ಕೊಪ್ಪಳ : ಬಿಜೆಪಿ ಎಂದರೆ ಬಾಂಡ್ ಜನತಾ ಪಕ್ಷವಾಗಿದೆ ಎಂದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು ಬಿಜೆಪಿ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಬಂಧನ ಪ್ರಕರಣ : ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹೇಳಿದ್ದೇನು?
ಕಾರಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪ ಆರುವ ಮುಂಚೆ ಜೋರಾಗಿ ಉರಿಯುತ್ತದೆ. ಬಿಜೆಪಿಗರು ಬಾಂಡ್ ಖರೀದಿ ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಅವರಿಗೆ ನಾಚಿಕೆ ಆಗಬೇಕು. ಬಿಜೆಪಿಯವರಿಗೆ ಇದೀಗ ಆತಂಕ ಶುರುವಾಗಿದೆ ಎಂದು ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ರಾಣಿ ಚನ್ನಮ್ಮ ವಿವಿಯಿಂದ ‘ಬಿ.ಕಾಂ 5ನೇ ಸೆಮಿಸ್ಟರ್ ಪರೀಕ್ಷೆ’ ಮುಂದೂಡಿಕೆ
ವಿಪಕ್ಷದವರನ್ನು ಐಟಿಇಡಿ ಮೂಲಕ ಬಂಧಿಸುತ್ತಿದ್ದಾರೆ ಬಿಜೆಪಿಗರೂ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ.ಬಿಜೆಪಿಯವರಿಗೆ ಏನಾಗಿದೆಯೋ ಗೊತ್ತಿಲ್ಲ. ಆತ್ಮವಿಶ್ವಾಸ ಹೆಚ್ಚಾಗಿದೆಯೋ ಕೊನೆಗಾಲ ಬಂದಿದೆಯೋ ಗೊತ್ತಿಲ್ಲ. ಎಂದು ಕಿಡಿ ಕಾರಿದ್ದಾರೆ.