವಕೀಲರು ವಾದಿಸಿದ್ದರು.
ಇನ್ನೂ ತನಿಖೆ ಸ್ವರೂಪ ಹೇಗಿರಬೇಕೆಂಬುದನ್ನ ಆರೋಪಿ ತೀರ್ಮಾನಿಸಲಾಗದು. ಆರೋಪಿ ಶಾಸಕನಾಗಿದ್ದು, ರಾಜಕೀಯವಾಗಿ ಪ್ರಭಾವಿ. ಮೃತ ಮತ್ತು ಆತನ ತಾಯಿ ಇರುವ ಕ್ಷೇತ್ರದ ವಾಸಿಯಾಗಿದ್ದಾರೆ. ನಿರೀಕ್ಷಣಾ ಜಾಮೀನು ನೀಡಿದರೇ ನ್ಯಾಯಸಮ್ಮತ ತನಿಖೆಗೆ ಅಡ್ಡಿಯಾಗಲಿದೆ ಎಂಬುದಾಗಿ ವಾದಿಸಿದ್ದರು. ಈ ಹಿನ್ನಲೆಯಲ್ಲಿ ಬಿಕ್ಲು ಶಿವ ಕೊಲೆ ಕೇಸಲ್ಲಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದಂತ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬಿಜೆಪಿಗರ ಹೋರಾಟ ಪ್ರಚಾರಕ್ಕೆ, ಜನರ ಹಿತಕ್ಕಾಗಿ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
ಫೆ.12ರಂದು ಧಾರವಾಡ ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut








