ಬೆಂಗಳೂರು : ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ವಿನಯ್ ಕುಲಕರ್ಣಿ ಹಾಗು ಚಂದ್ರಶೇಖರ್ ಇಂಡಿ ಜಾಮೀನು ರದ್ದತಿಗೆ ಸಿಬಿಐ ಅರ್ಜಿ ಸಲ್ಲಿಸಿದೆ. ಸಾಕ್ಷಿಗಳಿಗೆ ಹಣದ ಆಮಿಷ ಒಡ್ಡಿರುವುದರಿಂದ ಜಾಮೀನು ರದ್ಧತಿಗೆ ಇದೀಗ ಸಿಬಿಐ ಮನವಿ ಮಾಡಿದೆ ಎಂದು ತಿಳಿದುಬಂದಿದೆ.
ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ವಿಚಾರಣೆ ನಡೆಯಿತು. ಈ ಸಂಬಂಧ ಸಂಗ್ರಹಿಸಿದ ಸಾಕ್ಷ್ಯ ಪರಿಗಣಿಸಲು ಎಸ್ ಪಿ ಪಿ ಗಂಗಾಧರ ಶೆಟ್ಟಿ ಮನವಿ ಮಾಡಿದರು. ಸುಪ್ರೀಂ ಕೋರ್ಟ್ ನೀಡಿರುವ ಜಾಮೀನನ್ನು ಸೆಶನ್ ರದ್ದು ಪಡಿಸಬಹುದೇ? ಅರ್ಜಿ ವಿಚಾರಣಾ ಯೋಗ್ಯವೇ? ಎಂಬ ಬಗ್ಗೆ ವಾದ ಮಂಡಿಸಲು ಇದೆ ವೇಳೆ ಕೋರ್ಟ್ ಸೂಚನೆ ನೀಡಿತು.
ಬೆದರಿಕೆ ಇರುವುದರಿಂದ ಸಾಕ್ಷಿ ಹೇಳಲು ಸಾಕ್ಷಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜಾಮೀನು ರದ್ದು ಕೋರಿರುವ ಅರ್ಜಿ ವಿಚಾರಣೆಗೆ ಪರಿಗಣಿಸಲು ಎಸ್ ಪಿ ಪಿ ಮನವಿ ಮಾಡಿದರು. ತನ್ನದೇ 164 ಹೇಳಿಕೆ ವಿರುದ್ಧ ಎಸಿಪಿ ಶಿವಾನಂದ ಛಲವಾದಿ ಸಾಕ್ಷಿ ನುಡಿದಿದ್ದಾರೆ. ಸುಳ್ಳು ಸಾಕ್ಷಿ ಹೇಳಿದ್ದಾರೆಂದು ಪರಿಗಣಿಸಲು ಕೋರಿ ಸಿಬಿಐ ಅರ್ಜಿ ಸಲ್ಲಿಸಿದೆ ಇವೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆಯನ್ನು ನಾಳೆಗೆ ಮುಂದೂಡಿತು.
ಘಟನೆ ಹಿನ್ನೆಲೆ?
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 2016ರ ಜೂನ್ 15ರಂದು ಯೋಗೀಶ್‌ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದಾರೆ. ಬಸವರಾಜ ಮುತ್ತಗಿಯೇ ಹತ್ಯೆಯ ಪ್ರಮುಖ ಆರೋಪಿ. ಹತ್ಯೆ ನಡೆಸಲು ಬೆಂಗಳೂರಿನಿಂದ ಹುಡುಗರನ್ನು ಧಾರವಾಡಕ್ಕೆ ಕರೆಸಿಕೊಂಡಿದ್ದೇ ಬಸವರಾಜ ಮುತ್ತಗಿ ಎಂಬುದನ್ನು ಸಿಬಿಐ ಪ್ರತಿಪಾದಿಸಿದೆ. ಇನ್ನೂ ಐಶ್ವರ್ಯ ಗೌಡ ಕೂಡ ಹಲವರಿಗೆ ಚಿನ್ನ ವಂಚನೆ ಮಾಡಿರುವ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆ.