ಕೊಪ್ಪಳ : ಇನ್ನೇನು ಎರಡೇ ದಿನಗಳಲ್ಲಿ ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆ ಆರಂಭವಾಗಲಿದ್ದು ಇದರ ಮಧ್ಯ ಕುರುಬ ಸಮುದಾಯವನ್ನು ಎಸ್ ಟಿ ಪಟ್ಟಿಗೆ ಸೇರಿಸುವುದರ ಕುರಿತು ಕೂಡ ಭಾರಿ ಚರ್ಚೆ ನಡೆಯುತ್ತಿದೆ. ಇದೇ ವಿಚಾರವಾಗಿ ಕೊಪ್ಪಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿಗೆ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದು,ಮೋದಿ ಮುಂದೆ ಮಾತನಾಡುವ ತಾಕತ್ ಇಲ್ಲದ ಬಿಜೆಪಿ ನಾಯಕರು ಇಲ್ಲಿ ಜಾತಿ ಧರ್ಮದ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಜಾತಿ ಮಸೀದಿ ಕಂಡರೆ ತುಂಬಾ ಪ್ರೀತಿ ಅಭಿವೃದ್ಧಿಯ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ಜಾತಿ ವಿಚಾರದಲ್ಲಿ ನಾವು ಹೇಳಿದ್ದು ಅಲ್ಲ. ಆಯೋಗ ಮೊದಲು ವರದಿ ಕೊಡಲಿ ಎಲ್ಲಾ ಸಮುದಾಯ ಸಭೆ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ. ಕ್ರಿಶ್ಚಿಯನ್ ಕುರುಬ ಅಂತ ನಾವು ಬರೆಸಿಲ್ಲ ಜನರೇ ಬರೆಸಿದ್ದಾರೆ. ಅದಕ್ಕೆ ನಾವು ಏನು ಮಾಡುವುದಕ್ಕೆ ಆಗುತ್ತದೆ ಎಂದು ಪ್ತಶ್ನಿಸಿದರು.
ಆ ರೀತಿ ಜಾತಿ ಕಾಲಂನಲ್ಲಿ ಏಕೆ ಬಳಸಿದ್ದೀರಿ ಅಂತ ಪ್ರಶ್ನೆ ಮಾಡಲು ನಾವು ಬಿಜೆಪಿಯವರಲ್ಲ. ಆಯೋಗ ಸ್ವತಂತ್ರ ಸಂಸ್ಥೆ ಅದರ ಮೇಲೆ ಒತ್ತಡ ಹೇರಲು ಬರಲ್ಲ. ಯಾರು ಮಧ್ಯಪ್ರವೇಶ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಧಾನಿ ಮೋದಿ ಮುಂದೆ ಮಾತನಾಡುವ ತಾಕತ್ತು ಬಿಜೆಪಿಯವರಿಗೆ ಇಲ್ಲ ಇಲ್ಲಿ ಮಸೀದಿ ಧರ್ಮದ ಬಗ್ಗೆ ಮಾತನಾಡುತ್ತಾರೆ ಜಾತಿಗಳ ಬಗ್ಗೆ ನಾವು ಚರ್ಚೆ ಮಾಡಬಾರದು ಎಂದು ತಿಳಿಸಿದರು.