ಕಲಬುರಗಿ: . ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡಲು ಸಿದ್ದ ಎಂದಿದ್ದ ಬಿಜೆಪಿ ಮುಖಂಡ ನನ್ನು ಕೊನೆಗೂ ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅಂತ ತಿಳಿದು ಬಂದಿದ್ದು, ಮಣಿಕಂಠ ರಾಠೋಡ
ನಾವು ದೇಶ ಕಾಯುವ ಸೈನಿಕರಿದ್ದಂಗೆ. ಪ್ರಿಯಾಂಕ್ ಖರ್ಗೆ ನಮ್ಮ ಮೇಲೆ ಗುಂಡು ಹೊಡೆದರೂ ಎದುರಿಸಲು ಸಿದ್ಧ. ಹಾಗೆಯೇ ಅವರನ್ನು ಶೂಟ್ ಮಾಡಲೂ ಸಿದ್ಧ’ ಎಂದು ಮಣಿಕಂಠ ರಾಠೋಡ ವಿವಾದಿತ ಹೇಳಿಕೆ ನೀಡಿದ್ದ. ಈ ನಡುವೆ ಈ ಬಗ್ಗೆ ಪೋಲೀಸರು ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಬೃಹತ್ ಮಟ್ಟದಲ್ಲಿ ಜನತೆ ಕೂಡಲೇ ಆರೋಪಿಯನ್ನು ಬಂಧಿಸುವಂತೆ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿದ್ದರು, ಇದಲ್ಲದೇ ಇಂದು ನಗರದಲ್ಲಿ ಬರೋ ಸಿಎಂ ವಿರುದ್ದ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು. ಕೂಡಲೇ ಅಲರ್ಟ್ ಆದ ಕಲಬುರಗಿ ಪೊಲೀಸರು ಬ್ರಹ್ಮಪುರ ಠಾಣೆ ಪೋಲಿಸರು ಬಂಧಿಸಿದ್ದಾರೆ.