ಮೈಸೂರು : ದೇಶಭಕ್ತರು ಅಂತ ಹೇಳಿಕೊಳ್ಳುವ ಹಕ್ಕು ಬಿಜೆಪಿಗರಿಗೆ ಇಲ್ಲ. ದೇಶಭಕ್ತರು ಅಂತ ಹೇಳಿಕೊಳ್ಳುವ ಹಕ್ಕು ಇರುವುದು ಕಾಂಗ್ರೆಸ್ ಗೆ ಮಾತ್ರ ಬಿಜೆಪಿಗರು ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದಾರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Lok Sabha Elections 2024: ಯಾವ ಲೋಕಸಭೆಯು ಗರಿಷ್ಠ ಸಂಖ್ಯೆಯ ಮುಸ್ಲಿಂ ಸಂಸದರನ್ನು ಆಯ್ಕೆ ಮಾಡಿದೆ?ಇಲ್ಲಿದೆ ಮಾಹಿತಿ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಳಲೇ ಬಳಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು,ದೇಶಭಕ್ತರು ಅಂತ ಹೇಳಿಕೊಳ್ಳುವ ಹಕ್ಕು ಬಿಜೆಪಿ ಅವರಿಗೆ ಇಲ್ಲ.ದೇಶಭಕ್ತರು ಅಂತ ಹೇಳಿಕೊಳ್ಳುವ ಹಕ್ಕು ಇರುವುದು ಕಾಂಗ್ರೆಸ್ ಗೆ ಮಾತ್ರ ಬಿಜೆಪಿಗರು ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದಾರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ, ವಿಧಾನಸಭಾ ಚುನಾವಣೆಗೆ ಸಮಯ ದೂರವಿಲ್ಲ ಎಂದ ಪ್ರಧಾನಿ ಮೋದಿ
ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್. ನರೇಂದ್ರ ಮೋದಿ ಅಡ್ವಾಣಿ ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿದ್ರಾ? 1926 ರಲ್ಲಿ ಆರ್ ಎಸ್ ಎಸ್ ಸ್ಥಾಪನೆಯಾಯಿತು.ಬಳಿಕ ಜನಸಂಘವೇ ಬಿಜೆಪಿ ಆಯ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೆ, ದೇಶಭಕ್ತರು ಅಂದುಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜೆಡಿಎಸ್ ಇಂದ ದೇಶಭಕ್ತಿಯ ಬಗ್ಗೆ ನಾವು ಕಲಿಯಬೇಕಾ? ಬಿಜೆಪಿ ಹಾಗು ಜೆಡಿಎಸ್ ಪಕ್ಷ ಗಳಿಗೆ ಯಾವುದೇ ಸಿದ್ಧಾಂತವಿಲ್ಲ.ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಎಲ್ಲರಿಗೂ ಸ್ವಾಗತಿಸುತ್ತೇನೆ ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಕಾಂಗ್ರೆಸ್ ಗೆ ಬಂದಿದ್ದಾರೆ. ಎಂದು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಸಿಎಂ ಸಿದ್ದರಾಮಯ್ಯ ಸ್ವಾಗತ ಕೋರಿದರು.